ಫ್ಲೊರಿಡಾ:ಮಗುವಿನಲ್ಲಿ ವ್ಯತ್ಯಾಸ ಕಂಡಾಗ ಅಥವಾ ದಂಪತಿ ನಡುವೆ ಏನೋ ಅನುಮಾನ ಹುಟ್ಟುಹಾಕಿದ ಸಂದರ್ಭದಲ್ಲಿ ಮಗುವಿನ ತಂದೆ ಯಾರು ಎಂದು ನೋಡಲು ಡಿಎನ್‌ಎ ಪರೀಕ್ಷೆಯ ಮೊರೆ ಹೋಗುವುದು ಸಾಮಾನ್ಯ.
ಆದರೆ ಇಲ್ಲೊಂದು ವಿಚಿತ್ರ ಪ್ರಕರಣದಲ್ಲಿ ತಾನು ಖರೀದಿ ಮಾಡಿರುವ ಆಡಿನ ಪಿತೃತ್ವ ಪರೀಕ್ಷೆಗೆ ಕೋರಿ ಮಹಿಳೆಯೊಬ್ಬರು ಕಾನೂನು ಸಮರ ಸಾರಿದ್ದಾರೆ!
ಇಂಥದ್ದೊಂದು ಘಟನೆ ನಡೆದಿರುವುದು ಫ್ಲೊರಿಡಾದಲ್ಲಿ. ಈಕೆಯ ಹೆಸರು ಕ್ರಿಸ್‌ ಹೆಡ್‌ಸ್ಟ್ರಾಮ್. ಈಕೆ ತನ್ನ ಮನೆಯ ಸಮೀಪ ಇರುವ ಹೀದರ್ ಡೇನರ್ ಎಂಬಾಕೆಯಿಂದ ಆಡಿನ ಮರಿಗಳನ್ನು ಖರೀದಿಸಿದ್ದಾಳೆ. ಆದರೆ ತಾನು ಆರ್ಡರ್‌ ಕೊಟ್ಟಿರುವ ತಳಿಯ ಮರಿಗಳು ಇವಲ್ಲ ಎಂಬ ಸಂದೇಹ ಆಕೆಗೆ ಹುಟ್ಟಿರುವ ಕಾರಣ, ಪಿತೃತ್ವ ಪರೀಕ್ಷೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಳೆ.ಅಷ್ಟಕ್ಕೂ ಆಗಿದ್ದೇನೆಂದರೆ, ಕಳೆದ ಡಿಸೆಂಬರ್‌ನಲ್ಲಿ ಕ್ರಿಸ್‌ ಐದು ನೈಜೀರಿಯನ್ ಕುಬ್ಜ ಆಡುಗಳಿಗೆ 900 ಡಾಲರ್‌ (ಸುಮಾರು 69 ಸಾವಿರ ರೂಪಾಯಿ) ಮುಂಗಡ ಹಣ ನೀಡಿದ್ದಾಳೆ. ಬೆಲ್ಲಾ, ಗಿಗಿ, ರೋಸಿ, ಆಪ್ ಜೆಲ್ಡಾ ಮತ್ತು ಮಾರ್ಗೊಟ್ ಯಾವುದೇ ತಳಿಗಳ ಕುಜ್ಬ ಆಡುಗಳು ತನಗೆ ಬೇಕು ಎಂದು ಈಕೆ ಕೋರಿದ್ದಾಳೆ.
ಇಲ್ಲಿಯ ನಿಯಮದ ಪ್ರಕಾರ ಈ ಎಲ್ಲಾ ತಳಿಗಳ ಆಡುಗಳನ್ನು ಅಮೆರಿಕನ್ ಡೈರಿ ಆಡಿನ ಸಂಘದಲ್ಲಿ ಮಾರಾಟಗಾರರು ನೋಂದಾಯಿಸಿಕೊಳ್ಳಬೇಕು. ಹೀಗೆ ನೋಂದಣಿ ಮಾಡಿಕೊಂಡರೆ ಮಾತ್ರ ಅದು ಅಧಿಕೃತ ಆಡು ಆಗುತ್ತದೆ ಮತ್ತು ಅದರ ಮೌಲ್ಯವೂ ಹೆಚ್ಚು ಇರುತ್ತದೆ.
ಇದನ್ನೂ ಓದಿ:ಮಹಿಳೆಯ ಕೈಕಾಲು ತುಂಡರಿಸಿ ಪೇಪರ್‌ನಲ್ಲಿ ಸುತ್ತಿ ಎಸೆದ ದುಷ್ಕರ್ಮಿಗಳು!
ಆದ್ದರಿಂದ 10 ವರ್ಷಗಳಿಂದ ಆಡಿನ ಮಾರಾಟ ಮಾಡುತ್ತಿರುವ ಡೇನರ್‌ ಯಾವ ಆಡುಗಳ ನೋಂದಣಿಯಾಗಿದೆ, ಯಾವುದರ ನೋಂದಣಿ ಆಗಿಲ್ಲ ಎಂಬ ಬಗ್ಗೆ ಗ್ರಾಹಕರಿಗೆ ವಿವರಣೆ ನೀಡುತ್ತಾ ಬಂದಿದ್ದಾಳೆ. ಆದರೆ ಈಗ ಖರೀದಿ ಮಾಡಿರುವ ಆಡಿನ ತಳಿಗಳ ಬಗ್ಗೆ ಕ್ರಿಸ್‌ಗೆ ಅನುಮಾನ ಶುರುವಾಗಿದೆ.
ನಂತರ ಅದರ ನೋಂದಣಿ ಆಗಿದೆಯೋ ಇಲ್ಲವೋ ಎಂಬುದನ್ನು ಡೇನರ್‌ ಬಳಿ ವಿಚಾರಿಸಿದಾಗ ಈಕೆ ಖರೀದಿ ಮಾಡಿರುವ ಮರಿ ಆಡುಗಳ ತಂದೆಯ ನೋಂದಣಿ ಆಗಿದೆಯೇ ವಿನಾ ಮರಿಗಳ ನೋಂದಣಿ ಆಗಿಲ್ಲ ಎಂಬ ಮಾಹಿತಿ ಬಂದಿದೆ. ಮರಿಗಳ ನೋಂದಣಿಗೆ ಅವರು ಕೋರಿದ್ದ ಅರ್ಜಿಯನ್ನು ಕೆಲವು ಕಾರಣಗಳಿಂದ ತಿರಸ್ಕರಿಸಲಾಗಿತ್ತು.ಆದ್ದರಿಂದ ಈಗ ಮರಿಗಳ ಡಿಎನ್‌ಎ ಪರೀಕ್ಷೆಗೆ ಕ್ರಿಸ್‌ ಮುಂದಾಗಿದ್ದಾರೆ. ತಂದೆ ಆಡು ಎಂದು ಕರೆಸಿಕೊಂಡಿರುವ ಆಡಿನ ಕೂದಲನ್ನು ಪರೀಕ್ಷೆಗೆ ಕಳಿಸಿಕೊಡುವಂತೆ ಕ್ರಿಸ್‌ ಡೇನರ್‌ಗೆ ಪತ್ರ ಬರೆದಿದ್ದಳು. ಆದರೆ ಡೇನರ್‌ ಸಂಪೂರ್ಣ ಹಣವನ್ನು ವಾಪಸ್‌ ಮಾಡುವುದಾಗಿ ಹೇಳಿದಳು.
ಇದಕ್ಕೆ ಒಪ್ಪದ ಕ್ರಿಸ್‌ ತನಗೆ ಅನ್ಯಾಯ ಮಾಡಲಾಗಿದ್ದು, ಮರಿಗಳ ತಂದೆ ಯಾರೆಂದು ಪರೀಕ್ಷೆ ಮಾಡಲೇಬೇಕು ಎಂದು ಕೋರ್ಟ್‌ ಮೊರೆ ಹೋಗಿದ್ದಾಳೆ!(ಏಜೆನ್ಸೀಸ್‌)
ಭಾರತೀಯ ಸೇನೆಯ ಏಟಿಗೆ ತತ್ತರಿಸುತ್ತಿದೆ ಉಗ್ರ ಪಡೆ: ಮತ್ತೆ ಐವರ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
