ಬೆಂಗಳೂರು:ಸಾಮಾನ್ಯ ಜನರ ದೈನಂದಿನ ಅಗತ್ಯಗಳನ್ನು ಪೂರೈಸುವ ಫಾಸ್ಟ್ ಮೂವಿಂಗ್ ಕನ್‌ಸ್ಯೂಮರ್ ಗೂಡ್ಸ್ (FMCG) ಗ್ರಾಮೀಣ ಭಾಗದಲ್ಲಿ ಅಕ್ಟೋಬರ್​​​​ನಲ್ಲಿ ಶೇ 8.6ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷದ ಇದೇ ಅಕ್ಟೋಬರ್ ಗೆ ಹೋಲಿಸಿದರೆ ಬ್ರಾಂಡೆಡ್ ಸರಕುಗಳನ್ನು ಹೊರತುಪಡಿಸಿ ಎಫ್‌ಎಂಸಿಜಿಯ ಮಾರಾಟವು ಶೇ.7 ರಷ್ಟು ಹೆಚ್ಚಾಗಿದೆ. ಆದರೆ ಬ್ರಾಂಡೆಡ್ ಸರಕುಗಳನ್ನು ಒಳಗೊಂಡಂತೆ ಎಫ್ಎಂಸಿಜಿ ಮಾರಾಟವು ಶೇ.4.8 ರಷ್ಟು ಕಡಿಮೆಯಾಗುತ್ತಿದೆ. ಇದು ಗ್ರಾಮೀಣ ಮಾರುಕಟ್ಟೆಯು ಹಲವು ತ್ರೈಮಾಸಿಕಗಳ ಬಳಿಕ ಚೇತರಿಸಿಕೊಳ್ಳುವ ಸೂಚನೆ ನೀಡುತ್ತಿದೆ. ಆದರೆ ನಗರ ಮಾರುಕಟ್ಟೆಯು ಸ್ಥಿರವಾದ ಬೆಳವಣಿಗೆ ದರವನ್ನು ಕಾಯ್ದುಕೊಂಡಿದೆ ಎಂದು ಬಿಝೋಮ್‌ ಹೇಳಿದೆ.
ಆದರೆ ಕಳೆದ ವರ್ಷ ಅಕ್ಟೋಬರ್‌ ಅವಧಿಗೆ ಹೋಲಿಸಿದರೆ ಗ್ರಾಮೀಣ ಹಾಗೂ ನಗರ ಭಾಗಗಳೆರಡರಲ್ಲೂ ಎಫ್‌ಎಂಸಿಜಿಯ ಮಾರಾಟವು (ಬ್ರಾಂಡೆಡ್ ಹಾಗೂ ಬ್ರಾಂಡೆಡ್ ಸರಕುಗಳನ್ನು ಹೊರತುಪಡಿಸಿ) ಶೇಕಡ 27 ರಷ್ಟು ಕಡಿಮೆಯಾಗಿದೆ. ಆದರೆ ಬ್ರಾಂಡೆಡ್ ಸರಕುಗಳನ್ನು ಹೊರತುಪಡಿಸಿ ಎಫ್‌ಎಂಸಿಜಿ ಗ್ರಾಮೀಣ ವಿಭಾಗಗಳಾದ್ಯಂತ ಶೇ.10.2ರಷ್ಟು ಏರಿಕೆಯಾಗುವುದರೊಂದಿಗೆ ಎರಡಂಕಿಯ ಬೆಳವಣಿಗೆ ಕಂಡುಬಂದಿದೆ ಮತ್ತು ನಗರ ಪ್ರದೇಶಗಳ ಎಫ್‌ಎಂಸಿಜಿ ಮಾರಾಟವು 1.6 ಪ್ರತಿಶತದಷ್ಟು ಹೆಚ್ಚಾಗಿದೆ.
ಆಹಾರ ಉತ್ಪನ್ನಗಳ ಮಾರಾಟವು ಕಳೆದ ವರ್ಷದಷ್ಟೇ ಶೇ 8.7ರಷ್ಟು ಇದ್ದು, ಈ ವರ್ಷದ ಎರಡನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 8.5ರಷ್ಟು ಏರಿಕೆ ಆಗಿದೆ. ಹಾಗೆ ತಂಪು ಪಾನೀಯಗಳ ಮಾರಾಟವು ಶೇ.16.3 ಏರಿಕೆ ಕಂಡಿದ್ದು, ಸಿಹಿ ಪದಾರ್ಥಗಳ ಮಾರಾಟದಲ್ಲಿ ಶೇ.27 ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ಕಂಡಿದೆ. ಹಣದುಬ್ಬರ ಕಡಿಮೆಯಾಗುವುದರ ಜೊತೆಗೆ ನಿರುದ್ಯೋಗ ಪ್ರಮಾಣ ಇಳಿಕೆಯಾಗುತ್ತಿರುವುದು ಮತ್ತು ಎಲ್‌ಪಿಜಿ ದರ ಕಡಿಮೆ ಆಗಿರುವುದು ಜನರನ್ನು ಖರೀದಿ ಮಾಡುವುದರತ್ತ ಗಮನ ಹರಿಸುವಂತೆ ಮಾಡಿದೆ, ಇದು ಎಫ್‌ಎಂಸಿಜಿ (FMCG) ಉದ್ಯಮದ ಬೆಳವಣಿಗೆಗೆ ಕಾರಣವಾಗಿದೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
ಖಾದ್ಯ ತೈಲ ಬೆಲೆ ಕುಸಿತವನ್ನು ವರ್ಷದಿಂದ ವರ್ಷಕ್ಕೆ ನಾವು ನೋಡುತ್ತಿದ್ದೇವೆ. ಇದು ಬ್ರಾಂಡ್ ಸರಕುಗಳ ಆದಾಯದ ಮೇಲೆ ಪರಿಣಾಮ ಬೀರುತ್ತಿದ್ದು, ಒಟ್ಟಾರೆ ಎಫ್‌ಎಂಸಿಜಿ ಬೆಳವಣಿಗೆ ಹೆಚ್ಚಳವಾಗಿದೆ ಎಂದು ಬಿಝೋಮ್‌ನ ಅಕ್ಷಯ್ ಡಿಸೋಜಾ ತಿಳಿಸಿದ್ದಾರೆ.
ಕಳೆದ ಒಂಬತ್ತು ವರ್ಷಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಒದಗಿಸಿದ ಭಾರತೀಯ ರೈಲ್ವೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
