ನವದೆಹಲಿ:ಕರೊನಾ ಹಾವಳಿಯಿಂದಾಗಿ ವಿವಿಧ ದೇಶಗಳಲ್ಲಿ ಸಿಲುಕಿಕೊಂಡು ಸಂಕಷ್ಟದಲ್ಲಿರುವ ಭಾರತೀಯರನ್ನು ತವರಿಗೆ ಮರಳಿ ಕರೆತರುವ ‘ವಂದೇ ಭಾರತ್​ ಮಿಷನ್​’ ಕಳೆದ ಕೆಲ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ. ವಿದೇಶದಲ್ಲಿದ್ದ ಭಾರತೀಯರನ್ನು ಮರಳಿ ಕರೆತಂದು ಅವರ ಕುಟುಂಬದ ಜತೆಗೆ ಸೇರಿಸುವ ಕೆಲಸ ನಡೆಯುತ್ತಲೇ ಇದೆ. ಇದೇ ವೇಳೆ ‘ವಂದೇ ಭಾರತ್​ ಮಿಷನ್​’ನಲ್ಲಿ ತೊಡಗಿಕೊಂಡಿರುವವರು ತಮ್ಮ ಕುಟುಂಬದಿಂದ ದೂರ ಉಳಿಯುವಂತಾಗಿದೆ. ಏರ್​ಲಿಫ್ಟ್​ನಲ್ಲಿ ತೊಡಗಿಕೊಂಡಿರುವ ಬೋಯಿಂಗ್​ 787 ಡ್ರೀಮ್​ಲೈನರ್​ನ ಕಮಾಂಡರ್​ ಪುಷ್ಪಾಂಜಲಿ ಪೊಟ್ಸಂಗ್​ಬಮ್​ ಕಳೆದ 4 ತಿಂಗಳುನಿಂದ ಮಾಜಿ ಫುಟ್​ಬಾಲ್​ ತಾರೆಯಾಗಿರುವ ತಮ್ಮ ಪತಿ ಗೌರಮಂಗಿ ಸಿಂಗ್​ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಈ ಮೂಲಕ ಕುಟುಂಬಕ್ಕಿಂತ ದೇಶ ಸೇವೆಯಲ್ಲಿಯೇ ಪುಷ್ಪಾಂಜಲಿ ಸಂತೃಪ್ತಿ ಕಾಣುತ್ತಿದ್ದಾರೆ.
ನವದೆಹಲಿ ಮೂಲದ ಏರ್​ ಇಂಡಿಯಾದಲ್ಲಿ ಪೈಲಟ್​ ಆಗಿರುವ ಮಣಿಪುರದ ಪುಷ್ಪಾಂಜಲಿ ಅವರ ದೇಶ ಸೇವೆಗೆ ಪತಿ ಗೌರಮಂಗಿ ಸಿಂಗ್​ ಬೆಂಬಲವಾಗಿ ನಿಂತಿದ್ದಾರೆ. ಭಾರತ ಫುಟ್​ಬಾಲ್​ ತಂಡದ ಮಾಜಿ ಸೆಂಟ್ರಲ್​ ಡಿಫೆಂಡರ್​ ಆಗಿರುವ ಗೌರಮಂಗಿ, ಪತ್ನಿಯ ಕೆಲಸದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಸಚಿನ್​ ಪಂದ್ಯದ ಮೊದಲ ಎಸೆತ ಎದುರಿಸಲು ಇಷ್ಟ ಪಡುತ್ತಿರಲಿಲ್ಲ, ಕಾರಣ ಬಿಚ್ಚಿಟ್ಟ ಗಂಗೂಲಿ
‘ಈ ಸಂಕಷ್ಟದ ಸಮಯದಲ್ಲಿ ನಮ್ಮ ಸ್ವಂತದವರೇ ದೇಶಕ್ಕೆ ಕೊಡುಗೆಯನ್ನು ನೀಡುತ್ತಿರುವುದು ವಿಶೇಷವಾದ ಅನುಭವವಾಗಿದೆ. ಆಕೆಯದ್ದು ಅತ್ಯಂತ ಕಠಿಣ ಮತ್ತು ಒತ್ತಡದ ಕೆಲಸ. ಇದೇ ರೀತಿ, ಆಕೆಯ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ಎಂದರೆ ಅದು ಸುಳ್ಳು ಹೇಳಿದಂತಾಗುತ್ತದೆ. ಯಾಕೆಂದರೆ ಕರೊನಾ ವೈರಸ್​ ಭೀತಿಯ ನಡುವೆಯೇ ಆಕೆ ಮತ್ತು ಆಕೆಯ ಸಹೋದ್ಯೋಗಿಗಳು ಕಾರ್ಯನಿರ್ವಹಿಸಬೇಕಾಗುತ್ತದೆ’ ಎಂದು ಗೌರಮಂಗಿ ಸಿಂಗ್​ ಹೇಳಿದ್ದಾರೆ. ಅವರು ಈಗ ಮಣಿಪುರದ ಇಂಪಾಲ್​ನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.
ಪುಷ್ಪಾಂಜಲಿ ಕಳೆದ 11 ವರ್ಷಗಳಿಂದ ಭಾರತದ ಅತಿದೊಡ್ಡ ವಿಮಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವಾರವಷ್ಟೇ ಆಕೆ ಆಫ್ರಿಕಾದ ಲಾಗೋಸ್​ನಿಂದ ಭಾರತೀಯ ನಾಗರಿಕರನ್ನು ಕರೆತಂದಿದ್ದಳು ಎಂದು 34 ವರ್ಷದ ಗೌರಮಂಗಿ ತಿಳಿಸಿದ್ದಾರೆ. ಏರ್​ಲಿಫ್ಟ್​ಗಾಗಿ ವಿಮಾನದಲ್ಲಿ ಕಾರ್ಯನಿರ್ವಹಿಸುವ ವೇಳೆ 3 ಬಾರಿ ಕರೊನಾ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ನಿಗದಿತ ಸ್ಥಳಕ್ಕೆ ವಿಮಾನ ಏರುವ ಮುನ್ನ ಮತ್ತು ಅಲ್ಲಿಂದ ವಾಪಸಾದ ಬಳಿಕ ಈ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ವಾಪಸಾದ 5 ದಿನಗಳ ಬಳಿಕ ಮತ್ತೊಮ್ಮೆ ಏರ್​ಲಿಫ್ಟ್​ಗಾಗಿ ತೆರಳಬೇಕಾಗುತ್ತದೆ ಎಂದು ಗೌರಮಂಗಿ ತಿಳಿಸಿದ್ದಾರೆ.
ಇದನ್ನೂ ಓದಿ:ರಾಹುಲ್​ ದ್ರಾವಿಡ್​ ಟೀಮ್​ ಇಂಡಿಯಾ ಕೋಚ್​ ಆಗಲು ನಿರಾಕರಿಸಿದ್ದು ಯಾಕೆ ಗೊತ್ತೇ?
ಇನ್ನು ಕೆಲವೇ ದಿನಗಳಲ್ಲಿ ಪತ್ನಿಯನ್ನು ಭೇಟಿಯಾಗುವ ಹಂಬಲದಿಂದ ಗೌರಮಂಗಿ ಈಗ ನವದೆಹಲಿಗೆ ಆಗಮಿಸಿದ್ದಾರೆ. ಗೌರಮಂಗಿ 2006ರಿಂದ 2013ರ ನಡುವೆ ಭಾರತ ಪರ 71 ಪಂದ್ಯಗಳನ್ನು ಆಡಿದ್ದಾರೆ ಮತ್ತು 6 ಗೋಲು ಸಿಡಿಸಿದ್ದಾರೆ. ಅತ್ಯುತ್ತಮ ಡಿಫೆಂಡರ್​ಗಳಲ್ಲಿ ಒಬ್ಬರಾಗಿದ್ದ ಅವರು ನ್ಯಾಷನಲ್​ ಫುಟ್​ಬಾಲ್​ ಲೀಗ್​, ಫೆಡರೇಷನ್​ ಕಪ್​, ಐ-ಲೀಗ್​ ಪ್ರಶಸ್ತಿ ಗೆಲುವುಗಳನ್ನು ಕಂಡಿದ್ದಾರೆ. 2010ರಲ್ಲಿ ಎಐಎಫ್​ಎಫ್​ ವರ್ಷದ ಆಟಗಾರ ಪ್ರಶಸ್ತಿಗೂ ಭಾಜನರಾಗಿದ್ದರು. ಅವರು ಬೆಂಗಳೂರಿನ ಎಫ್​ಸಿ ಬೆಂಗಳೂರು ಯುನೈಟೆಡ್​ ತಂಡಕ್ಕೆ ಕೋಚ್​ ಕೂಡ ಆಗಿದ್ದರು.
PHOTOS | ಪಿವಿ ಸಿಂಧು ಬರ್ತ್​ಡೇ ಪಾರ್ಟಿ ಹೇಗಿತ್ತು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
