ಮುಂಬೈ:‘ಪ್ರಧಾನಿ ಮತ್ತಿತರ ಅತಿ ಗಣ್ಯ ವ್ಯಕ್ತಿಗಳು ಬಂದಾಗ ಬೀದಿಬದಿಯಲ್ಲಿ ಮತ್ತು ಫುಟ್​ಪಾತ್ ಮೇಲಿರುವ ವ್ಯಾಪಾರಿಗಳನ್ನು ತೆರವು ಮಾಡಿಸುತ್ತೀರಿ… ಇದೇ ಕೆಲಸವನ್ನು ಜನಸಾಮಾನ್ಯರಿಗಾಗಿ ಪ್ರತಿದಿನ ಯಾಕೆ ಮಾಡುವುದಿಲ್ಲ?’ ಎಂದು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ.
‘ರಸ್ತೆ ಬದಿ, ಫುಟ್​ಪಾತ್​ನಲ್ಲಿ ಸರಾಗವಾಗಿ ನಡೆದುಕೊಂಡು ಹೋಗುವುದಕ್ಕೆ ಜನರಿಗೆ ಅವಕಾಶವಿರಬೇಕು. ಅದು ಪ್ರತಿಯೊಬ್ಬರ ಮೂಲಭೂತ ಹಕ್ಕು. ಆ ರೀತಿಯ ವಾತಾವರಣ ಸೃಷ್ಟಿಸುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ. ಫುಟ್​ಪಾತ್ ಮೇಲೆಯೇ ನಡೆಯಬೇಕು ಅಂತ ನಾವು ನಮ್ಮ ಮಕ್ಕಳಿಗೆ ತಿಳಿಹೇಳುತ್ತೇವೆ. ಆದರೆ ಫುಟ್​ಪಾತೇ ಇಲ್ಲದಿದ್ದರೆ ಹೇಗೆ?’ ಎಂದು ನ್ಯಾ. ಎಂ.ಎಸ್. ಸೋನಕ್ ಮತ್ತು ನ್ಯಾ. ಕಮಲ್ ಖತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪ್ರಶ್ನಿಸಿದೆ.
‘ನಗರಗಳಲ್ಲಿ ಫುಟ್​ಪಾತ್ ಆಕ್ರಮಿಸುವ ಅನಧಿಕೃತ ಸಣ್ಣ ವ್ಯಾಪಾರಿಗಳ ವಿಷಯದಲ್ಲಿ ಏನು ಮಾಡುವುದು ಅಂತ ವರ್ಷಗಟ್ಟಲೇ ಯೋಚಿಸುತ್ತ ಕುಳಿತುಕೊಂಡರೆ ಆಗುವುದಿಲ್ಲ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಇಲ್ಲ. ಸಮಸ್ಯೆ ಬಗೆಹರಿಸಲು ನಿರ್ದಿಷ್ಟ ಕ್ರಮ ಕೈಗೊಳ್ಳಲೇಬೇಕು’ ಎಂದು ಸೂಚಿಸಿದೆ. ಇದಕ್ಕೆ ಮುನ್ನ ಬೃಹನ್ಮುಂಬೈ ಮುನಿಸಿಪಲ್ ಕಾರ್ಪೆರೇಷನ್ (ಬಿಎಂಸಿ) ಪರ ಹಾಜರಾದ ಹಿರಿಯ ವಕೀಲ ಎಸ್.ಯು. ಕಾಮದಾರ್, ‘ರಸ್ತೆಬದಿ ವ್ಯಾಪಾರಿಗಳಿಗೆ ಅಧಿಕಾರಿಗಳು ಆಗಾಗ ದಂಡ ವಿಧಿಸಿ, ತೆರವುಗೊಳಿಸುತ್ತಲೇ ಇರುತ್ತಾರೆ. ಆದರೆ ಅವರು ಮತ್ತೆ ಬಂದು ಅದೇ ಜಾಗದಲ್ಲಿ ವ್ಯಾಪಾರ ಆರಂಭಿಸುತ್ತಾರೆ. ಇದಕ್ಕಾಗಿ ಅಲ್ಲಲ್ಲಿ ನೆಲಮಾಳಿಗೆ ನಿರ್ವಿುಸಿ ಅಲ್ಲಿ ವ್ಯಾಪಾರಕ್ಕೆ ಅನುಕೂಲ ಮಾಡಿಕೊಡಬಹುದೇ ಎಂಬ ಬಗ್ಗೆ ಚಿಂತನೆ ನಡೆದಿದೆ’ ಎಂದು ಹೇಳಿದರು.
ಹೆಚ್ಚಿನ ದಂಡ ವಿಧಿಸಿ:‘ನೀವು ವಿಧಿಸುವ ದಂಡ ಅತ್ಯಂತ ಕಡಿಮೆ. ಅವರ ವ್ಯಾಪಾರ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಹಾಗಾಗಿ ನಿಮ್ಮ ಚಿಲ್ಲರೆ ದಂಡಕ್ಕೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಅವರೆಲ್ಲರ ಹೆಸರು, ವಿವರ ಒಳಗೊಂಡ ಡೇಟಾಬೇಸ್ ರೂಪಿಸಿ. ಆಗ ಅವರು ನಿಯಮ ಉಲ್ಲಂಘಿಸುವುದು ಕಡಿಮೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿತು. ಈ ಪ್ರಕರಣವನ್ನು ಹೈಕೋರ್ಟ್ ಸುಮಾರು ಒಂದು ವರ್ಷದ ಹಿಂದೆ ಸ್ವಇಚ್ಛೆಯಿಂದ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ವಿಚಾರಣೆಯನ್ನು ಮತ್ತೆ ಜು. 22ಕ್ಕೆ ಮುಂದೂಡಲಾಯಿತು.
ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 11 =
Remember me
