ಬೆಂಗಳೂರು:ಜಗತ್ತಿನಾದ್ಯಂತ ಕರೊನಾ ಹಾವಳಿ ಹೆಚ್ಚುತ್ತಿರುವ ಮಧ್ಯೆಯೇ ಒಂದು ಆಶಾದಾಯಕ ಸುದ್ದಿ ಹೊರಬಿದ್ದಿದೆ. ರಷ್ಯಾದ ಕರೊನಾ ಲಸಿಕೆಗೆ ಇನ್ನು ಕೆಲವೇ ವಾರಗಳಲ್ಲಿ ಭಾರತದಲ್ಲಿ ಅಂತಿಮ ಟ್ರಯಲ್​ ನಡೆಯಲಿದೆ.
ಕರೊನಾ ವಿರುದ್ಧ ರಷ್ಯಾ ಕಂಡುಹಿಡಿಯುತ್ತಿರುವ ‘ಸ್ಪುಟ್ನಿಕ್-ವಿ’ ಕರೊನಾ ಲಸಿಕೆಗೆ ಭಾರತದಲ್ಲಿ ಡಾ. ರೆಡ್ಡಿ ಲ್ಯಾಬೊರೇಟರೀಸ್​ ಲಿ. ಸಂಸ್ಥೆ ಅಂತಿಮ ಟ್ರಯಲ್​ ಕೈಗೊಳ್ಳಲಿದೆ ಎಂಬ ಮಾಹಿತಿ ಔಷಧ ಕಂಪನಿಗಳ ವಲಯದಿಂದ ಹೊರಬಿದ್ದಿದೆ.
ಈ ಟ್ರಯಲ್​ಗೆ 1ರಿಂದ 2 ಸಾವಿರ ಮಂದಿ ನೋಂದಾಯಿಸಿಕೊಳ್ಳಲಿದ್ದು, ದೇಶಾದ್ಯಂತದ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಟ್ರಯಲ್​ ನಡೆಯಲಿದೆ. ಈ ಬಗ್ಗೆ ರಷ್ಯನ್ ಡೈರೆಕ್ಟ್​ ಇನ್​ವೆಸ್ಟ್​ಮೆಂಟ್​ ಫಂಡ್​ (ಆರ್​ಡಿಐಎಫ್​) ಮತ್ತು ಡಾ.ರೆಡ್ಡಿ ಲ್ಯಾಬೊರೇಟರೀಸ್​ ಸಂಸ್ಥೆ ನಡುವೆ ಒಪ್ಪಂದ ಏರ್ಪಟ್ಟಿದೆ. ವರ್ಷಾಂತ್ಯದ ವೇಳೆಗೆ ಭಾರತಕ್ಕೆ ವ್ಯಾಕ್ಸಿನ್​ ಪೂರೈಕೆ ಆಗಬಹುದು ಎಂದು ಆರ್​ಡಿಐಎಫ್​ ಹೇಳಿಕೊಂಡಿದ್ದರೂ ಈ ಟ್ರಯಲ್​ಗೆ ಕೆಲವು ತಿಂಗಳುಗಳು ಬೇಕಾಗಬಹುದು ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
