ನವದೆಹಲಿ: ಸದ್ಯದಲ್ಲೆ ಚುನಾವಣೆ ನಡೆಯಲಿರುವ ಬಿಹಾರ, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು-ಕಾಶ್ಮೀರ, ಲಡಾಕ್​ ಬಿಟ್ಟು ಉಳಿದ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1,500 ಮತದಾರರಿಗೆ ಒಂದು ಮತಗಟ್ಟೆ ರೂಪಿಸುವುದಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.
ಕೋವಿಡ್ 19 ಸೋಂಕಿನ ಕಾರಣ ಈ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿರುವ ಆಯೋಗ, ಬಿಹಾರದಲ್ಲಿ ಇತರೆ ಕೆಲವು ಉಪಚುನಾವಣೆಗಳ ಕ್ಷೇತ್ರಗಳಲ್ಲಿ ಪ್ರತಿ ಮತಗಟ್ಟೆಗೆ 1,000 ಮತದಾರರನ್ನಷ್ಟೇ ಹಂಚಿಕೆ ಮಾಡಲಾಗಿದೆ. ಇದಕ್ಕೆ ಪೂರಕವಾಗಿ ಉಳಿದ ರಾಜ್ಯಗಳಲ್ಲಿ ಯಾವುದೇ ಮತಗಟ್ಟೆಗಳಲ್ಲಿ 1,500ಕ್ಕಿಂತ ಹೆಚ್ಚು ಮತದಾರರನ್ನು ಹಂಚಿಕೆ ಮಾಡಬಾರದು ಎಂದು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಇದನ್ನೂ ಓದಿ:ಅಕ್ರಮ ಡೀಸೆಲ್ ಮಾರಾಟ, ನಾಲ್ವರ ಬಂಧನ
ಇದಕ್ಕೂ ಮೊದಲು ಪ್ರತಿಮತಗಟ್ಟೆಗೆ 1,000 ಮತದಾರರನ್ನು ಹಂಚಿಕೆ ಮಾಡಿ ವಿಂಗಡಿಸುವಂತೆ ರಾಜ್ಯ ಆಯೋಗಗಳಿಗೆ ಸೂಚಿಸಲಾಗಿತ್ತು. ಆದರೆ, ಶುಕ್ರವಾರ ಪ್ರಕಟಿಸಿರುವ ಹೊಸ ಸುತ್ತೋಲೆ ಪ್ರಕಾರ ಪ್ರತಿ ಮತಗಟ್ಟೆಯ ಮತದಾರರ ಸಂಖ್ಯೆಯನ್ನು 1,500ಕ್ಕೆ ಏರಿಸಿದೆ. (ಏಜೆನ್ಸೀಸ್)
ರಾಯ್​ಪುರ ಸಮೀಪ ಭೀಕರ ರಸ್ತೆ ಅಪಘಾತಕ್ಕೆ 7 ಕಾರ್ಮಿಕರು ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − six =
Remember me
