ನವದೆಹಲಿ:ಯುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದೇನೆ…! ಅಂತಿಮ ಸೆಮಿಸ್ಟರ್​, ವರ್ಷದ ಪರೀಕ್ಷೆಯನ್ನೂ ರದ್ದು ಮಾಡಿ…
ಯುಜಿಸಿ ಮಾರ್ಗಸೂಚಿ ಅನ್ವಯ, ಮಧ್ಯಂತರ ಸೆಮಿಸ್ಟರ್​ಗಳ ಪರೀಕ್ಷೆ ರದ್ದು ಮಾಡಲಾಗಿದ್ದರೂ, ಅಂತಿಮ ಸೆಮಿಸ್ಟರ್​ಗಳ ಪರೀಕ್ಷೆ ನಡೆಸುವುದಾಗಿ ಬೆಂಗಳೂರು ಸೇರಿ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಈಗಾಗಲೇ ಘೋಷಿಸಿವೆ.
ಇದನ್ನೂ ಓದಿ;ಕಾಠ್ಮಂಡು ಕಂಗೆಡಿಸುವ, ಶಿಮ್ಲಾ, ದೆಹಲಿ ನಡುಗಿಸುವ ವಿದ್ಯಮಾನ ಬಾಕಿಯಿದೆ…! ಯಾವುದೇ ಕ್ಷಣವೂ ಸಂಭವಿಸಬಹುದು
ಆದರೆ, ಈ ಪರೀಕ್ಷೆಗಳನ್ನು ರದ್ದು ಮಾಡಿ ಎಂಬ ಒತ್ತಾಯವೂ ಕೇಳಿ ಬಂದಿದೆ. ವಿದ್ಯಾರ್ಥಿಗಳಳಿಂದ ಮಾತ್ರವಲ್ಲ, ಅವರ ಪರವಾಗಿ ಈ ಮನವಿ ಮಾಡಿದ್ದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​.
ದೆಹಲಿ ಸರ್ಕಾರದ ಕಾಲೇಜು ಹಾಗೂ ವಿವಿಗಳ ಅಂತಿಮ ಸೆಮಿಸ್ಟರ್​ ಪರೀಕ್ಷೆಯೂ ಸೇರಿ ಎಲ್ಲವನ್ನೂ ರದ್ದು ಮಾಡಲಾಗಿದೆ. ಆದರೆ, ದೆಹಲಿ ಹಾಗೂ ಇತರ ಕೇಂದ್ರೀಯ ವಿವಿಗಳ ಅಂತಿಮ ಪರೀಕ್ಷೆ ನಡೆಸುವುದಾಗಿ ಯುಜಿಸಿ ತಿಳಿಸಿದೆ. ಹೀಗಾಗಿ ಪ್ರಧಾನಿ ಮೋದಿಯೇ ಮಧ್ಯಪ್ರವೇಶಿಸಬೇಕೆಂದು ಕೇಜ್ರಿವಾಲ್​ ಒತ್ತಾಯಿಸಿದ್ದಾರೆ.
ಇದನ್ನೂ ಓದಿ;ಹುಲಿ ಗಣತಿಗೆ ಪಟ್ಟ ಪಾಡು ಎಂಥದ್ದು? ಗಿನ್ನೆಸ್​ ದಾಖಲೆಗೆ ಸೇರ್ಪಡೆಯಾಯ್ತು 6.20 ಲಕ್ಷ ಮಾನವ ದಿನಗಳ ಶ್ರಮ
ಕೋವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಕಷ್ಟವಾಗುವುದರಿಂದ ದೆಹಲಿ ಸರ್ಕಾರ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.
ಸೋಮವಾರದಿಂದ ದೇಶದ 12 ಕಡೆಗಳಲ್ಲಿ ಕೋವಿಡ್​ ರೋಗಿಗಳಿಗೆ ದೇಶೀಯ ಕರೊನಾ ಲಸಿಕೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
