ಮುಂಬೈ:ಲವ್​ ಮತ್ತು ಲವ್​ ಮ್ಯಾರೇಜ್​ ವಿರುದ್ಧ ಕಾಲೇಜು ವಿದ್ಯಾರ್ಥಿನಿಯರಿಂದ ಪ್ರೇಮಿಗಳ ದಿನದ ಅಂಗವಾಗಿ ಪ್ರತಿಜ್ಞೆಯನ್ನು ಸ್ವೀಕರಿಸಿದ್ದ ಮಹಾರಾಷ್ಟ್ರದ ಅಮರಾವತಿ ಕಾಲೇಜು ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರಿಬ್ಬರನ್ನು ಅಮಾನತು ಮಾಡಲಾಗಿದೆ.
ಅಮರಾವತಿಯ ಮಹಿಳಾ ಕಲಾ-ವಾಣಿಜ್ಯ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಫೆ. 13ರಂದು ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್​ಎಸ್​) ಶಿಬಿರದಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ್ದರು. ಈ ಹಿನ್ನೆಲೆಯಲ್ಲಿ ವಿದರ್ಭ ಯುವ ಕಲ್ಯಾಣ ಸಮಾಜ ಅಮಾನತು ಮಾಡಿದೆ.
ನಾವು ಯಾವುದೇ ಕಾರಣಕ್ಕೂ ಪ್ರೇಮದ ಬಲೆಯಲ್ಲಿ ಬೀಳುವುದಿಲ್ಲ ಅಥವಾ ಪ್ರೇಮ ವಿವಾಹ ಆಗುವುದಿಲ್ಲ ಎಂದು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗಿತ್ತು. ಬಳಿಕ ಈ ವಿಚಾರ ವೈರಲ್​ ಆಗಿ, ಅನೇಕ ಮಹಿಳಾ ನಾಯಕಿಯರು ಮತ್ತು ಕಾರ್ಯಕರ್ತೆಯರು ಭಾರಿ ಆಕ್ರೋಶ ಹೊರಹಾಕಿದ್ದರು.
ಇದರ ತನಿಖೆಗೆ ಶಿಕ್ಷಣ ಸಂಸ್ಥೆಯು ಏಕಸದಸ್ಯ ಸಮಿತಿಯನ್ನು ರಚಿಸಿತ್ತು. ತನಿಖೆಯ ಬಳಿಕ ವರದಿ ಸಲ್ಲಿಸಲಾಗಿದ್ದು, ಪ್ರಾಂಶುಪಾಲ ರಾಜೇಂದ್ರ ಹವಾರೆ, ಪ್ರದೀಪ್​ ದಂಡೆ ಮತ್ತು ಎನ್​ಎಸ್​ಎಸ್​ ಪ್ರೋಗ್ರಾಮ್​ ಆಫೀಸರ್​ ವಿ.ಡಿ. ಕಪಾಸೆಯನ್ನು ಅಮಾನತು ಮಾಡಿರುವುದಾಗಿ ಫೆ.27ರಂದು ಹೊರಡಿಸಿರುವ ಆದೇಶದಲ್ಲಿ ವಿದರ್ಭ ಯುವ ಕಲ್ಯಾಣ ಸಮಾಜದ ಕಾರ್ಯದರ್ಶಿ ಯುವರಾಜ್​ ಸಿಂಗ್​ ಚೌಧರಿ ತಿಳಿಸಿದ್ದಾರೆ.
ಪ್ರತಿಜ್ಞಾ ವಿಧಿಗಾಗಿ ಪ್ರಾಧ್ಯಾಪಕರು ಯಾವುದೇ ಲಿಖಿತ ರೂಪದ ಅನುಮತಿಯನ್ನು ಪಡೆದಿರಲಿಲ್ಲ. ಈ ರೀತಿಯ ಅಸಂವಿಧಾನಿಕ ನಡವಳಿಕೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಿತಿನ್​ ಧಂಡೆ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ಫೆ. 15ರಂದು ಪ್ರಾಧ್ಯಾಪಕರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಬೆನ್ನಿಗೆ ನಿಂತ ಶಾಸಕಅಮಾನತು ಆದೇಶದ ವಿರುದ್ಧ ಕಿಡಿಕಾರಿರುವ ದರಿಯಾಪುರ ಕ್ಷೇತ್ರದ ಶಾಸಕ ಬಲ್ವಂತ್​ ವಾಂಖೆಡೆ, ಆದೇಶ ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ. ಶುಕ್ರವಾರ ವಿಧಾನಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಪ್ರತಿಜ್ಞಾ ವಿಧಿಯನ್ನು ವಿದ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರು ಕೂಡ ಅಮಾನತು ಆದೇಶ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ ಎಂದರು. ಸ್ಪೀಕರ್​ ನನ್ನ ಬೇಡಿಕೆಯನ್ನು ಕೇಳಿದ್ದಾರೆ ಅಮಾನತು ಆದೇಶವನ್ನು ವಾಪಸ್​ ಪಡೆಯಲು ನಿರ್ದೇಶಿಸುವ ಭರವಸೆ ಇದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
