ಭೋಪಾಲ್:ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದ ಇಬ್ಬರು ಮಹಿಳೆ ಸೇರಿ ಮೂವರಿದ್ದ ಗುಂಪೊಂದು ಯುವಕನೊಬ್ಬನಿಗೆ ಬಲವಂತವಾಗಿ ಮೂತ್ರ ಕುಡಿಸಿ ವಿಕೃತಿ ಮೆರೆದಿದೆ. ಅವಮಾನ ಸಹಿಸದ ಆತ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೂ ಮುನ್ನ ರೆಕಾರ್ಡ್​ ಮಾಡಿದ್ದ ವಿಡಿಯೋ,ಬರೆದಿದ್ದ ಡೆತ್​ನೋಟ್​ ಆರೋಪಿಗಳನ್ನು ಕಂಬಿ ಹಿಂದಕ್ಕೆ ತಳ್ಳಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಬಾಗ್ರಸಜೋರ್ ಗ್ರಾಮದಲ್ಲಿ ಬುಧವಾರ ರಾತ್ರಿ ಈ ದುರ್ಘಟನೆ ನಡೆದಿದೆ. ಬಾಗ್ರಸಜೋರ್ ಗ್ರಾಮದ ಯುವಕ ವಿಕಾಸ್ ಶರ್ಮಾ(19) ಮೃತ. ಗ್ರಾಮದಲ್ಲಿ ಹೊತ್ತುವ ಬೋರ್​ವೆಲ್​ ಬಳಿ ವಿಕಾಸ್ ಗೋಣಿಚೀಲ ತೊಳೆಯುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಬೇರೆಯವರ ಬಕೆಟ್​ಗೆ ಕೊಳೆನೀರು ಸಿಡಿದಿದೆ. ರೊಚ್ಚಿಗೆದ್ದ ಆ ಬಕೆಟ್​ನ ಮಾಲೀಕರು ಜಗಳ ಮಾಡಿದ್ದಾರೆ. ಯುವಕ ಕ್ಷಮೆ ಕೇಳಿದರೂ ಒಪ್ಪದ ಆರೋಪಿಗಳು ಈತನಿಗೆ ಥಳಿಸಿದ್ದಾರೆ. ಕೊನೆಗೆ ಪಾತ್ರೆಯಲ್ಲಿ ಮೂತ್ರ ತಂದು ಬಲವಂತವಾಗಿ ಯುವಕನಿಗೆ ಕುಡಿಸಿ ವಿಕೃತಿ ಮೆರೆದಿದ್ದಾರೆ. ಮನನೊಂದ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿಕರೊನಾ ಹೊತ್ತಲ್ಲಿ ಚುನಾವಣೆ ವಿಷಯ ಪ್ರಸ್ತಾಪಿಸಿದ ಉಪೇಂದ್ರ!
ಸಾವಿಗೂ ಮುನ್ನ ಮೊಬೈಲ್​ನಲ್ಲಿ ವಿಡಿಯೋ ರೆಕಾರ್ಡ್​ ಮಾಡಿರುವ ವಿಕಾಸ್​, ಆ ಘಟನೆ ಬಗ್ಗೆ ವಿವರಿಸಿದ್ದಾನೆ. ‘ನಾನು ಕೊಳಾಯಿ ಬಳಿ ಚೀಲ ತೊಳೆಯುತ್ತಿದ್ದ ವೇಳೆ ಕೊಳೆ ನೀರು ಸಿಡಿಯಿತೆಂದು ಇದೇ ಗ್ರಾಮದ ತಾರಾವತಿ ಕೊಹ್ಲಿ, ಪ್ರಿಯಾಂಕಾ ಕೊಹ್ಲಿ ಮತ್ತು ಮನೋಜ್ ಕೊಹ್ಲಿ ಜಗಳ ಶುರು ಮಾಡಿದರು. ಕ್ಷಮೆ ಕೇಳಿ, ಆ ಬಕೆಟ್​ಗಳನ್ನು ತೊಳೆದು ಹೊಸದಾಗಿ ನೀರು ತುಂಬಿಸಿ ಕೊಡುವುದಾಗಿ ಹೇಳಿದರೂ ಒಪ್ಪದ ಅವರು ಮನಬಂದಂತೆ ಥಳಿಸಿದರು. ಅಲ್ಲದೆ ತಾಮ್ರದ ಪಾತ್ರೆಯಲ್ಲಿ ಮೂತ್ರ ತಂದ ಮನೋಜ್​ ನನಗೆ ಕುಡಿಯಲು ಹೇಳಿದ. ಇದಕ್ಕೆ ವಿರೋಧಿಸಿದೆ. ಆಗ ನನ್ನ ತಲೆ ಕೂದಲನ್ನು ಮಹಿಳೆಯರಿಬ್ಬರು ಗಟ್ಟಿಯಾಗಿ ಹಿಡಿದುಕೊಂಡರು, ಮನೋಜ್​ ಬಲವಂತವಾಗಿ ಮೂತ್ರ ಕುಡಿಸಿದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಈ ಮೂವರೇ ಕಾರಣ’ ಎಂದು ಹೇಳಿದ್ದಾನೆ.
ಇದನ್ನೂ ಓದಿಪಂಚಭೂತಗಳಲ್ಲಿ ಲೀನರಾದ ಮುತ್ತಪ್ಪ ರೈ
ವಿಡಿಯೋ ಜತೆಗೆ ಡೆತ್​ನೋಟ್​ ಬರೆದಿರುವ ವಿಕಾಸ್​, ‘ಆ ಮೂವರು ನನಗೆ ಮೂತ್ರ ಕುಡಿಸಿ ನನ್ನನ್ನು ಅಪವಿತ್ರ ಮಾಡಿದರು. ಸಾಯಲು ನಿರ್ಧರಿಸಿದ ನನ್ನನ್ನು ದಯವಿಟ್ಟು ಅಪ್ಪ ಮತ್ತು ಅಮ್ಮ ಕ್ಷಮಿಸಬೇಕು. ಆ ಮೂವರೂ ನನ್ನನ್ನು ಹಿಂಸಿಸಿದ್ದ ಪ್ರತಿಫಲ ಅನುಭವಿಸುತ್ತಾರೆ, ಅವರಿಗೆ ನನ್ನ ಸಾವಿನ ಶಾಪ ಕಾಡಲಿದೆ. ಅಪ್ಪ-ಅಮ್ಮ ನೀವಿಬ್ಬರೂ ನೋಡಲೇಬೇಕಾದ ವಿಡಿಯೋವೊಂದು ನನ್ನ ಮೊಬೈಲ್​ನಲ್ಲಿದೆ’ ಎಂದು ಉಲ್ಲೇಖಿಸಿದ್ದಾನೆ.
ಆರೋಪಿಗಳು ಮತ್ತು ಮೃತ ಯುವಕನ ಎರಡೂ ಕುಟುಂಬಗಳ ನಡುವೆ ಹಳೇ ವೈಷಮ್ಯ ಇತ್ತು. ಮನೋಜ್ ಕೊಹ್ಲಿ ಸಹೋದರನನ್ನು ವಿಕಾಸ್ ಶರ್ಮಾನ ಸಂಬಂಧಿ ಒಂದೂವರೆ ವರ್ಷದ ಹಿಂದೆ ಕೊಲೆ ಮಾಡಿದ್ದ. ವಿಕಾಸ್​ ಸಾವಿನ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಶಿವಪುರಿ ಎಸ್ಪಿರಾಜೇಶ್ ಚಂದೇಲ್ ತಿಳಿಸಿದ್ದಾರೆ.
ಇದನ್ನೂ ಓದಿಕರೊನಾ ಗೆದ್ದ 113 ವರ್ಷದ ಅಜ್ಜಿ ..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
