ಜೈಪುರ:ತನ್ನ ಅಳಿಯ ಅದೇ ಸಮುದಾಯಕ್ಕೆ ಸೇರಿದವನಲ್ಲ ಎಂದು ಅಸಮಾಧಾನಗೊಂಡ ರಾಜಸ್ಥಾನದ ಜೋಧ್‌ಪುರದ ವ್ಯಕ್ತಿಯೊಬ್ಬರು, ಈಗಾಗಲೇ ಮದುವೆಯಾದ ತನ್ನ ಮಗಳನ್ನು ಆಕೆ ಪತಿಯಿಂದ ದೂರ ಮಾಡಿ ಇನ್ನೊಂದು ಮದುವೆ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಬಲವಂತವಾಗಿ ಮೊದಲ ಮದುವೆ ಮುರಿದು ಬಿತ್ತು:ಯುವತಿಯೊಬ್ಬಳು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಹುಡುಗ ತನ್ನ ಸಮುದಾಯಕ್ಕೆ ಸೇರದ ಕಾರಣ ಯುವತಿ ತಂದೆಗೆ ಇಷ್ಟವಿರಲಿಲ್ಲ. ಮದುವೆಯಾದ 10 ದಿನಗಳ ಬಳಿಕ ಯುವತಿ ಮನೆಯವರು ಇಬ್ಬರನ್ನು ಹುಡುಕಿ ಬಲೇಸರ್ ಪೊಲೀಸ್ ಠಾಣೆಗೆ ಕರೆತಂದು ಗಂಡನಿಂದ ದೂರವಾಗುವಂತೆ ಮಾಡಿದ್ದಾರೆ. ಇದೇ ವೇಳೆ ಯುವತಿಯ ತಂದೆ ಆಕೆಗೆ ಎರಡನೇ ಮದುವೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ:ವಿದ್ಯಾರ್ಥಿನಿಯರಿಗೆ ಹಿಜಾಬ್​ ಧರಿಸುವಂತೆ ಒತ್ತಾಯ; ಪ್ರಿನ್ಸಿಪಾಲ್ ಸೇರಿ ಮೂವರು ಅರೆಸ್ಟ್​​
ಛತ್ತೀಸ್‌ಗಢ ಪಟ್ಟಣದ ನಿವಾಸಿ ಜಿತೇಂದ್ರ ಜೋಶಿ ಎಂಬಾತನೊಂದಿಗೆ ಮೇ. 1 ರಂದು ಬಲವಂತವಾಗಿ ಮದುವೆ ಮಾಡಿಸಿದ್ದಾರೆ. ಮಹಿಳೆಯ ಮೊದಲ ಮದುವೆಯ ಬಗ್ಗೆ ಪುರುಷನ ಕುಟುಂಬಕ್ಕೆ ತಿಳಿದಿರಲಿಲ್ಲ. ಮದುವೆಯಾದ ಬಳಿಕ ತನ್ನ ಎರಡನೇ ಗಂಡನಿಗೆ ಮೊದಲ ಗಂಡನ ಬಗ್ಗೆ ಹೇಳಿ ಆತನ ಕೈಗೆ ರಾಖಿಯನ್ನು ಕಟ್ಟಿದ್ದಾಳೆ. ಮೊದಲ ಗಂಡನ ಬಳಿ ಹೋಗಲು ಬಿಡುವಂತೆ ಹೇಳಿದ್ದಾಳೆ. ಇತ್ತೀಚೆಗೆ ಮಹಿಳೆ ಬೇರೊಬ್ಬರ ಪೋನ್‌ ಬಳಸಿ ಟ್ವಿಟರ್‌ ನಲ್ಲಿ ತನ್ನ ಕಷ್ಟದ ಬಗ್ಗೆ ಬರೆದುಕೊಂಡು ಪೋಸ್ಟ್‌ ಮಾಡಿದ್ದಾಳೆ. ಈ ಪೋಸ್ಟ್‌ ವೈರಲ್‌ ಆಗಿದೆ.

ಈ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ. ಮಹಿಳೆಯ 2ನೇ ಪತಿಯ ಹೇಳಿಕೆಯನ್ನು ಪಡೆದುಕೊಂಡಿದ್ದೇವೆ. ಯುವತಿಯ ಮೊದಲ ಪತಿ ಕುರಿತಾಗಿ ವಿಚಾರವಾಣೆ ಮಾಡುತ್ತೇವೆಂದು ಅಂತಗಢ ಪೊಲೀಸ್ ಠಾಣೆಯ ಉಸ್ತುವಾರಿ ರೋಷನ್ ಕೌಶಿಕ್ ಹೇಳಿದ್ದಾರೆ.
ಶಿಶುಗಳ ಮಾನಸಿಕ ಯೋಗಕ್ಷೇಮಕ್ಕಾಗಿ ಗರ್ಭಿಣಿಯರು ರಾಮಾಯಣ ಓದಿ: ತೆಲಂಗಾಣ ರಾಜ್ಯಪಾಲೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + nineteen =
Remember me
