ನವದೆಹಲಿ:ಭಾರತದಲ್ಲಿ ಇನ್ನುಮುಂದೆ ಈ ಕಾರುಗಳ ಉತ್ಪಾದನೆ ಆಗುವುದಿಲ್ಲ. ಎರಡೂ ಉತ್ಪಾದನಾ ಘಟಕಗಳನ್ನು ತಕ್ಷಣದಿಂದಲೇ ಮುಚ್ಚಲು ನಿರ್ಧರಿಸಿರುವ ಈ ಕಂಪನಿ, ಸದ್ಯಕ್ಕೆ ಇರುವ ದಾಸ್ತಾನಷ್ಟೇ ಖಾಲಿ ಮಾಡಲಿದೆ.
ಅಂದಹಾಗೆ ಇಂಥದ್ದೊಂದು ನಿರ್ಧಾರಕ್ಕೆ ಮುಂದಾಗಿರುವುದು ಫೋರ್ಡ್ ಕಂಪನಿ. ಭಾರತದಲ್ಲಿನ ಮಾರಾಟಕ್ಕಾಗಿ ತನ್ನ ಕಾರುಗಳ ಉತ್ಪಾದನೆಯನ್ನು ಫೋರ್ಡ್ ಇಂಡಿಯಾ ಕಂಪನಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಲ್ಲಿಸಿದೆ. ಆದರೆ ರಫ್ತು ಸಲುವಾಗಿ ಕಾರುಗಳ ಉತ್ಪಾದನೆ ಒಂದಷ್ಟು ಕಾಲ ಮುಂದುವರಿಯಲಿದೆ.
ಇದನ್ನೂ ಓದಿ:ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..
ಸನಂದ್​ ಘಟಕದಲ್ಲಿ 2021ರ ನಾಲ್ಕನೇ ತ್ರೈಮಾಸಿಕದವರೆಗೂ ಕಾರುಗಳ ಉತ್ಪಾದನೆ ಆಗಲಿದ್ದು, ಚೆನ್ನೈನ ಇಂಜಿನ್​ ಹಾಗೂ ವೆಹಿಕಲ್ ಅಸೆಂಬ್ಲಿ ಪ್ಲ್ಯಾಂಟ್​ನಲ್ಲಿ 2ನೇ ತ್ರೈಮಾಸಿಕದವರೆಗೂ ರಫ್ತು ಉದ್ದೇಶದ ಕಾರುಗಳ ಉತ್ಪಾದನೆ ಇರಲಿದೆ.
ಸದ್ಯ ಭಾರತದಲ್ಲಿ ಈಗಾಗಲೇ ದಾಸ್ತಾನು ಇರುವ ಫೋರ್ಡ್​ ಕಂಪನಿಯ ಇಕೊಸ್ಪೋರ್ಟ್​, ಎಂಡೀವರ್, ಫಿಗೊ, ಆಸ್ಪೈರ್​ ಮತ್ತು ಫಿಗೊ ಫ್ರೀಸ್ಟೈಲ್​ ಕಾರುಗಳು ಮಾರಾಟ ಇರಲಿದ್ದು, ಆ ದಾಸ್ತಾನು ಖಾಲಿ ಆದ ಬಳಿಕ ಭಾರತದಲ್ಲಿ ಫೋರ್ಡ್​ನ ಹೊಸ ಕಾರುಗಳು ಮಾರಾಟಕ್ಕೆ ಲಭ್ಯ ಇರುವುದಿಲ್ಲ. (ಏಜೆನ್ಸೀಸ್)
ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

ಅಜ್ಜ-ಅಜ್ಜಿಯನ್ನು ನೋಡಲು ಬೆಂಗ್ಳೂರಿಂದ ಕೊಡಗಿಗೆ ನಡೆದೇ ಹೊರಟ ಬಾಲಕಿ; 30 ಕಿ.ಮೀ. ನಡೆದು ಸುಸ್ತಾಗಿ 15 ದಿನಗಳ ಬಳಿಕ ಸಿಕ್ಕಳು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seven =
Remember me
