ಹೈದರಾಬಾದ್​:ಖಾರ ಬೂಂದಿ ತುಂಬಿದ ಪ್ಯಾಕೆಟ್​ನಲ್ಲಿ ಕದ್ದು ಸಾಗಿಸುತ್ತಿದ್ದ 54 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಅನ್ನು ರಾಜೀವ್​ ಗಾಂಧಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಮಂಗಳವಾರ ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಮೇರೆಗೆ ವಿಮಾನ ನಂಬರ್​ ಇಕೆ-525 ಮೂಲಕ ದುಬೈಗೆ ಸಾಗಿಸುತ್ತಿದ್ದ ಖಾರಾ ಬೂಂದಿ ಪ್ಯಾಕೆಟ್​ ತುಂಬಿದ ಬ್ಯಾಗ್​ ಅನ್ನು ವಶಪಡಿಸಿಕೊಂಡು ಪರಿಶೀಲಿಸಿದಾಗ ಬೂಂದಿಯೊಳಗೆ ಸೇರಿಸಿದ್ದ 54 ಲಕ್ಷ ರೂ. ಮೌಲ್ಯದ ಹಣವನ್ನು ಅಧಿಕಾರಿಗಳು ಸೀಜ್​ ಮಾಡಿದ್ದಾರೆ.
ಇದನ್ನೂ ಓದಿರಿ:ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ವೈರಲ್​ ವಿಡಿಯೋ ಇಲ್ಲಿದೆ ನೋಡಿ…
ಪ್ರತಿ ಪ್ಯಾಕೆಟ್​ನಲ್ಲಿ ಹಣವನ್ನು ಕವರ್​ ಮಾಡಿ ತುಂಬಲಾಗಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಬ್ಯಾಗ್​ನ ಮಾಲೀಕ ಯಾರೆಂಬುದು ಇನ್ನು ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನದಲ್ಲಿ ಕಳ್ಳಸಾಗಾಣೆ ಮಾಡುವ ಪ್ರಕರಣಗಳು ಹೊಸದೇನಲ್ಲ. ಈಗಾಗಲೇ ಆಹಾರ, ಬಟ್ಟೆ, ಬ್ಯಾಗ್​, ಬೆಲ್ಟ್​, ಶೂ ಸೇರಿದಂತೆ ಅನೇಕ ಪದಾರ್ಥಗಳಲ್ಲಿ ಬೆಲೆಬಾಳುವ ವಸ್ತುಗಳನ್ನು ಕೆಲವೊಮ್ಮೆ ವಿಶೇಷ ಪ್ರಾಣಿಗಳನ್ನು ಬಚ್ಚಿಟ್ಟು ಸಾಗಿಸುವಾಗ ಕಸ್ಟಮ್ಸ್​ ಅಧಿಕಾರಿಗಳ ಕೈಯಲ್ಲಿ ಸಿಲುಕಿಕೊಳ್ಳುವ ಅನೇಕ ಉದಾಹರಣೆಗಳನ್ನು ನೋಡಿದ್ದೇವೆ.(ಏಜೆನ್ಸೀಸ್​)
ಮಾಜಿ ಸಿಎಂ ದಿ. ಧರ್ಮಸಿಂಗ್ ಸಂಬಂಧಿಯನ್ನ ಕೊಂದವ ತಿರುಪತಿಯಲ್ಲಿ ಆತ್ಮಹತ್ಯೆ!

ಒಂದು ಪ್ಲೇಟ್​ ಇಡ್ಲಿಗೆ ಈ ಆಸ್ಪತ್ರೆಯ ಬಿಲ್ ಮೊತ್ತ ಕೇಳಿದ್ರೆ ಖಂಡಿತ ಶಾಕ್​ ಆಗ್ತೀರಾ!​

ಮುಗ್ಧ ತಮ್ಮನ ಹೆಂಡತಿ ಮೇಲೆ ಬಿತ್ತು ಅಣ್ಣನ ಕಾಮದೃಷ್ಟಿ: ನಡದೇ ಹೋಯ್ತು ದುರಂತ ಘಟನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 4 =
Remember me
