ನವದೆಹಲಿ:ಕಳೆದ ಫೆಬ್ರವರಿ ಕೊನೆಯ ವಾರದಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಹಿಂಸಾತ್ಮಕ ಹಿಂದೂ ವಿರೋಧಿ ಗಲಭೆಗೆ ದೆಹಲಿ ಸಾಕ್ಷಿಯಾಗಿತ್ತು. ಅಪಾರ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದ್ದ ಈ ಗಲಭೆಗೆ ಹಲವು ದೇಶಗಳಿಂದ ಹಣದ ಹೊಳೆ ಹರಿದುಬಂದಿರುವ ಮಾಹಿತಿಯನ್ನು ಇದೀಗ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ ಈ ಹಿಂಸಾಚಾರಕ್ಕೆ ಯುನೈಟೆಡ್ ಕಿಂಗ್‌ಡಮ್, ಓಮನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (ಯುಎಇ) ಹಣ ಹರಿದು ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ. ಹಿಂದೂ ವಿರೋಧಿ ಹಿಂಸೆ ನಡೆಸುವ ಉದ್ದೇಶದಿಂದಲೇ ಹಣದ ನೆರವು ಹರಿದುಬಂದಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ ಎಂದಿದ್ದಾರೆ ಪೊಲೀಸರು. ಈ ಗಲಭೆಗೆ ಕುರಿತಂತೆ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಈ ಮಾಹಿತಿ ಸಿಕ್ಕಿವೆ.
ಇದೇ ವೇಳೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕೇಂದ್ರಿತ ದೆಹಲಿಯಲ್ಲಿ ನಡೆದ ಗಲಭೆಗಳನ್ನು ಪ್ರಚೋದಿಸಲು ಕೂಡ ಇಲ್ಲಿಂದಲೇ ಹಣ ಬಂದಿರುವುದು ಬೆಳಕಿಗೆ ಬಂದಿದೆ. ಗಲಭೆಗೆ ಕುರಿತಂತೆ ಬಂಧಿಸಲಾಗಿರುವ ಜಾಮಿಯಾ ಸಮನ್ವಯ ಸಮಿತಿಯ ಸದಸ್ಯರಿಂದ ದೊರೆತಿರುವ ದಾಖಲೆಗಳಲ್ಲಿ ಹಣ ಬಂದಿರುವ ವಿಷಯ ತಿಳಿದುಬಂದಿದೆ. ಮಾತ್ರವಲ್ಲದೇ, ಸಿಎಎ ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ಮಾಡುವಂತೆ 5 ಲಕ್ಷ ರೂ.ಗಳನ್ನು ಹೈದರ್ ಎಂಬಾತನ ಖಾತೆಗೆ ವರ್ಗಾಯಿಸಿರುವುದು ತಿಳಿದುಬಂದಿದೆ.
ಇದನ್ನೂ ಓದಿ:ಕಾನ್ಪುರ ಪೊಲೀಸ್ ಹತ್ಯೆ ಪ್ರಕರಣ ಮ್ಯಾಜಿಸ್ಟ್ರಿಯಲ್ ತನಿಖೆ: ದುಬೆಯ ಸೊಸೆ ಸಹಿತ ಮೂವರ ಸೆರೆ
ಗಲಭೆಯ ಕುರಿತಂತೆ ತನಿಖೆ ನಡೆಸುತ್ತಿರುವ ವಿಶೇಷ ತಂಡವು ಜಾಮಿಯಾ ಸಮನ್ವಯ ಸಮಿತಿಯ ಸದಸ್ಯ ಮಿರಾನ್ ಹೈದರ್‌ನನ್ನು ಈಗಾಗಲೇ ಬಂಧಿಸಿದೆ ಮತ್ತು ಹಿಂಸಾಚಾರದ ವಿವರಗಳನ್ನು ಒಳಗೊಂಡ ರಿಜಿಸ್ಟರ್ ಅನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ. ಹೈದರ್‌ನನ್ನು ಏಪ್ರಿಲ್‌ನಲ್ಲಿ ಬಂಧಿಸಲಾಗಿದ್ದು, ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಕೆಲವು ದಾಖಲೆಗಳಲ್ಲಿ ಕೈಬರಹಗಳು ಇದ್ದು, ಅವುಗಳನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಗಲಭೆಯ ಇನ್ನೋರ್ವ ಆರೋಪಿ ಖಾಲಿದ್ ಸೈಫಿಗೆ ಮೀರತ್ ಮೂಲದ ಸ್ವಯಂಸೇವಾ ಸಂಸ್ಥೆಯ ಮೂಲಕ ಮಲೇಷ್ಯಾದಿಂದ ಹಣ ಬಂದಿರುವುದು ತಿಳಿದುಬಂದಿದೆ.
ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
