ನವದೆಹಲಿ:ವಿದೇಶಿ ದೇಣಿಗೆ ಸ್ವೀಕರಿಸಲು ಅಗತ್ಯವಾದ ಫಾರಿನ್ ಕಾಂಟ್ರಿಬ್ಯೂಷನ್ ರೆಗ್ಯುಲೇಷನ್ ಆಕ್ಟ್ (ಎಫ್​ಸಿಆರ್​ಎ) ಪ್ರಕಾರ ಪಡೆಯಬೇಕಾದ ಪರವಾನಗಿ ನವೀಕರಿಸದ ಕಾರಣ 12,000ಕ್ಕೂ ಹೆಚ್ಚು ಎನ್​ಜಿಒಗಳ ಎಫ್​ಸಿಆರ್​ಎ ಪರವಾನಗಿಗಳು ರದ್ದಾಗಿದೆ.
ಗೃಹ ಸಚಿವಾಲಯದ ಮೂಲಗಳು ಇದನ್ನು ದೃಢೀಕರಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ. ಪರವಾನಗಿ ನವೀಕರಣಕ್ಕೆ ಡಿ.31ರ ಮಧ್ಯರಾತ್ರಿ ಗಡುವು ಇತ್ತು. 6,000ಕ್ಕೂ ಹೆಚ್ಚು ಎನ್​ಜಿಒಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದ ಕಾರಣ ರದ್ದುಗೊಂಡಿವೆ. ಒಟ್ಟಾರೆಯಾಗಿ 12,000ಕ್ಕೂ ಹೆಚ್ಚು ಎನ್​ಜಿಒಗಳು ಪರವಾನಗಿ ಕಳೆದುಕೊಂಡಿವೆ. ಸದ್ಯ 16,829
ಎನ್​ಜಿಒಗಳು ಮಾತ್ರವೇ ಎಫ್​ಸಿಆರ್​ಎ ಲೈಸೆನ್ಸ್ ಹೊಂದಿವೆ. ಇವುಗಳ ಪೈಕಿ ಕೆಲವು ಎನ್​ಜಿಒಗಳ ಪರವಾನಗಿ ನವೀಕರಿಸಲ್ಪಟ್ಟಿವೆ. ಇನ್ನು ಕೆಲವು ನವೀಕರಣಕ್ಕೆ ಅರ್ಜಿ ಸಲ್ಲಿಸಿವೆ. ಎಫ್​ಸಿಆರ್​ಎ ಪ್ರಕಾರ ನೋಂದಣಿ ಮಾಡಿಸಿಕೊಂಡಿರುವ ಎನ್​ಜಿಒಗಳ ಸಂಖ್ಯೆ 22,762. ಫಾರಿನ್ ಫಂಡ್ ಪಡೆಯಬೇಕಾದರೆ ಈ ನೋಂದಣಿ ಮಾಡಿಸಿಕೊಳ್ಳುವುದು ಅವಶ್ಯ.
ನಿಯಮ ಪಾಲಿಸದ ಪ್ರಮುಖ ಸಂಸ್ಥೆಗಳು:ಆಕ್ಸ್​ಫಾಮ್ ಇಂಡಿಯಾ ಟ್ರಸ್ಟ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಲೆಪ್ರಸಿ ಮಿಷನ್, ಟ್ಯೂಬರ್​ಕುಲೋಸಿಸ್ ಅಸೋಸಿಯೇಷನ್ ಆಫ್ ಇಂಡಿಯಾ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್.
ವ್ಯತಿರಿಕ್ತ ಮಾಹಿತಿ ನೀಡಿದ ಮಿಷನರೀಸ್:ಕೋಲ್ಕತದಲ್ಲಿ ಮದರ್ ತೆರೇಸಾ ಅವರಿಂದ ಸ್ಥಾಪಿಸಲ್ಪಟ್ಟ ಮಿಷನರೀಸ್ ಆಫ್ ಚಾರಿಟಿ ಅಧಿಕಾರಿಗಳು ಎಫ್​ಸಿಆರ್​ಎ ಲೈಸನ್ಸ್ ಪರವಾನಗಿಗೆ ಸಂಬಂಧಿಸಿ ನೀಡಿದ ಮಾಹಿತಿ ವ್ಯತರಿಕ್ತವಾಗಿದ್ದವು. ಹೀಗಾಗಿ ಲೈಸನ್ಸ್ ನವೀಕರಣ ಸಾಧ್ಯವಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿ ಸಿತ್ತು. ಇದರ ಪರಿಣಾಮ, ಮಿಷನರೀಸ್​ಗೆ ಸೇರಿದ ವಿದೇಶಿ ದೇಣಿಗೆ ಸಂಗ್ರಹದ 250ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳು ಸ್ತಂಭನಕ್ಕೆ ಒಳಗಾಗಿವೆ. ಇದನ್ನು ಮಿಷನರೀಸ್ ದೃಢೀಕರಿಸಿದೆ.
ಮತಾಂತರದ ದೂರು:ಮಿಷನರೀಸ್ ಆಫ್ ಚಾರಿಟಿಯ ಚಿಲ್ಡ›ನ್ ಹೋಮ್ ನಿರ್ದೇಶಕರೊಬ್ಬರು ಹೆಣ್ಣುಮಕ್ಕಳನ್ನು ಮತಾಂತರಗೊಳಿಸುತ್ತಿದ್ದಾರೆ ಎಂಬ ಬಗ್ಗೆ ಪೊಲೀಸ್ ದೂರು ಕೆಲವು ವಾರಗಳ ಹಿಂದೆ ಗುಜರಾತ್​ನಲ್ಲಿ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಚಾಲ್ತಿಯಲ್ಲಿರುವಾಗಲೇ, ಮಿಷನರೀಸ್ ವಿದೇಶಿ ದೇಣಿಗೆ ಸಂಬಂಧ ನೀಡಬೇಕಾದ ದಾಖಲೆಗಳನ್ನು ಸಲ್ಲಿಸಿಲ್ಲ ಮತ್ತು ಎಫ್​ಸಿಆರ್​ಎ ಲೈಸೆನ್ಸ್ ನವೀಕರಣಕ್ಕೂ ಅರ್ಜಿ ಸಲ್ಲಿಸಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಇದೇ ವೇಳೆ, ಬ್ಯಾಂಕ್ ಖಾತೆಗಳನ್ನು ಸ್ತಂಭನಗೊಳಿಸುವಂತೆ ಮಿಷನರೀಸ್ ಅಧಿಕಾರಿಗಳೇ ಸೂಚಿಸಿದ್ದರು ಎಂದು ಎಸ್​ಬಿಐ ಹೇಳಿಕೆ ನೀಡಿತ್ತು.
ಆರ್​ಆರ್​ಆರ್ ಬಿಡುಗಡೆ ಮತ್ತೆ ಮುಂದಕ್ಕೆ; ಅವಕಾಶ ಬಳಸಿಕೊಳ್ಳುತ್ತಾನಾ ಭಿಮ್ಲಾ ನಾಯಕ್?

ಜಗತ್ತಿನಲ್ಲಿ ಕಳೆದ ವರ್ಷ ಒಟ್ಟು 45 ಪತ್ರಕರ್ತರ ಕೊಲೆ!; ಇದು ಸಮಾಧಾನದ ಸಂಗತಿ, ಏಕೆಂದರೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
