ನವದೆಹಲಿ:ಇತ್ತೀಚೆಗೆ ದೇಶದ ವಿವಿಧೆಡೆ ಮೇಘಸ್ಫೋಟ ಸಂಭವಿಸಿ ಬಹಳಷ್ಟು ಸಾವು-ನೋವು ಸಂಭವಿಸಿದ್ದನ್ನು ಬಹುತೇಕ ಎಲ್ಲರೂ ನೋಡಿದ್ದಾರೆ, ಕೇಳಿದ್ದಾರೆ. ಇದು ಪ್ರಕೃತಿವಿಕೋಪ ಎಂದೇ ಹೇಳಲಾಗಿದ್ದರೂ, ಈ ಬಗ್ಗೆ ಈಗ ಇನ್ನೊಂದು ಆತಂಕಕಾರಿ ಮಾಹಿತಿ ಹೊರಬಿದ್ದಿದೆ.
ದೇಶದಲ್ಲಿ ಸಂಭವಿಸಿರುವ ಮೇಘಸ್ಫೋಟಗಳ ಹಿಂದೆ ವಿದೇಶಿ ಕೈವಾಡ ಇರಬಹುದು ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅಭಿಪ್ರಾಯಪಟ್ಟಿದ್ದಾರೆ. ತಮಗೆ ಬಂದಿರುವ ಕೆಲವು ಮಾಹಿತಿ ಪ್ರಕಾರ ದೇಶದಲ್ಲಿ ಸಂಭವಿಸಿರುವ ಮೇಘಸ್ಫೋಟಗಳ ಹಿಂದೆ ವಿದೇಶಿಯರ ಕೈವಾಡ ಇದೆ ಎಂದು ಅವರು ಹೇಳಿದ್ದಾರೆ.
ಮೇಘಸ್ಫೋಟಗಳ ಮೂಲಕ ಆಧುನಿಕ ರೀತಿಯಲ್ಲಿ ಪಿತೂರಿ ಮಾಡಲಾಗುತ್ತಿದೆ ಎಂದು ನನಗೆ ಮಾಹಿತಿ ಬಂದಿದೆ. ಮೊದಲು ಲೇಹ್​ನಲ್ಲಿ ಆಯ್ತು, ನಂತರ ಉತ್ತರಾಖಂಡದಲ್ಲಿ, ಬಳಿಕ ನಮ್ಮ ಗೋದಾವರಿ ನದಿಪಾತ್ರದಲ್ಲೂ ಮೇಘಸ್ಫೋಟ ಆಗಿದೆ. ಕೆಲವು ವಿದೇಶಗಳು ನಮ್ಮ ದೇಶದಲ್ಲಿ ಮೇಘಸ್ಫೋಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅದು ಎಷ್ಟರಮಟ್ಟಿಗೆ ಸತ್ಯ ಎಂದು ತಿಳಿದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.
ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದೇಕೆ? ಮತ್ತೆ ಅಲ್ಲೇ ಸ್ಪರ್ಧಿಸುತ್ತಾರಾ?: ಎರಡಕ್ಕೂ ಉತ್ತರ ಕೊಟ್ರು ಮಾಜಿ ಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
