ಜೈಪುರ:ವಿದೇಶಿ ಮಹಿಳೆಯೊಬ್ಬಳು ರಾಜಸ್ಥಾನ ರಾಜಧಾನಿ ಜೈಪುರದ ಫೈವ್​ ಸ್ಟಾರ್​ ಹೋಟೆಲ್​ನಲ್ಲಿ ಬೆತ್ತಲಾಗುವ ಮೂಲಕ ಭಾರೀ ಹೈಡ್ರಾಮ ಸೃಷ್ಟಿಸಿದ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಕೂಗಾಡುತ್ತಲೇ ಕೋಣೆಯಿಂದ ಬೆತ್ತಲಾಗಿ ಹೊರಬಂದ ವಿದೇಶಿ ಮಹಿಳೆ ಹೋಟೆಲ್​ ಸಿಬ್ಬಂದಿಯನ್ನು ಬಾಯಿಗೆ ಬಂದಂತೆ ನಿಂದಿಸಿ ಭಾರೀ ಗಲಾಟೆ ಎಬ್ಬಿಸಿದಳು. ಅಲ್ಲದೆ, ಸಿಬ್ಬಂದಿ ಮೇಲೆ ದಾಳಿಗು ಮುಂದಾದಳು. ಮೈ ಮೇಲೆ ಒಂಚೂರು ಬಟ್ಟೆ ಇಲ್ಲದೆ ಸಂಪೂರ್ಣ ಬೆತ್ತಲಾದ ಮಹಿಳೆ, ಹೋಟೆಲ್​ನ ಪುರುಷ ಸಿಬ್ಬಂದಿ ಎದುರು ಅಸಭ್ಯವಾಗಿ ವರ್ತಿಸಿದಳು.
ವಿದೇಶಿ ಮಹಿಳೆ ಆ ರೀತಿ ವರ್ತಿಸಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಹೋಟೆಲ್​ನಲ್ಲಿ ಸರಿಯಾಗಿ ನೋಡಿಕೊಳ್ಳಲಿಲ್ಲ ಅಂತಾ ಈ ರೀತಿ ವರ್ತಿಸಿದ್ದಾಳೆ ಎನ್ನಲಾಗಿದೆ. ಕೊನೆಗೆ ಮಹಿಳೆಯ ಕಾಟ ತಾಳದೇ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿ ದೂರು ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ಜಾಲತಾಣದಲ್ಲಿ ಮಹಿಳೆಯ ವಿಡಿಯೋ ವೈರಲ್​ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಏನಾದರೂ ಸಮಸ್ಯೆ ಇದ್ದರೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳಬಾರದು. ಈ ರೀತಿಯ ವರ್ತನೆಯನ್ನು ನಿಮ್ಮ ದೇಶದಲ್ಲಿ ಇಟ್ಟುಕೊಳ್ಳಿ, ಇದು ಭಾರತ. ಇಲ್ಲಿ ನಮ್ಮದೇಯಾದ ಸಂಸ್ಕೃತಿ ಇದೆ ಎಂದು ನೆಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ.(ಏಜೆನ್ಸೀಸ್​)
ON CAMERA: Naked foreigner woman thrashes hotel staff in Jaipur; claims mistreatmentpic.twitter.com/usjTYDa2pM
— Free Press Journal (@fpjindia)December 17, 2022

ಸಾರ್ವಜನಿಕರಿಂದ ಕಿರುಕುಳ ಆರೋಪ: ಸಿರವಾರ ಪಿಎಸ್​ಐ ಗೀತಾಂಜಲಿ ಶಿಂಧೆ ಅಮಾನತು

ತಮಿಳುನಾಡು ರಾಜಕಾರಣದಲ್ಲಿ ಅಣ್ಣಾಮಲೈ ದುಬಾರಿ ವಾಚ್​ನದ್ದೇ ಸದ್ದು! ಇದರ ವಿಶೇಷತೆ ತಿಳಿದ್ರೆ ಹುಬ್ಬೇರಿಸ್ತೀರಾ​

ಬೀಚ್​ಗೆ ಮೈತುಂಬ ಬಟ್ಟೆ ಹಾಕ್ಕೊಂಡು ಬಂದು ಟ್ರೋಲ್​ ಆದ ಬೋಲ್ಡ್​ ಬ್ಯೂಟಿ ಉರ್ಫಿ ಜಾವೇದ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
