ನವದೆಹಲಿ:ಭಾರತ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆಯೊಬ್ಬಳು ರೈಲಿನಲ್ಲಿ ಕಳೆದುಕೊಂಡಿದ್ದ ತನ್ನ ಪ್ರಮುಖ ವಸ್ತುಗಳನ್ನು ಮರಳಿ ಪಡೆದಾಗ ಭಾವುಕರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೆರಿಕ ಮೂಲದ ಮಹಿಳೆ ರೈಲಿನಿಂದ ಕೆಳಗೆ ಇಳಿಯುವಾಗ ತನ್ನ ವ್ಯಾಲೆಟ್ ಅನ್ನು ಮರೆತಿದ್ದರು. ಬಳಿಕ ಚಿರಾಗ್​ ಎಂಬಾತ ಇನ್​ಸ್ಟಾಗ್ರಾಂನಲ್ಲಿ ವಿದೇಶಿ ಮಹಿಳೆಯನ್ನು ಸಂಪರ್ಕಿಸಿ, ನಿಮ್ಮ ವಸ್ತುಗಳು ನಮ್ಮ ಬಳಿ ಇವೆ ಎಂದು ಹೇಳಿ ಮತ್ತೆ ಆಕೆಗೆ ವಸ್ತುಗಳನ್ನು ತಲುಪಿಸಿದ್ದಾರೆ. ಈ ಘಟನೆ ಗುಜರಾತಿನ ಭುಜ್​ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ:ಪುರುಷರು-ಮಹಿಳೆಯರು ಇಬ್ಬರಲ್ಲಿ ಯಾರು ಹೆಚ್ಚು ಮೋಸ ಮಾಡ್ತಾರೆ? ಯುವಕ ಕೊಟ್ಟ ಉತ್ತರ ಸಿಕ್ಕಾಪಟ್ಟೆ ವೈರಲ್​
ಚಿರಾಗ್​ ಬಳಿ ಕಳೆದು ಹೋದ ವಸ್ತುಗಳನ್ನು ಪಡೆದ ವಿದೇಶಿ ಮಹಿಳೆ ಭಾವುಕರಾದರು. ಚಿರಾಗ್​ಗೆ ಧನ್ಯವಾದ ತಿಳಿಸಿದ ಮಹಿಳೆ, ಆತನಿಗೆ ಹಣವನ್ನು ನೀಡಲು ಮುಂದಾದರು. ಆದರೆ, ಚಿರಾಗ್​ ಮಾತ್ರ ಹಣ ಪಡೆಯಲಿಲ್ಲ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು @stephandpete ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, 50 ಸಾವಿರಕ್ಕೂ ಅಧಿಕ ಲೈಕ್​ ಬಂದಿವೆ.
ನೀವು ವಾಲೆಟ್​ ಅನ್ನು ಮರಳಿ ಪಡೆದಿದ್ದು ಸಂತೋಷವಾಗಿದೆ. ಚಿರಾಗ್​ನಂತಹ ವ್ಯಕ್ತಿಯ ಮೇಲೆ ನನಗೆ ಹೆಮ್ಮೆ ಇದೆ. ನೀವು ಭಾರತದಲ್ಲಿ ಉತ್ತಮ ವಾಸ್ತವ್ಯವನ್ನು ಹೊಂದಿದ್ದೇನೆಂದು ಭಾವಿಸಿದ್ದೇನೆ. ನಿಮ್ಮ ಮೇಲೆ ತುಂಬಾ ಪ್ರೀತಿ ಇದೆ ಎಂದು ವಿಡಿಯೋಗೆ ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ. ಚಿರಾಗ್​ನಂತಹ ವ್ಯಕ್ತಿಗಳು ಭಾರತೀಯ ಪ್ರವಾಸೋದ್ಯಮದ ನಿಜವಾದ ರಾಯಭಾರಿಯಾಗಿದ್ದಾರೆ. ಸರಿಯಾದ ಇಂಗ್ಲಿಷ್​ ಗೊತ್ತಿಲ್ಲದಿದ್ದರೂ ಮಹಿಳೆಯ ಹೆಸರನ್ನು ಸರಿಯಾಗಿ ಬರೆದು ಕಳೆದುಹೋಗಿದ್ದ ವಸ್ತುಗಳನ್ನು ಮರಳಿಸಿರುವುದು ನಿಜಕ್ಕೂ ಶ್ರೇಷ್ಠ ಸಂಗತಿ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದು, ಚಿರಾಗ್​ಗೆ ಸಾಕಷ್ಟು ಮೆಚ್ಚುಗೆಗಳು ವ್ಯಕ್ತವಾಗುತ್ತಿವೆ. (ಏಜೆನ್ಸೀಸ್​)

A post shared by Steph & Pete | Family Travel (@stephandpete_)

ಉಗ್ರರಿಂದ ಗುಂಡಿನ ದಾಳಿ; ಪುಲ್ವಾಮಾದಲ್ಲಿ ಓರ್ವ ಕಾಶ್ಮೀರಿ ಪಂಡಿತ ಮೃತ್ಯು

ಪರೀಕ್ಷಾ ಕೇಂದ್ರಕ್ಕೆ ಹೋಗಲು ದಾರಿ ತಪ್ಪಿ ಅಳುತ್ತ ನಿಂತಿದ್ದ ವಿದ್ಯಾರ್ಥಿನಿ: ಜೀರೋ ಟ್ರಾಫಿಕ್​​ನಲ್ಲಿ ಕರೆದೊಯ್ದ ಪೊಲೀಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 14 =
Remember me
