ಭೋಪಾಲ್​​:ಆಕಸ್ಮಿಕವಾಗಿ ಗಂಡನ ಮೊಬೈಲ್​ ನೋಡಿದ ಮಹಿಳೆಯೊಬ್ಬಳಿಗೆ ಪತಿಯ ಮೊದಲನೇ ಮದುವೆಯ ರಹಸ್ಯ ಬೆಳಕಿಗೆ ಬಂದು ಪೊಲೀಸ್​ ಠಾಣೆಯ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಜಬಲ್​ಪುರದಲ್ಲಿ ನಡೆದಿದೆ. ಪತಿ ಮಾತ್ರವಲ್ಲದೆ ಅತ್ತೆ-ಮಾವನ ಕಿರುಕುಳ ತಾಳದೇ ಸಂತ್ರಸ್ತೆ ಕಾನೂನಿನ ಮೊರೆ ಹೋಗಿದ್ದಾಳೆ.
ಮನೇಗಾಂವ್ ರಾಂಝಿ ನಿವಾಸಿ ರೂಪಾಲಿ ಪಟೇಲ್​ 2019 ಡಿಸೆಂಬರ್​ನಲ್ಲಿ ಅಮನ್​ಪುರ್​ ನಿವಾಸಿ ಹಾಗೂ ಅರಣ್ಯ ಸಿಬ್ಬಂದಿ ಶಿವ್​ಚರಣ್​ ಸಿಂಗ್​ ಪಟೇಲ್​ ಎಂಬಾತನನ್ನು ಮದುವೆ ಆಗಿದ್ದಾರೆ. ನಿಶ್ಚಿತಾರ್ಥದ ಬಳಿಕ ಗಂಟೆಗಟ್ಟಲೇ ಜಾಲತಾಣ ಮತ್ತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದರು. ಆದರೆ, ಮದುವೆಯಾದ ಬಳಿಕ ವರಸೆ ಬದಲಾಯಿಸಿದ್ದಾರೆ ಎಂದಿರುವ ರೂಪಾಲಿ, ನನ್ನ ಮಗ ಸರ್ಕಾರಿ ಕೆಲಸದಲ್ಲಿದ್ದಾನೆ. ವರದಕ್ಷಿಣೆಯಾಗಿ ಕಾರು ಕೊಡಬೇಕೆಂದು ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದರು ಎಂದು ಆರೋಪಿಸಿದ್ದಾಳೆ.
ಇದನ್ನೂ ಓದಿರಿ:ಬ್ಯಾಚಲರ್ ಹುಡುಗರಿದ್ದ ಮನೆಯಲ್ಲಿ ವಿವಾಹಿತೆಯ ಶವ!; ಕೆಲಸಕ್ಕೆಂದು ಹೋಗಿದ್ದವಳು ಅಲ್ಲೇಕೆ ಹೋದಳು?
ಕಾರು, ಎರಡು ಲಕ್ಷ ನಗದು ಬೇಕೆಂದು ಒತ್ತಾಯಿಸಿದರು. ಪತಿಯ ನಡವಳಿಕೆ ದಿನ ಕಳೆದಂತೆ ಕ್ರೂರವಾಗಿ ಬದಲಾಯಿತು. ಸಣ್ಣ ಸಣ್ಣ ವಿಚಾರಕ್ಕೆ ದಾಳಿ ಮಾಡಲು ಮುಂದಾದರು. ಕೋಪದಿಂದ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು. ನನ್ನನ್ನು ಮನೆಯ ಕೆಲಸದಾಳು ರೀತಿ ನೋಡುತ್ತಿದ್ದರು. ಅಲ್ಲದೆ, ಕೆಲಸದ ಮೇಲೆ ಹೊರ ಹೋಗುವುದಾಗಿ ಹೇಳಿ ಹೆಚ್ಚಿನ ದಿನ ಹೊರಗಡೆಯೇ ಉಳಿಯುತ್ತಿದ್ದರು. ಕೆಲವು ದಿನಗಳ ನಂತರ ಗಂಡನ ಮೊಬೈಲ್​ ಮತ್ತು ಲ್ಯಾಪ್​ಟಾಪ್​ನಲ್ಲಿ ಓರ್ವ ಮಹಿಳೆ ಮತ್ತು ಮಗುವಿನೊಂದಿಗೆ ಇರುವ ಫೋಟೋವನ್ನು ನೋಡಿದೆ. ಮಹಿಳೆ ಮತ್ತು ಪತಿಯ ನಡುವೆ ಇರುವ ಸಂಬಂಧದ ಬಗ್ಗೆ ತಿಳಿಯಿತು. ಮೊದಲ ಪತ್ನಿ ಎಂಬ ವಿಚಾರ ಗೊತ್ತಾಯಿತು.
ಈ ಬಗ್ಗೆ ಅತ್ತೆ-ಮಾವನನ್ನು ಪ್ರಶ್ನಿಸಿದಾಗ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಮಗನ ಬಗ್ಗೆ ಮಾತ್ರ ಯಾವ ಮಾತನ್ನು ಆಡುತ್ತಿರಲಿಲ್ಲ. ಎಲ್ಲ ವಿಚಾರಕ್ಕೂ ನನ್ನ ಮೇಲೆಯೇ ದಾಳಿ ಮಾಡುತ್ತಿದ್ದರು. ಏಕೆಂದು ಕೇಳಿದರೆ, ಕಡಿಮೆ ವರದಕ್ಷಿಣೆ ನೀಡಿದ್ದಕ್ಕಾಗಿ ಕಿರುಕುಳ ನೀಡುತ್ತಿರುವುದಾಗಿ ಹೇಳುತ್ತಿದ್ದರು ಎಂದು ರೂಪಾಲಿ ನೋವು ತೋಡಿಕೊಂಡಿದ್ದಾಳೆ.
ಇದನ್ನೂ ಓದಿ:ಮರ್ಡರ್ ಆದ ವೆಲ್ಡರ್​: ರಾತ್ರಿ ಮನೆಯಲ್ಲೇ ಇದ್ದ, ಬೆಳಗ್ಗೆ ತೋಟದಲ್ಲಿ ಹೆಣವಾಗಿ ಬಿದ್ದಿದ್ದ..!
ಕೊನೆಗೂ ದೌರ್ಜನ್ಯ ಸಹಿಸದ ರೂಪಾಲಿ ಸೋಮವಾರ ಪತಿಯನ್ನು ಸೇರಿಸಿದಂತೆ ಅವರ ಕುಟುಂಬದ ವಿರುದ್ಧ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್​ 498, 323, 506 ಮತ್ತು 406 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
1.5 ಕೋಟಿ ರೂ.ಗೆ ವಿವಾಹಿತ ಬಾಯ್​ಫ್ರೆಂಡ್​ ಖರೀದಿಸಿದ ಮಹಿಳೆ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ!

ಬೇಡ ಎಂದು ಎಸೆದಿದ್ದ ಮೊಬೈಲ್​ ಕವರ್​ಗೆ​ ಸಿಕ್ತು 1.19 ಕೋಟಿ ರೂಪಾಯಿ!

ಮೂರು ವರ್ಷ ಹಿಂದಿನ ಕೊಲೆ ಯತ್ನ ರಹಸ್ಯ ಬಿಚ್ಚಿಟ್ಟ ಇಸ್ರೋ ವಿಜ್ಞಾನಿ: ದೋಸೆ ಚಟ್ನಿಯಲ್ಲಿ ವಿಷಪ್ರಾಶನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
