ನವದೆಹಲಿ:ನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ಮೇಲೆ ನಿಗಾ ವಹಿಸಲು ವಿಶೇಷ ನ್ಯಾಯಪೀಠಗಳನ್ನು ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ದೇಶದ ಎಲ್ಲಾ ಹೈಕೋರ್ಟ್​ಗಳಿಗೆ ನಿರ್ದೇಶನ ನೀಡಿದೆ. ಜನಪ್ರತಿನಿಧಿಗಳ ಬಾಕಿ ಉಳಿದಿರುವ ಕ್ರಿಮಿನಲ್ ಕೇಸುಗಳ ಶೀಘ್ರ ಇತ್ಯರ್ಥವನ್ನು ಮೇಲ್ವಿಚಾರಣೆ ಮಾಡುವ ಸಲುವಾಗಿ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆಯೂ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಇಂಥ ಕೇಸುಗಳ ವಿಚಾರಣೆ ಮಾಡುವ ನ್ಯಾಯಪೀಠದ ನೇತೃತ್ವವನ್ನು ಆಯಾ ಹೈಕೋರ್ಟ್​ಗಳ ಮುಖ್ಯ ನ್ಯಾಯಮೂರ್ತಿ ವಹಿಸುವಂತೆಯೂ ತಿಳಿಸಲಾಗಿದೆ.
ಸಂಸದರು/ಶಾಸಕರ ವಿರುದ್ಧ ಮರಣದಂಡನೆ ವಿಧಿಸಬಹು ದಾದ ಪ್ರಕರಣಗಳಿಗೆ ಇತರ ಪ್ರಕರಣಗಳಿಗಿಂತ ಹೆಚ್ಚು ಆದ್ಯತೆ ನೀಡಿ ವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಕ್ರಿಮಿನಲ್ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಕೆಳ ಹಂತದ ವಿಚಾರಣಾ ನ್ಯಾಯಾಲಯಗಳಿಗೆ ಏಕರೂಪದ ಮಾರ್ಗಸೂಚಿಗಳನ್ನು ನೀಡುವುದು ಕಷ್ಟ ಎಂದು ಸುಪ್ರೀಂಕೋರ್ಟ್ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ತಿಳಿಸಿದೆ. ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ಸ್ಥಿತಿಗತಿಗಳ ಕುರಿತ ಮಾಹಿತಿ ಪಡೆದುಕೊಳ್ಳಲು ಹೈಕೋರ್ಟ್​ಗಳು ಕೆಳ ನ್ಯಾಯಾಲಯಳಿಗೆ ಸೂಚನೆ ನೀಡಬಹುದಾಗಿ ಹೇಳಿದೆ.
ತೀರಾ ಅಪರೂಪ ಮತ್ತು ಬಲವಾದ, ಸಮರ್ಥನೀಯ ಕಾರಣಗಳಿದ್ದ ಸಂದರ್ಭದಲ್ಲಿ ಮಾತ್ರ ವಿಚಾರಣಾ ನ್ಯಾಯಾಲಯಗಳು ಕ್ರಿಮಿನಲ್ ಕೇಸುಗಳ ವಿಚಾರಣೆಯನ್ನು ಮುಂದೂಡುವಂತಹ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿಚಾರಣೆ ಮುಂದೂಡಿಕೆ ಆದ್ಯತೆಯಾಗಿಬಾರದು ಎಂದೂ ಎಚ್ಚರಿಕೆ ನೀಡಿದೆ. ಹೈಕೋರ್ಟ್​ಗಳು ತಮ್ಮ ವೆಬ್​ಸೈಟ್​ನಲ್ಲಿ ಅರ್ಜಿ ಫೈಲ್ ಮಾಡಿದ ವರ್ಷ, ಬಾಕಿ ಇರುವ ಪ್ರಕರಣಗಳ ಸಂಖ್ಯೆ ಮತ್ತು ಪ್ರಕ್ರಿಯೆಗಳ ಹಂತಗಳ ಬಗ್ಗೆ ಜಿಲ್ಲಾವಾರು ಮಾಹಿತಿಯನ್ನು ಒದಗಿಸುವ ಸ್ವತಂತ್ರ ಟ್ಯಾಬ್ ಒಂದನ್ನು ರಚಿಸಬೇಕು. ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡುವಾಗ, ವಿಶೇಷ ಪೀಠವು ಪ್ರಕರಣಗಳ ಆರಂಭಿಕ ವಿಲೇವಾರಿಗೆ ಅಗತ್ಯವಾದ ಹೆಚ್ಚುವರಿ ನಿರ್ದೇಶನಗಳನ್ನು ಕೂಡ ನೀಡಬಹುದು ಎಂದಿರುವ ಸುಪ್ರೀಂಕೋರ್ಟ್, ನ್ಯಾಯಾಲಯಗಳಿಗೆ ಮೂಲಸೌಕರ್ಯ, ತಾಂತ್ರಿಕ ಸೌಲಭ್ಯ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದೆ.
ವಿಶೇಷ ಪೀಠವು ತನ್ನ ಅಗತ್ಯಕ್ಕೆ ತಕ್ಕಂತೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬಹುದು. ಪ್ರಕರಣಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ವಿಲೇವಾರಿ ಮಾಡಲು ಅಗತ್ಯ ಆದೇಶ, ನಿರ್ದೇಶನಗಳನ್ನು ನೀಡಬಹುದು. ವಿಶೇಷ ಪೀಠವು ತನ್ನ ಸಹಾಯಕ್ಕಾಗಿ ಅಡ್ವೊಕೇಟ್ ಜನರಲ್ ಅಥವಾ ಪಬ್ಲಿಕ್ ಪ್ರಾಸಿಕ್ಯೂಟರ್​ಗಳನ್ನು ನೇಮಕ ಮಾಡಿಕೊಳ್ಳಬಹುದು.
| ಸುಪ್ರೀಂ ಕೋರ್ಟ್
ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಮೇಲ್ಸಂತಿ ಅಥವಾ ಪ್ರಧಾನ ಅರ್ಚಕರ ಇತ್ತೀಚಿನ ನೇಮಕಾತಿ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯೊಂದನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಚುನಾವಣಾ ಪ್ರಕ್ರಿಯೆಯ ವೀಡಿಯೊ ಕ್ಲಿಪ್ಪಿಂಗ್ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಶಬರಿಮಲೆ ಧರ್ಮ ಶಾಸ್ತಾ ದೇವಾಲಯದ ಪ್ರಧಾನ ಅರ್ಚಕರ ಹಸ್ತಕ್ಷೇಪ ಮಾಡಲು ನಮಗೆ ಯಾವುದೇ ಸಮರ್ಪಕ ಕಾರಣ ಕಾಣುತ್ತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಅಯ್ಯಪ್ಪ ದೇವರ ಭಕ್ತ ಮಧುಸೂದನನ್ ನಂಬೂದಿರಿ ಅವರು ಮಹೇಶ್ ಪಿ ಎನ್ ಅವರ ನೇಮಕಾತಿ ಪ್ರಶ್ನಿಸಿ, ಆಯ್ಕೆ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಲು ತಿರುವಾಂಕೂರು ದೇವಸ್ವಂ ಮಂಡಳಿಗೆ ನಿರ್ದೇಶನ ಕೋರಿ ಮನವಿ ಸಲ್ಲಿಸಿದ್ದರು.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದ ಸರ್ಕಾರಿ ವೈದ್ಯರೊಬ್ಬರಿಗೆ ರಾಜಸ್ಥಾನ ಹೈಕೋರ್ಟ್ ಅನುಮತಿ ನೀಡಿದ್ದು, ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಕೆಲಸಕ್ಕೆ ಮರಳುವ ಅವಕಾಶವನ್ನೂ ನೀಡಿದೆ. ಹೈಕೋರ್ಟ್​ನ ಈ ಆದೇಶದಿಂದಾಗಿ ಡುಂಗರ್​ಪುರ್ ಕ್ಷೇತ್ರದಿಂದ ಬಿಟಿಪಿ ಪಕ್ಷದ ಅಭ್ಯರ್ಥಿಯಾಗಿ ದೀಪಕ್ ಗೋಘ್ರಾ ಎಂಬವರು ಕಣಕ್ಕಿಳಿಯಲಿದ್ದಾರೆ. ದೀಪಕ್ ಗೋಘ್ರಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ದರಿಂದ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಹೈಕೋರ್ಟ್​ನ ಜೋಗ್​ಪುರ ಪೀಠ ಆದೇಶ ನೀಡಿತ್ತು. ರಾಜಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ವೈದ್ಯರೊಬ್ಬರು ವೃತ್ತಿಯಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದ ಮಾತ್ರಕ್ಕೆ ಹೆರಿಗೆ ರಜೆಯ ವಿಷಯದಲ್ಲಿ ತಾಯಿಯ ವಿರುದ್ಧ ಯಾವುದೇ ಪಕ್ಷಪಾತ ಸಲ್ಲದು ಎಂದು ರಾಜಸ್ಥಾನ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಬಾಡಿಗೆ ತಾಯ್ತನದ ಪ್ರಕ್ರಿಯೆಯ ಮೂಲಕ ಮಗುವನ್ನು ಹೆರುವ ತಾಯಿಗೆ ಹೆರಿಗೆ ರಜೆಯನ್ನು ಯಾವುದೇ ಕಾರಣಕ್ಕೂ ನಿರಾಕರಿಸುವಂತಿಲ್ಲ. ಬಾಡಿಗೆ ತಾಯಂದಿರಿಗೆ ಹೆರಿಗೆ ರಜೆ ನಿರಾಕರಣೆ ಮಾಡಿದರೆ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಅವರ ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ. ಆರ್ಟಿಕಲ್ 21ರ ಅಡಿಯಲ್ಲಿ ಜೀವಿಸುವ ಹಕ್ಕು ಮಾತೃತ್ವದ ಹಕ್ಕನ್ನು ಮತ್ತು ಪ್ರತಿ ಮಗುವಿನ ಪೂರ್ಣ ಬೆಳವಣಿಗೆಯ ಹಕ್ಕನ್ನೂ ಒಳಗೊಂಡಿದೆ. ಮಗು ದತ್ತು ಪಡೆದ ತಾಯಿಗೆ ಹೆರಿಗೆ ರಜೆ ನೀಡಲು ಸಾಧ್ಯವಾದರೆ, ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆರುವ ತಾಯಿಗೆ ಹೆರಿಗೆ ರಜೆ ನೀಡಲು ನಿರಾಕರಿಸುವುದು ಸಂಪೂರ್ಣ ಅಸಮರ್ಪಕ ಎನಿಸುತ್ತದೆ. ನಿಸರ್ಗದತ್ತವಾಗಿ ಮಗುಹೆತ್ತ ತಾಯಿ ತಾಯಿ ಮತ್ತು ಬಾಡಿಗೆ ತಾಯಿಯ ನಡುವೆ ವ್ಯತ್ಯಾಸ ಮಾಡುವುದು ಮಾತೃತ್ವವನ್ನೇ ಅವಮಾನಿಸಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 16 =
Remember me
