ನವದೆಹಲಿ:ಭಾರತ ಸರ್ಕಾರ ನಿಷೇಧಿಸಿರುವ 59 ಚೀನಾದ ಆ್ಯಪ್​ಗಳ ಪರವಾಗಿ ನ್ಯಾಯಾಲದಲ್ಲಿ ಯಾವ ಕಾರಣಕ್ಕೂ ವಾದಿಸುವುದಿಲ್ಲ ಎಂದು ಮಾಜಿ ಅಟಾರ್ನಿ ಜನರಲ್​, ಸುಪ್ರೀಂಕೋರ್ಟ್​ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದ್ದಾರೆ.
ಟಿಕ್​ಟಾಕ್​ ಸೇರಿ 59 ಆ್ಯಪ್​​ಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಆಕ್ಷೇಪಣಾ ಅರ್ಜಿಯನ್ನು ಸಲ್ಲಿಸುವುದಿಲ್ಲ. ಚೀನಾದ ಕಂಪನಿಗಳನ್ನು ಪ್ರತಿನಿಧಿಸಿ ವಾದ ಮಂಡನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭವಿಷ್ಯದಲ್ಲಿ ಯಾರೇ ಕೇಂದ್ರದ ಆದೇಶದ ವಿರುದ್ಧ ಆಕ್ಷೇಪಣಾ ಅರ್ಜಿ ಸಲ್ಲಿಸಿ, ವಾದ ಮಂಡಿಸಲು ಮನವಿ ಮಾಡಿದರೂ ಸರಿ ಅದಕ್ಕೆ ನಾವು ಒಪ್ಪುವುದಿಲ್ಲ. ನಮಗೆ ಆ್ಯಪ್​​ಗಳ ಬಳಕೆದಾರರ ಖಾಸಗಿ ಮಾಹಿತಿಗಳ ಸುರಕ್ಷತೆ, ಸಮಗ್ರತೆ ತುಂಬ ಮುಖ್ಯ ಎಂದಿದ್ದಾರೆ.ಪೂರ್ವ ಲಡಾಖ್​​ನಲ್ಲಿ ಗಡಿ ಸಂಘರ್ಷ ಏರ್ಪಟ್ಟು, ಭಾರತದ 20 ಯೋಧರು ಮೃತರಾದ ಬೆನ್ನಲ್ಲೇ, ಭಾರತ ಚೀನಾ ವಿರುದ್ಧ ಆರ್ಥಿಕ ಯುದ್ಧ ಸಾರಲು ಮುಂದಾಗುತ್ತಿದೆ. ಕೇಂದ್ರ ಸರ್ಕಾರ ಚೀನಾದ ಪ್ರಸಿದ್ಧ ಟಿಕ್​ಟಾಕ್​ ಸೇರಿ 59 ಆ್ಯಪ್​​ಗಳನ್ನು ನಿಷೇಧ ಮಾಡಿದೆ. (ಏಜೆನ್ಸೀಸ್​)
ಕೋವಿಡ್​ನಿಂದ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ, ನಿಮ್ಮ ಹುಷಾರಿನಲ್ಲಿ ನೀವಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + eighteen =
Remember me
