ನವದೆಹಲಿ:ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್​ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು.
ಮಾಜಿ ಸಿಜೆಐನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ಎಷ್ಟು ಆಶ್ಚರ್ಯ ಮೂಡಿಸಿತ್ತೋ, ಅಷ್ಟೇ ಕುತೂಹಲ ಈ ಆಯ್ಕೆಯನ್ನು ರಂಜನ್​ ಗೊಗೊಯಿ ಅವರು ಒಪ್ಪಿಕೊಂಡ ಬಗ್ಗೆಯೂ ಇತ್ತು. ಯಾವ ಒಂದು ದೂರದೃಷ್ಟಿಯನ್ನು ಇಟ್ಟುಕೊಂಡು ರಾಜ್ಯಸಭೆಗೆ ಕಾಲಿಟ್ಟಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು.
ಈ ಕುತೂಹಲ, ಪ್ರಶ್ನೆಗಳಿಗೆ ಸ್ವತಃ ರಂಜನ್​ ಗೊಗೊಯಿ ಅವರೇ ಉತ್ತರಿಸಿದ್ದಾರೆ. ತಾವ್ಯಾಕೆ ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಒಪ್ಪಿದೆ ಎಂಬ ಬಗ್ಗೆ ಅವರೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಶಾಸಕಾಂಗದ ಎದುರು ನ್ಯಾಯಾಂಗದ ಆಶಯಗಳನ್ನು ವ್ಯಕ್ತಪಡಿಸುವ ಹಾಗೂ ಶಾಸಕಾಂಗದ ಅಂಶಗಳನ್ನು ನ್ಯಾಯಾಂಗದ ವಿಷಯಗಳೆದುರು ಮಂಡನೆ ಮಾಡುವ ದೃಷ್ಟಿಯಿಂದ ನಾನು ರಾಜ್ಯಸಭೆಗೆ ನಾಮನಿರ್ದೇಶನಗೊಳ್ಳಲು ಒಪ್ಪಿಕೊಂಡೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗ ಒಟ್ಟಾಗಿ ಕೆಲಸ ಮಾಡಬೇಕು ಎಂದು ದೃಢವಾಗಿ ನಂಬಿಕೊಂಡಿದ್ದೇನೆ. ಇದೇ ದೃಷ್ಟಿಕೋನದಲ್ಲಿಯೇ ನಾನೂ ಕೂಡ ಕಾರ್ಯನಿರ್ವಹಿಸುತ್ತೇನೆ. ರಾಜ್ಯಸಭೆಯಲ್ಲಿ ನಾನು ಸ್ವತಂತ್ರವಾಗಿ ಅಭಿಪ್ರಾಯ ಮಂಡನೆ ಮಾಡುವ ಆಶಯ ಹೊಂದಿದ್ದೇನೆ ಎಂದು ಗೊಗೊಯ್​ ತಿಳಿಸಿದ್ದಾರೆ.
ಸಂವಿಧಾನದ 80ನೇ ಆರ್ಟಿಕಲ್​ನಲ್ಲಿ ನೀಡಲಾದ ಅಧಿಕಾರ ಬಳಸಿಕೊಂಡು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಮಾ.16ರಂದು ರಂಜನ್​ ಗೊಗೊಯ್​ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. (ಏಜೆನ್ಸೀಸ್​)
ಸುಪ್ರೀಂಕೋರ್ಟ್ ಮಾಜಿ ಸಿಜೆಐ ರಂಜನ್​ ಗೊಗೊಯಿಯವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ ರಾಷ್ಟ್ರಪತಿ ರಾಮನಾಥ ಕೋವಿಂದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
