ಬೆಂಗಳೂರು:ಬಸವಣ್ಣನವರ ‘ಕಾಯಕವೇ ಕೈಲಾಸ’ ನುಡಿಯಂತೆ ಕಳೆದ 32 ವರ್ಷಗಳಿಂದ ಲಕ್ಷಾಂತರ ಮಂದಿ ಅವಕಾಶ ವಂಚಿತ ಆದಿವಾಸಿ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸದ ಜತೆಗೆ ಊಟ-ಬಟ್ಟೆ ಕೊಟ್ಟು ಅವರನ್ನು ಮುಖ್ಯವಾಹಿನಿಗೆ ತರುತ್ತಿರುವ ಕಿಟ್ ಮತ್ತು ಕಿಸ್ ವಿಶ್ವವಿದ್ಯಾಲಯಗಳ ಕೆಲಸ ಜಗತ್ತಿಗೇ ಅಚ್ಚುಮೆಚ್ಚು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಅವರು ಜ. 24, 25ರ ಎರಡು ದಿನಗಳ ಭುವನೇಶ್ವರ ಭೇಟಿಯ ಸಂದರ್ಭದಲ್ಲಿ ಕಳಿಂಗ ಇನ್​ಸ್ಟಿಟ್ಯೂಟ್​ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (KIIT University) ಮತ್ತು ಕಳಿಂಗ ಇನ್​​ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (KISS University) ಕ್ಯಾಂಪಸ್​​ಗಳಿಗೆ ಭೇಟಿ ನೀಡಿದರು. ಮಾತ್ರವಲ್ಲದೆ ಲೋಕಸಭಾ ಸದಸ್ಯರು ಹಾಗೂ ವಿಶ್ವವಿದ್ಯಾಲಯಗಳ ಸಂಸ್ಥಾಪಕರಾದ ಅಚ್ಯುತ ಸಮಂತಾ ಅವರ ಜೊತೆ ಸಮಾಜಮುಖಿ ಕೆಲಸಗಳ ಬಗ್ಗೆ ಆತ್ಮೀಯವಾಗಿ ಚರ್ಚೆ ನಡೆಸುತ್ತು ಈ ಪ್ರಶಂಸೆಯನ್ನು ತಿಳಿಸಿದರು.
ಇದನ್ನೂ ಓದಿ:ಸಂಚಾರ ಪೊಲೀಸರು ಮಾಡಿದ ಈ ಕೆಲಸಕ್ಕೆ ಜನರು ಏನಂದ್ರು ನೋಡಿ…
ಕಳೆದ ಹತ್ತು ವರ್ಷಗಳಲ್ಲಿ ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿನ ಕಳಿಂಗ ಸಂಸ್ಥೆಗೆ ಇದು ನನ್ನ ಮೂರನೇ ಭೇಟಿ. ಸಂಸ್ಥೆ ಅಗಾಧವಾಗಿ ಬೆಳೆಯುತ್ತಲೇ ಇರುವುದರಿಂದ ಪ್ರತಿ ಬಾರಿ ಭೇಟಿ ಕೊಟ್ಟಾಗಲೂ ವಿಶಿಷ್ಟ ಅನುಭವ ನನಗಾಗುತ್ತಿದೆ. ಒಳ್ಳೆಯ ಮನಸ್ಸು ಹಾಗೂ ದುಡಿಯುವ ಹಂಬಲ ಇಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿರುವ ಅಚ್ಯುತ ಸಮಂತಾ ಅವರ ಸಮಾಜ ಸೇವೆ ಕರ್ನಾಟಕಕ್ಕೂ ವಿಸ್ತರಿಸಲಿ ಎಂದು ಜಗದೀಶ್ ಶೆಟ್ಟರ್ ಆಶಿಸಿದರು.

ಅಚ್ಯುತ ಸಮಂತಾ ಅವರು ತಮ್ಮ ತಾಯಿಯ ಬಗ್ಗೆ ಬರೆದಿರುವ ಪುಸ್ತಕ ಮೈ ಮದರ್ ಮೈ ಹೀರೋ ಮತ್ತು ಕಿಸ್ ಮಕ್ಕಳು ರಚಿಸಿದ ಕಲಾಕೃತಿಯನ್ನು ಜಗದೀಶ್ ಶೆಟ್ಟರ್ ಅವರಿಗೆ ನೆನಪಿನ ಕಾಣಿಕೆಯಾಗಿ ನೀಡಿದರು. ಪ್ರತಿಯಾಗಿ ಜಗದೀಶ್ ಶೆಟ್ಟರ್ ಅವರು ಪ್ರಸಿದ್ಧ ಧಾರವಾಡ ಪೇಡೆಯನ್ನು ಸಮಂತಾ ಅವರಿಗೆ ನೀಡಿ ಶುಭ ಹಾರೈಸಿದರು.
ವಂಚಕ ಪತಿಯ ಅರಸಿ ಬೆಂಗಳೂರಿಗೆ ಬಂದ್ಲು ಎರಡನೇ ಪತ್ನಿ; ಇವ ಶ್ರೀಮಂತರನ್ನೇ ನೋಡಿ ಮದ್ವೆ ಆಗಿ ಮೋಸ ಮಾಡ್ತಿದ್ದ…

ಕಾಂಗ್ರೆಸ್ ಮುಖಂಡನಿಂದ ಪತ್ನಿಯ ಕೊಲೆಗೆ ಸಂಚು?; ಪತಿಗೆ ಅನೈತಿಕ ಸಂಬಂಧ, ಡ್ರಗ್​ ಪೆಡ್ಲರ್​ ಸಂಪರ್ಕವಿದೆ ಎಂದ ಹೆಂಡ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eighteen =
Remember me
