ಜೈಪುರ:ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ಅವರ ಪುತ್ರ ಸಂಸದ ದುಶ್ಯಂತ್​ ಸಿಂಗ್​ ಅವರಿಗೆ ಕರೊನಾ ವೈರಸ್​ ಸೋಂಕು ಹರಡಿಲ್ಲ ಎಂದು ತಿಳಿದು ಬಂದಿದೆ.
ಮಾಜಿ ಸಿಎಂ ವಸುಂಧರಾ ರಾಜೆ ಅವರು ಟ್ವಿಟ್​ ಮಾಡಿ ನಾನು ಹಾಗೂ ನನ್ನ ಪುತ್ರ ದುಶ್ಯಂತ್​ ಸಿಂಗ್​ ಕರೊನಾ ವೈರಸ್​ ಸೋಂಕು ತಪಾಸಣೆಗೆ ಒಳಗಾಗಿದ್ದೇವೆ. ವರದಿಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟಿದೆ ಎಂದು ಬರೆದುಕೊಂಡಿದ್ದಾರೆ.
ಕರೊನಾ ವೈರಸ್​ ಸೋಂಕಿಗೆ ತುತ್ತಾಗಿರುವ ಗಾಯಕಿ ಕನ್ನಿಕಾ ಕಪೂರ್​ ಅವರ ಸಂಪರ್ಕಕ್ಕೆ ವಸುಂಧರಾ ರಾಜೆ ಹಾಗೂ ಅವರ ಪುತ್ರ ದುಶ್ಯಂತ್​ ಬಂದ ಹಿನ್ನೆಲೆಯಲ್ಲಿ ಸೋಂಕು ಹರಡಿರಹುದು ಎಂದು ಶಂಕಿಸಲಾಗಿತ್ತು.
ವಸುಂಧರಾ ರಾಜೆ ಹಾಗೂ ಅವರ ಪುತ್ರನ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಇಬ್ಬರಿಗೂ ಸೋಂಕು ಹರಡಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಇಬ್ಬರು ನಿರಾಳಗೊಂಡಿದ್ದಾರೆ.
ಸಂಸದ ದುಶ್ಯತ್​ಸಿಂಗ್​ ಲೋಕಸಭೆಯ ಕಲಾಪದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಅವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ವರದಿಯಿಂದ ಭೀತಿ ದೂರವಾಗಿದೆ.
ಗಾಯಕಿ ಕನ್ನಿಕಾ ಕಪೂರ್​ ಇತ್ತೀಚೆಗೆ ಲಂಡನ್​ನಿಂದ ಅವರು ಮುಂಬೈಗೆ ಬಂದಿದ್ದರು. ಅವರಿಗೆ ಸೋಂಕು ಹರಡಿತ್ತು. ವೈದ್ಯರು ಪ್ರತ್ಯೇಕವಾಗಿ ಇರುವಂತೆ ಸೂಚಿಸಿದ್ದರೂ ಇತ್ತೀಚೆಗೆ ಪಾರ್ಟಿ ಮಾಡಿದ್ದರು. ಪಾರ್ಟಿಯಲ್ಲಿ ವಸುಂಧರಾರಾಜೆ ಅವರ ಪುತ್ರ ದುಶ್ಯಂತ್​ ಸಿಂಗ್​ ಹಾಗೂ ಇತರರು ಪಾಲ್ಗೊಂಡಿದ್ದರು. (ಏಜೆನ್ಸೀಸ್​)
ಕ್ವಾರಂಟೈನ್​ನಲ್ಲಿ ಇರುವುದಾಗಿ ಘೋಷಿಸಿರುವ ರಾಜಸ್ಥಾನ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 15 =
Remember me
