ನವದೆಹಲಿ:ಮಹಾಮಾರಿ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಹನುಮ ಜಯಂತಿಯನ್ನು ತುಂಬಾ ಸರಳವಾಗಿ ಆಚರಿಸಲಾಗುತ್ತಿದೆ. ಕೋವಿಡ್​ನಿಂದಾಗಿ ಎಲ್ಲಿಯೂ ದೊಡ್ಡದಾಗಿ ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ ಸಾಧ್ಯವಾದ ಮಟ್ಟಿಗೆ ದೇಶಾದ್ಯಂತ ಹನುಮಂತನನ್ನು ಆರಾಧಿಸಲಾಗುತ್ತಿದೆ.
ಈ ಸಮಯದಲ್ಲಿ ಟೀಮ್​ ಇಂಡಿಯಾದ ಮಾಜಿ ಆಟಗಾರ ವೆಂಕಟೇಶ್​ ಪ್ರಸಾದ್​ ಹನುಮಾನ್ ಚಾಲೀಸ ಬಗ್ಗೆ ಮಾತನಾಡಿರುವ ವಿಡಿಯೋ ಭಾರಿ ವೈರಲ್​ ಆಗಿದೆ.
ಹನುಮ ಜಯಂತಿ: ಕೋವಿಡ್​ ವಿಘ್ನ ಪರಿಹಾರಿಕ್ಕೆ ಹನುಮಾನ್ ಚಾಲೀಸ ಪಠಿಸಲು ವೆಂಕಟೇಶ್​ ಪ್ರಸಾದ್ ಸಲಹೆ​#Cricketer#VenkateshPrasad#HanumanChalisa#CoronaCrisispic.twitter.com/x8dcNJ6xjv
— Vijayavani (@VVani4U)April 27, 2021

ತಮ್ಮ ಟ್ವೀಟರ್​ನಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋದಲ್ಲಿ ದಿನನಿತ್ಯವು ಹನುಮಾನ್ ಚಾಲೀಸ ಪಠಿಸುವಂತೆ ವೆಂಕಟೇಶ್​ ಪ್ರಸಾದ್​ ಸಲಹೆ ನೀಡಿದ್ದಾರೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಹನುಮಾನ್ ಚಾಲೀಸ ಪಠಣ ಮಾಡುವುದರಿಂದ ಆದಷ್ಟು ಬೇಗ ಈಮ ಸಂಕಷ್ಟದಿಂದ ನಾವು ಪಾರಾಗಬಹುದು. ಇದು ನಮ್ಮ ಜೀವನದ ಒಂದು ಭಾಗವಾಗಬೇಕು ಎಂದು ಹೇಳಿದ್ದಾರೆ.
ಸದ್ಯ ನಮ್ಮ ದೇಶದ ಏಳಿಗೆಗೆ ಅಡ್ಡಿಯಾಗಿರುವ ಎಲ್ಲ ವಿಘ್ನಗಳಿಂದ ಆದಷ್ಟು ದೂರ ಮಾಡುವಂತೆ ಹನುಮಂತನಲ್ಲಿ ನಾನು ಪಾರ್ಥಿಸುತ್ತೇನೆ. ಹನುಮಾನ್ ಚಾಲೀಸ ಇಂದು ತುಂಬಾ ಮುಖ್ಯವಾಗಿದೆ. ಇಂದು ಚಾಲೀಸ ಪಠಣ ಮಾಡುವುದು ತುಂಬಾ ಮುಖ್ಯವಾಗಿದೆ. ಹನುಮಾನ್​ ಶಕ್ತಿಯಿಂದ ನಮ್ಮ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ ಎಲ್ಲರು ಹನುಮಾನ್​ ಚಾಲೀಸ ಪಠಿಸಿ ಎಂದು ವೆಂಕಟೇಶ್​ ಪ್ರಸಾದ್​ ಕೇಳಿಕೊಂಡಿದ್ದಾರೆ.(ಏಜೆನ್ಸೀಸ್​)
ಸಿನಿಮಾ ಚಿತ್ರೀಕರಣಕ್ಕೆ ಗ್ರಹಣ: ಕೋಟ್ಯಂತರ ರೂ. ಹೂಡಿಕೆ ಮಾಡಿದವರಿಗೆ ನಷ್ಟದ ಭೀತಿ

ಐಪಿಎಲ್‌ ಆಟಗಾರರ ಮೇಲೆ ಕರೊನಾ ಕರಿನೆರಳು- ಯಾರೇ ಹೋದರೂ ಡೋಂಟ್‌ ಕೇರ್‌ ಎಂದ ಬಿಸಿಸಿಐ

ದೇಹದ ವಿವಿಧ ಭಾಗದಲ್ಲಿರುವ ಮಚ್ಚೆ ಹಿಂದಿನ ರಹಸ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
