ಶಹಜಹಾನ್‌ಪುರ:ಕಾರಾಗೃಹದಿಂದ 23 ವರ್ಷಗಳ ಬಳಿಕ ಬಿಡುಗಡೆಯಾದ ಮಾಜಿ ಡಕಾಯಿತನೊಬ್ಬ ಬರೊಬ್ಬರಿ 101 ಕೆ.ಜಿ. ತೂಕದ ಗಂಟೆಯನ್ನು ದೇವಸ್ಥಾನಕ್ಕೆ ಅರ್ಪಿಸಿ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.ಇದನ್ನೂ ಓದಿ:ಬ್ರೇಕಪ್​ ಮಾಡಿಕೊಂಡಿದ್ದಕ್ಕೆ ಪ್ರಿಯತಮೆಯನ್ನು ಹತ್ಯೆಗೈದು ಪೊದೆಗೆ ಎಸೆದ ವಿವಾಹಿತಯುವ ಪೀಳಿಗೆ ಅಪರಾಧಗಳಿಂದ ದೂರವಿರುವಂತೆ ಮನವಿ ಮಾಡಿರುವ ನಜ್ಜು ಅಲಿಯಾಸ್ ರಜ್ಜು ಒಂದು ವಾರದ ಹಿಂದೆ ಬರೇಲಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದು. ಈತ ಷಹಜಹಾನ್‌ಪುರ, ಮತ್ತು ಪಕ್ಕದ ಪ್ರದೇಶಗಳಲ್ಲಿ ಸುಮಾರು 12 ವರ್ಷಗಳ ಕಾಲ ಡಕಾಯತಿಯನ್ನು ಮಾಡಿದ್ದ.ಒಂದು ಕಾಲದಲ್ಲಿ ಷಹಜಹಾನ್‌ಪುರ, ಬರೇಲಿ, ಫರೂಕಾಬಾದ್, ಬುಡೌನ್, ಇಟಾಹ್ ಮತ್ತು ಹರ್ದೋಯಿ ಜಿಲ್ಲೆಗಳಲ್ಲಿ ನಜ್ಜು ಗ್ಯಾಂಗ್‌ನ ಹಾವಳಿ ಹೆಚ್ಚಾಗಿ ನಜ್ಜು ವಿರುದ್ಧ ಜಿಲ್ಲೆಯಲ್ಲಿ 15 ಪ್ರಕರಣಗಳು ದಾಖಲಾಗಿದ್ದವು. ಕೊನೆಗೆ 1999 ರಲ್ಲಿ ಮೂವರು ಸಬ್ ಇನ್ಸ್‌ಪೆಕ್ಟರ್‌ಗಳು ಮತ್ತು ಒಬ್ಬ ಪೋಲೀಸ್‌ನನ್ನು ಗುಂಡಿಕ್ಕಿ ಕೊಂದ ಪ್ರಕರಣವು ದಾಖಲಾಗಿದ್ದು, ಆಗ ಪೊಲೀಸರು ಆತನ ಮೇಲೆ ಒತ್ತಡ ಹೇರಿದ್ದರು. ಕೊನೆಗೆ ನಜ್ಜು ಪೊಲೀಸರಿಗೆ ಶರಣಾಗಿದ್ದು ಕಳೆದ ವಾರದವರೆಗೆ ಬರೇಲಿ ಸೆಂಟ್ರಲ್ ಜೈಲಿನಲ್ಲಿದ್ದನು.ಶಿಕ್ಷೆಯನ್ನು ಅನುಭವಿಸಿ ಬಂದ ಬಳಿಕ ನಜ್ಜು ಪರೂರ್ ಪ್ರದೇಶದ ದೇವಸ್ಥಾನದಲ್ಲಿ ಗಂಟೆಯನ್ನು ಅರ್ಪಿಸಿದ ನಂತರ, ತಾನು ಮಾಡಿದ ಅಪರಾಧಗಳಿಗೆ ಪಶ್ಚಾತ್ತಾಪ ಪಟ್ಟಿದ್ದು, ಯುವ ಪೀಳಿಗೆ ಅಪರಾಧದಿಂದ ದೂರವಿದ್ದು ತಮ್ಮ ಭವಿಷ್ಯ ಮತ್ತು ಕುಟುಂಬದತ್ತ ಗಮನ ಹರಿಸುವಂತೆ ಮನವಿ ಮಾಡಿದ್ದಾನೆ. ಅಲ್ಲದೇ, ಯಾವುದೇ ವ್ಯಕ್ತಿ ಅಪರಾಧ ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಸೇರಲು ಬಯಸಿದರೆ ತಾನು ಅವರಿಗೆ ಸಹಾಯ ಮಾಡುತ್ತೇನೆ ಕತ್ರಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 1 =
Remember me
