ನವದೆಹಲಿ:ಇತ್ತೀಚೆಗಷ್ಟೇ ರಾಜೀನಾಮೆ ನೀಡಿದ ಚುನಾವಣಾ ಆಯುಕ್ತ ಅಶೋಕ್​ ಲಾವಸಾ ಅವರ ಸ್ಥಾನಕ್ಕೆ ಮಾಜಿ ಹಣಕಾಸು ಕಾರ್ಯದರ್ಶಿ ರಾಜೀವ್​ ಕುಮಾರ್​ ಅವರನ್ನು ನೇಮಕ ಮಾಡಲಾಗಿದೆ.
ಏಷಿಯನ್​ ಡೆವಲಪ್​ಮೆಂಟ್​ ಬ್ಯಾಂಕ್​ ಉಪಾಧ್ಯಕ್ಷನಾಗಿ ಆಯ್ಕೆಯಾಗಿರುವ ಅಶೋಕ್ ಲಾವಸಾ ಮೊನ್ನೆಯೇ ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ನೇಮಕಗೊಂಡಿರುವ ನಿವೃತ್ತ ಐಎಎಸ್​ ಅಧಿಕಾರಿ ರಾಜೀವ್​ ಕುಮಾರ್ ಆಗಸ್ಟ್​ 31ರಿಂದ ಚುನಾವಣಾ ಆಯುಕ್ತನ ಹುದ್ದೆಗೇರಲಿದ್ದಾರೆ ಎಂದು ಕಾನೂನು ಸಚಿವಾಲಯ ತಿಳಿಸಿದ್ದಾರೆ.
ಅಶೋಕ್​ ಲಾವಸಾ ಅವರು ಪಿಲಿಫ್ಪೀನ್ಸ್​ ಮೂಲದ ಏಷಿಯಲ್​ ಡೆವಲೆಪ್​ಮೆಂಟ್​ ಬ್ಯಾಂಕ್​ ಸೇರಲು ಚುನಾವಣಾ ಆಯುಕ್ತನ ಸ್ಥಾನಕ್ಕೆ ಆಗಸ್ಟ್​ 18ರಂದು ತಮ್ಮ ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಸಲ್ಲಿಸಿದ್ದಾರೆ. ಅವರು ಆಗಸ್ಟ್​ 31ರಂದು ರಿಲೀವ್​ ಆಗಲಿದ್ದು, ಅಂದಿನಿಂದ ರಾಜೀವ್​ ಕುಮಾರ್ ಅಧಿಕೃತವಾಗಿ ಕರ್ತವ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ. (ಏಜೆನ್ಸೀಸ್​)
ಪ್ರಧಾನಿ ಮೋದಿ, ಅಮಿತ್​ ಷಾಗೆ ಕ್ಲೀನ್​ ಚಿಟ್​ ಕೊಟ್ಟಿದ್ದನ್ನು ವಿರೋಧಿಸಿದ್ದ ಚುನಾವಣಾ ಆಯುಕ್ತ ಅಶೋಕ್​ ಲಾವಸಾ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
