ಜೈಪುರ:ಟೀಮ್​ ಇಂಡಿಯಾದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್ ಕಾರು ಅಪಘಾತದಿಂದ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ರಾಜಸ್ಥಾನದ ಸೂರ್ವಾಲದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಬಚಾವ್​ ಆಗಿದ್ದಾರೆಂದು ಅಜರುದ್ದೀನ್​ ಆಪ್ತ ಸಹಾಯಕ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಲಾಲ್ಸೋಟ್​ ಕೋಟಾ ಹೈವೇಯಲ್ಲಿ ಅಪಘಾತ ಸಂಭವಿಸಿದೆ. ಅಜರ್​ ರಣಥಂಬೋರ್​ಗೆ ತಮ್ಮ ಕುಟುಂಬದೊಂದಿಗೆ ಆಗಮಿಸುತ್ತಿದ್ದಾಗ ಅಪಘಾತ ನಡೆದಿದ್ದು, ಮತ್ತೊಂದು ಕಾರಿನಲ್ಲಿ ಅವರನ್ನು ಹೋಟೆಲ್​ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಹುಡುಗನಿಗೆ ಮದುವೆ ವಯಸ್ಸು ಆಗದಿದ್ದರೂ ವಯಸ್ಕರಿಬ್ಬರು ಒಟ್ಟಿಗೇ ಇರಬಹುದು ಎಂದ ಹೈಕೋರ್ಟ್​
Former Cricketer Mohammad Azharuddin's car met with an accident in Soorwal, Rajasthan earlier today.
He is unhurt, as per his personal assistant.pic.twitter.com/3hpKRNMMYm
— ANI (@ANI)December 30, 2020

ಇನ್ನು ಕ್ರಿಕೆಟ್​ ವಿಚಾರಕ್ಕೆ ಬಂದರೆ ಅಜರುದ್ದೀನ್​ ಅವರು 99 ಟೆಸ್ಟ್​ ಪಂದ್ಯಗಳನ್ನ ಟೀಮ್​ ಇಂಡಿಯಾವನ್ನು ಪ್ರತಿನಿಧಿಸಿದ್ದಾರೆ. ಕೆಲವು ಏಕದಿನ ಪಂದ್ಯಗಳಲ್ಲೂ ತಮ್ಮ ಛಾಪು ಮೂಡಿಸಿರುವ ಅಜರ್​ ಕೆಲ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
1992 ರಿಂದ 1999ರವರೆಗಿನ ಮೂರು ಏಕದಿನ ವಿಶ್ವಕಪ್ ಸರಣಿಯನ್ನು ಅಜರ್​ ಟೀಮ್​ ಇಂಡಿಯಾ ನಾಯಕತ್ವವನ್ನು ವಹಿಸಿಕೊಂಡಿದ್ದರು. 1996ರ ವಿಶ್ವಕಪ್​ ಸರಣಿಯಲ್ಲಿ ಅಜರ್​ ಪಡೆ ಸೆಮಿಫೈನಲ್​ಗೆ ಪ್ರವೇಶ ಪಡೆದಿತ್ತು.(ಏಜೆನ್ಸೀಸ್​)
ಇದನ್ನೂ ಓದಿ:ಒಣಗಿಸಿದ್ದ ಬಟ್ಟೆ ತರಲು ಹೋದ ಯುವತಿಯನ್ನು ಅಪಹರಿಸಿ ರೇಪ್​ ಮಾಡಿದ ಪಾಪಿಗಳು!
ಕಣ್ಣು ಬಿಟ್ಟುಕೊಂಡು ಸೀನಿದ್ರೆ ಏನಾಗಲಿದೆ ಎಂದು ನೋಡುವ ಕುತೂಹಲ: ಸೀನಿದವನಿಗೆ ಕಾದಿತ್ತು ಶಾಕ್​!

ಗ್ರಾಮ ಪಂಚಾಯಿತಿ ಫೈಟ್​: ಬಿಜೆಪಿಗೆ ಭರ್ಜರಿ ಮುನ್ನಡೆ

ರಾಜೀನಾಮೆ ನೀಡಿ ಒಂದೇ ದಿನದಲ್ಲಿ ಹಿಂಪಡೆದ ಬಿಜೆಪಿ ಸಂಸದ! ಮನವೊಲಿಸುವಲ್ಲಿ ಯಶಸ್ವಿಯಾದ ಸಿಎಂ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
