ಕೋಲ್ಕತ:ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಈಗ ಕೈಗಾರಿಕೋದ್ಯಮಿಯಾಗುತ್ತಿದ್ದು, ಸದ್ಯದಲ್ಲೇ ಪಶ್ಚಿಮ ಮೆದಿನಿಪುರ್​ನ ಸಲ್​ಬೊನಿಯಲ್ಲಿ ಸ್ಟೀಲ್​ ಫ್ಯಾಕ್ಟರಿ ಆರಂಭಿಸಲಿದ್ದಾರೆ.
ಸ್ಟೀಲ್​ ಫ್ಯಾಕ್ಟರಿ ಆರಂಭಿಸಲು ಅವಕಾಶ ನೀಡಿರುವ ಮಮತಾ ಬ್ಯಾನರ್ಜಿ ಅವರಿಗೆ ಧನ್ಯವಾದ ಸಲ್ಲಿಸಿರುವ ಗಂಗೂಲಿ, ಐದಾರು ತಿಂಗಳಲ್ಲಿ ಕಾರ್ಖಾನೆ ಆರಂಭವಾಗಲಿದ್ದು, ಇದು ಬಂಗಾಳದ ಮೂರನೇ ಸ್ಟೀಲ್​ ಕಾರ್ಖಾನೆಯಾಗಲಿದೆ ಎಂದಿದ್ದಾರೆ.
ಸದ್ಯ ಗಂಗೂಲಿ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜತೆ 12 ದಿನಗಳ ಸ್ಪೇನ್​ ಮತ್ತು ದುಬೈ ಪ್ರವಾಸದಲ್ಲಿದ್ದಾರೆ.
ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ಇತ್ತೀಚೆಗೆ ನಡೆದ ಬ್ಯಾಂಗಲ್​ ಗ್ಲೋಬಲ್​ ಬಿಸಿನೆಸ್​ ಸಮ್ಮಿತ್​ (ಬಿಜಿಬಿಎಸ್​)ನಲ್ಲಿ ಮಾತನಾಡಿದ ಅವರು, “ಕ್ರೀಡೆಯಲ್ಲಿ ಸಾಕಷ್ಟು ನಂಬಿಕೆ ಇಟ್ಟಿರುವ ನಾನು, 2007ರಲ್ಲಿ ಸಣ್ಣ ಪ್ರಮಾಣದ ಸ್ಟೀಲ್​ ಕಾರ್ಖಾನೆ ಆರಂಭಿಸಿದ್ದೆ. ಐದಾರು ತಿಂಗಳಲ್ಲಿ ದೊಡ್ಡ ಮಟ್ಟದ ಸ್ಟೀಲ್​ ಕಾರ್ಖಾನೆ ಆರಂಭಿಸುತ್ತೇನೆ’ ಎಂದರು.
ಅಂದಾಜು 50-55 ವರ್ಷಗಳ ಹಿಂದೆಯೇ ತಮ್ಮ ತಾತ ಬಿಸಿನೆಸ್​ ಆರಂಭಿಸಿದ್ದರು. ಅವತ್ತಿಗಿಂತ ಇಂದಿನ ಸರ್ಕಾರ ಉದ್ಯಮಿಗಳಿಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ಪ್ರಪಂಚದಾದ್ಯಂತ ಉದ್ಯಮಿಗಳು ಬಂಗಳಾದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ ಎಂದು ಗಂಗೂಲಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − seventeen =
Remember me
