ತಿರುವನಂತಪುರ:ತನ್ನ ಮಾಜಿ ಪ್ರೇಯಸಿಗೆ ನಿಗದಿಯಾಗಿದ್ದ ವರನಿಗೆ ಮಾರ್ಫ್​ ಮಾಡಿದ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ಮದುವೆ ನಿಲ್ಲಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು 22 ವರ್ಷದ ಎಸ್​. ವಿಜಿನ್​ ಎಂದು ಗುರುತಿಸಲಾಗಿದೆ. ಈತ ಕಡುಕ್ಕಮೂಡುವಿನ ವೆಲ್ಲನಾಡು ಮೂಲದವನು.
ವಧು ಮತ್ತು ಆರೋಪಿ ಇಬ್ಬರು ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಇಬ್ಬರು ಬೇರೆಯಾದ ನಂತರ, ಯುವತಿಯ ಕುಟುಂಬವು ಇನ್ನೊಬ್ಬ ಯುವಕನೊಂದಿಗೆ ಅವಳ ಮದುವೆಯನ್ನು ನಿಗದಿಪಡಿಸಿತು.
ಇದನ್ನೂ ಓದಿ:25 ವರ್ಷಗಳ ಹಳೆಯ ಶೂ 18 ಕೋಟಿ ರೂ.ಗೆ ಹರಾಜು; ವಿಶೇಷತೆ ಏನು? ತಿಳಿದರೆ ನೀವೂ ಅಭಿಮಾನಿಯಾಗುತ್ತೀರಿ..
ವಾಟ್ಸ್​ಆ್ಯಪ್​ಗೆ ಫೋಟೋ
ಮಾಜಿ ಪ್ರೇಯಸಿಗೆ ಮದುವೆ ನಿಶ್ವಯವಾದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಪ್ರಿಯಕರ ತಮ್ಮ ಪ್ರೀತಿಯ ದಿನಗಳಲ್ಲಿ ತೆಗೆದಿದ್ದ ಫೋಟೋಗಳನ್ನು ಮಾರ್ಫ್ ಮಾಡಿ, ಆಕೆಗೆ ನಿಗದಿಯಾಗಿದ್ದ ವರನ ವಾಟ್ಸ್​ಆ್ಯಪ್​ ನಂಬರ್​ಗೆ ಕಳುಹಿಸಿದ್ದಾನೆ. ಅಲ್ಲದೆ, ವರನ ಮನೆಗೆ ತೆರಳಿ ಆತನ ಪಾಲಕರಿಗೂ ಫೋಟೋಗಳನ್ನು ತೋರಿಸಿದ್ದಾನೆ. ಇದಾದ ಬಳಿಕ ಇಬ್ಬರ ಮದುವೆ ಮುರಿಬಿದ್ದಿದೆ.
ಯುವತಿ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಜಿನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಪ್ರೇಯಸಿಯ ಮದುವೆ ನಿಲ್ಲಿಸಲು ಈ ರೀತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ವಿಜಿನ್​ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಿನ್‌ನನ್ನು ವಿಲಪ್ಪಿಲಸಾಲ ಇನ್ಸ್‌ಪೆಕ್ಟರ್ ಎನ್. ಸುರೇಶ್ ಕುಮಾರ್ ನೇತೃತ್ವದ ತಂಡವು ಬಂಧಿಸಿದೆ.(ಏಜೆನ್ಸೀಸ್​​)
ಸೌಂದರ್ಯದ ಗಣಿ ಹನಿ ರೋಸ್​ಗೆ ಸಿನಿಮಾ ಅವಕಾಶಗಳು ಕಡಿಮೆ ಏಕೆ? ಇಲ್ಲಿದೆ ಅಚ್ಚರಿಯ ಕಾರಣ…

ಗಟ್ಟಿಯಾಗಿ ತಬ್ಬಿ ಗುಪ್ತಾಂಗವನ್ನು ಮುಟ್ಟಿದ: ಡ್ರೆಸ್ಸಿಂಗ್​ ರೂಮಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ನಟಿ ಮಾಳವಿಕಾ

ಅಂದುಕೊಂಡಿದ್ದನ್ನು ಮಾಡುತ್ತೇನೆ ಅಂತ ಬೆತ್ತಲೆ ಫೋಟೋ ಶೇರ್​ ಮಾಡಿದ ಜೇಮ್ಸ್​ ಬಾಂಡ್​ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
