ಪಾಲ್ಘರ್ :ಬ್ಯಾಂಕ್ ಲೂಟಿ ಮಾಡಲು ಬಂದ ದುಷ್ಕರ್ಮಿಗಳು ವಿರೋಧ ವ್ಯಕ್ತಪಡಿಸಿದ ಇಬ್ಬರು ಮಹಿಳಾ ಉದ್ಯೋಗಿಗಳನ್ನು ಚೂರಿಯಿಂದ ಇರಿದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್​ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಒಬ್ಬ ಮಹಿಳೆಯು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದವರಲ್ಲಿ ಒಬ್ಬ ಸಾಲ ಮಾಡಿಕೊಂಡಿದ್ದ ಅದೇ ಬ್ಯಾಂಕಿನ ಮಾಜಿ ಮ್ಯಾನೇಜರ್​ ಆಗಿದ್ದ ಎನ್ನಲಾಗಿದೆ.
ವಿರಾರ್​ನ ಐಸಿಐಸಿಐ ಬ್ಯಾಂಕ್​ ಶಾಖೆಯಲ್ಲಿ ಗುರುವಾರ ರಾತ್ರಿ 8.30 ಕ್ಕೆ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಇಬ್ಬರೇ ಮಹಿಳಾ ಉದ್ಯೋಗಿಗಳು ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರು ದುಷ್ಕರ್ಮಿಗಳು ಬ್ಯಾಂಕಿಗೆ ನುಗ್ಗಿ, ಅಸಿಸ್ಟೆಂಟ್ ಮ್ಯಾನೇಜರ್​ ಯೋಗಿತ ವರ್ತಕ್ ಮತ್ತು ಕ್ಯಾಶಿಯರ್​ ಶ್ರದ್ಧಾ ದೇವ್ರುಖರ್ ಅವರಿಗೆ ಚಾಕು ತೋರಿಸಿದರು. ಹಣ ಮತ್ತು ಒಡವೆಗಳನ್ನು ಲೂಟಿ ಮಾಡಿ ಓಡಿಹೋಗುತ್ತಿದ್ದಾಗ, ಆ ಮಹಿಳೆಯರು ಹುಲ್ಲೆಬ್ಬಿಸಿದ್ದರಿಂದ ಅವರಿಗೆ ಚಾಕುವಿನಿಂದ ಇರಿದು ಓಡಿಹೋದರು ಎಂದು ಸೀನಿಯರ್​ ಇನ್ಸ್​ಪೆಕ್ಟರ್​ ಸುರೇಶ್ ವರದೆ ಹೇಳಿದ್ದಾರೆ.
ಇದನ್ನೂ ಓದಿ:ಟ್ವಿಟರ್​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಂ.1
ಓಡಿಹೋಗುತ್ತಿದ್ದವರನ್ನು ಅಟ್ಟಿಸಿಕೊಂಡು ಹೋದ ಅಕ್ಕಪಕ್ಕದ ಜನರು ಆರೋಪಿ ಅನಿಲ್ ದುಬೆಯನ್ನು ಹಿಡಿಯುವಲ್ಲಿ ಯಶಸ್ವಿಯಾದರೆ, ಮತ್ತೊಬ್ಬ ಪರಾರಿಯಾದ. ಇತ್ತ ಬ್ಯಾಂಕಿನಲ್ಲಿ ಯೋಗಿತ ವರ್ತಕ್​ ರಕ್ತದ ಮಡುವಿನಲ್ಲಿ ಅಲ್ಲಾಡದೆ ಬಿದ್ದಿದ್ದರು, ಇನ್ನೊಬ್ಬರಿಗೆ ಗಂಭೀರ ಗಾಯವಾಗಿತ್ತು. ಆಸ್ಪತ್ರೆಗೆ ಹೋದಾಗ ಯೋಗಿತ ಅದಾಗಲೇ ಸತ್ತುಹೋಗಿದ್ದಾರೆಂದು ವೈದ್ಯರು ಘೋಷಿಸಿದರೆ, ಶ್ರದ್ಧಾ ದೇವ್ರುಖರ್​ಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
“ಆರೋಪಿ ಅನಿಲ್​ ದುಬೆ ಇದೇ ಬ್ಯಾಂಕ್ ಬ್ರ್ಯಾಂಚಿನ ಮ್ಯಾನೇಜರ್​ ಆಗಿ ಕೆಲಸ ಮಾಡಿದ್ದವನು. ಹಾಲಿ ಜಿಲ್ಲೆಯ ಮತ್ತೊಂದೆಡೆ ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. 1 ಕೋಟಿ ರೂಪಾಯಿ ಸಾಲ ಪಡೆದಿದ್ದ ಆತ, ಅದನ್ನು ಮರುಪಾವತಿಸುವುದಕ್ಕಾಗಿ ಬ್ಯಾಂಕ್ ಲೂಟಿ ಮಾಡುವ ಸಂಚು ನಡೆಸಿದ್ದ” ಎಂದು ಸುರೇಶ್ ವರದೆ ತಿಳಿಸಿದ್ದಾರೆ. ಕೊಲೆ, ಡಕಾಯಿತಿ, ಕೊಲೆ ಯತ್ನದ ಪ್ರಕರಣಗಳನ್ನು ದಾಖಲಿಸಲಾಗಿದ್ದು, ವಿರಾರ್​ ಪೊಲೀಸರು ಮತ್ತೊಬ್ಬ ಆರೋಪಿಯ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.(ಏಜೆನ್ಸೀಸ್)
ಪಂದ್ಯಕ್ಕೆ ಒಂದು ನಿಮಿಷ ಮುಂಚೆ ಡ್ರೆಸ್​ ಬದಲಿಸಲು ಹೇಳಿದ್ದೇಕೆ? ಒಲಿಂಪಿಕ್ಸ್​ನಿಂದ ಹೊರಬಿದ್ದ ಮೇರಿ ಕೋಂ ಪ್ರಶ್ನೆ!

VIDEO | ಕೊಲೆ ಶಂಕೆ ಮೂಡಿಸಿರುವ ನ್ಯಾಯಾಧೀಶರ ‘ಅಪಘಾತ’ದ ದೃಶ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 + 1 =
Remember me
