ಕೋಲ್ಕತ: ಮೇಘಾಲಯದ ರಾಜ್ಯಪಾಲರಾಗಿ ಕಳೆದವಾರವಷ್ಟೇ ಅಧಿಕಾರಾವಧಿ ಪೂರ್ಣಗೊಳಿಸಿದ ತಥಾಗತ ರಾಯ್ ಮತ್ತೆ ಬಿಜೆಪಿ ಸೇರೋದಕ್ಕೆ ಒಲವು ತೋರಿದ್ದಾರೆ! ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಸಕ್ರಿಯರಾಗಬೇಕೆಂಬ ಬಯಕೆ ಇದೆಯಂತೆ ಅವರಿಗೆ !
ತಥಾಗತ ರಾಯ್ ಅವರು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಹೊಣೆಗಾರಿಕೆ ನಿರ್ವಹಿಸಿದವರು. ರಾಜ್ಯಪಾಲರಾಗಿ ಅಧಿಕಾರಾವಧಿ ಪೂರ್ಣಗೊಂಡು ಹೊರಗೆ ಬಂದ ಕೂಡಲೇ ಅವರು ಸಕ್ರಿಯ ರಾಜಕೀಯದ ಬಗ್ಗೆ ಮಾತನಾಡಿದ್ದು, ಪಕ್ಷ ಸಂಘಟನೆಯ ವಿಚಾರದಲ್ಲಿ ಯಾವುದೇ ಹೊಣೆಗಾರಿಕೆಯನ್ನು ಪಕ್ಷ ನೀಡಿದರೂ ಅದನ್ನು ಸ್ವೀಕರಿಸಿ ಕೆಲಸ ಮಾಡುವ ಇಂಗಿತವನ್ನು ಆಪ್ತವಲಯದಲ್ಲಿ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ; ಶಾಲೆ- ಬೋಧಕರಿಂದ ಸಲಹೆ ಆಹ್ವಾನ
ಈ ವಿಷಯವನ್ನು ಅವರು ಶಿಲ್ಲಾಂಗ್​ನಿಂದ ಕೋಲ್ಕತ ಏರ್​ಪೋರ್ಟ್​ನಲ್ಲಿ ಬಂದಿಳಿದ ಕೂಡಲೇ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ನಾನು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದೇನೆ. ರಾಜ್ಯ ಅಧ್ಯಕ್ಷ ದಿಲೀಪ್ ಘೋಷ್ ಅವರನ್ನು ಭೇಟಿ ಮಾಡಿ ನನ್ನ ಮನದ ಇಂಗಿತವನ್ನು ತಿಳಿಸಲಿದ್ದೇನೆ ಎಂದು ಹೇಳಿಕೊಂಡಿದ್ದರು.
ಇದನ್ನೂ ಓದಿ:ಆನ್​ಲೈನ್ ಔಷಧ ಸೇವೆ ಆಪತ್ತು ಜೀವಕ್ಕೆ ತರುತ್ತೆ ಕುತ್ತು; ಮೆಡಿಕಲ್ ಶಾಪ್​ಗಳ ವಿನಾಶಕ್ಕೆ ಕಾರಣ
ಮುಂದಿನ ವರ್ಷ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದೆ. ಅದಕ್ಕೆ ಸಿದ್ಧತೆ ನಡೆಸುವ ಉದ್ದೇಶ ತಥಾಗತ ರಾಯ್ ಅವರದ್ದು. ರಾಯ್ ಅವರು ಬಿಜೆಪಿ ಅಧ್ಯಕ್ಷರಾಗಿ 2002ರಿಂದ 2006 ರ ತನಕ ಕರ್ತವ್ಯ ನಿರ್ವಹಿಸಿದ್ದರು. 2002 ರಿಂದ 2015 ರ ತನಕ ಅವರು ಪಕ್ಷ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರೂ ಆಗಿದ್ದರು. 2015ರ ಮೇ ತಿಂಗಳಿನಲ್ಲಿ ಅವರು ತ್ರಿಪುರಾದ ರಾಜ್ಯಪಾಲರಾಗಿ ನಿಯುಕ್ತರಾದರು. ನಂತರ 2018ರ ಆಗಸ್ಟ್​ನಲ್ಲಿ ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ಕಳೆದ ರಾಜ್ಯಪಾಲ ಹುದ್ದೆಯಿಂದ ನಿವೃತ್ತರಾದ ಬಳಿಕ ಅಲ್ಲಿ ಅವರ ಸ್ಥಾನವನ್ನು ಸತ್ಯಪಾಲ್ ಮಲ್ಲಿಕ್ ತುಂಬಿದ್ದಾರೆ. (ಏಜೆನ್ಸೀಸ್)
VIDEO: ಅರುಣ್ ಜೇಟ್ಲಿಯವರನ್ನು ಮಿಸ್​ ಮಾಡ್ಕೊಳ್ತಿದ್ದಾರೆ ಪ್ರಧಾನಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
