ನವದೆಹಲಿ :ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ. ಇಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ‘ಅಲ್ವಿದಾ’ ಹೇಳಿರುವ ಸುಪ್ರಿಯೊ, ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವುದಾಗಿ ಬರೆದಿದ್ದಾರೆ.
ಬಂಗಾಳಿಯಲ್ಲಿ ಕಾವ್ಯಮಯವಾಗಿ ಬರೆದಿರುವ ಸುದೀರ್ಘ ಸಂದೇಶದಲ್ಲಿ ಕಲಾವಿದರೂ ಆಗಿರುವ ಸುಪ್ರಿಯೋ, “ಸಾಮಾಜಿಕ ಕಾರ್ಯ ಮಾಡುವುದಕ್ಕೆ ರಾಜಕೀಯದಲ್ಲಿರುವ ಅಗತ್ಯವಿಲ್ಲ” ಎಂದಿದ್ದಾರೆ. ಇತ್ತೀಚೆಗೆ, ಸಂಪುಟ ಪುನರ್​ರಚನೆಯಾದಾಗ ಮಂತ್ರಿಗಿರಿ ಕಳೆದುಕೊಂಡ ಸುಪ್ರಿಯೊ, ತಮಗೆ ಯಾವುದೋ ಸ್ಥಾನ ಬೇಕು ಎಂದು ಈ ರೀತಿ ಮಾಡುತ್ತಿಲ್ಲ, ತಪ್ಪು ತಿಳಿದುಕೊಳ್ಳಬೇಡಿ ಎಂದಿದ್ದಾರೆ.

ರಾಜಕೀಯ ತೊರೆಯಬೇಕು ಎಂದು ಕಳೆದ ಕೆಲವು ದಿನಗಳಲ್ಲಿ ತೀರ್ಮಾನಿಸಿದ್ದೇನೆ. ನನಗೆ ಹಲವು ರೀತಿಯಲ್ಲಿ ಪ್ರೇರಣೆಯಾಗಿರುವ ಅಮಿತ್​ ಷಾ ಮತ್ತು ನಡ್ಡಾ ಅವರಿಗೆ ಧನ್ಯವಾದಗಳು ಎಂದು ಸುಪ್ರಿಯೋ ಹೇಳಿದ್ದಾರೆ. ಈ ಪೋಸ್ಟ್​ನಲ್ಲಿ 2014ರ ಮತ್ತು 2019ರ ತಮ್ಮ ಚುನಾವಣೆಯ ಸಂದರ್ಭ, ಬಂಗಾಳದಲ್ಲಿ ಬಿಜೆಪಿ ಸೋಲಿನ ಪರಿಸ್ಥಿತಿಯ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರವಾದ ಬಂಗಾಳದ ಅಸನ್ಸೊಲ್ ಜನತೆಗೆ ಧನ್ಯವಾದ ಸೂಚಿಸಿದ್ದಾರೆ.(ಏಜೆನ್ಸೀಸ್)
ಸೆಮಿಫೈನಲ್ಸ್​ನಲ್ಲಿ ಸಿಂಧುಗೆ ಸೋಲು …ಆದರೆ ಪದಕದ ಆಸೆ ಜೀವಂತ!

ಕರೊನಾತಂಕ: ಮತ್ತೆ ಗಡಿಗಳಲ್ಲಿ ಚೆಕ್​ಪೋಸ್ಟ್​! ಈ ರಾಜ್ಯಗಳಿಂದ ಬರುವವರಿಗೆ ನೆಗೆಟಿವ್ ವರದಿ ಕಡ್ಡಾಯ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
