ನವದೆಹಲಿ :ಸೆಲೆಬ್ರಿಟಿ ಅಮ್ಮಂದಿರು ಅವರ ಮಕ್ಕಳನ್ನು ಹೇಗೆ ಬೆಳೆಸುತ್ತಾರೆ ಎಂದು ಎಲ್ಲರಿಗೂ ಕುತೂಹಲ. ಎಲ್ಲಕ್ಕೂ ಕೆಲಸದವರನ್ನಿಟ್ಟುಕೊಂಡು ಸುಲಭವಾಗಿ ತಮ್ಮ ಜೀವನ ನಡೆಸುತ್ತಾರೆ ಎಂಬ ಕಲ್ಪನೆಯೂ ಉಂಟು. ಆದರೆ, ಮಕ್ಕಳೊಂದಿಗೆ ಸಮಯ ಕಳೆಯುವ ವಿಶಿಷ್ಟ ಕ್ಷಣಗಳನ್ನು ಅವರೂ ಹುಡುಕುತ್ತಾರೆ, ನೋಡಿ.
ಬಾಲಿವುಡ್ ನಟಿ ಹಾಗೂ ಮಾಜಿ ಮಿಸ್​ ಯೂನಿವರ್ಸ್ ಆಗಿರುವ ಸುಷ್ಮಿತಾ ಸೇನ್​ರ ಉದಾಹರಣೆ ತೆಗೆದುಕೊಳ್ಳೋಣ. ತಮ್ಮ ಇಬ್ಬರು ಹೆಣ್ಣುಮಕ್ಕಳೊಂದಿಗೆ ವೀಕೆಂಡ್​ಅನ್ನು ಕಳೆಯುತ್ತಿರುವ ಸೇನ್, ಚಿಕ್ಕ ಮಗಳಿಗೆ ತಾವೇ ಹೇರ್​ ಕಟ್​ ಕೊಡುತ್ತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ! ನಿನ್ನೆ ರಾತ್ರಿ ಇನ್ಸ್​ಟಾಗ್ರಾಂನಲ್ಲಿ ಮಗಳು ಅಲಿಸಾಗೆ ಹೇರ್​ಕಟ್​ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.


A post shared by Sushmita Sen (@sushmitasen47)
“ನಾನು ಅವಳಿಗೆ ಮುಖ್ಯ ಎಂದು ತೋರಿಸುವ ವಿಶಿಷ್ಟ ರೀತಿಯನ್ನು ಅಲೀಸಾ ಹೊಂದಿದ್ದಾಳೆ. ಅವಳಿಗೆ 3 ವರ್ಷ ವಯಸ್ಸಾಗಿದ್ದಾಗಿನಿಂದ ನಾನೇ ಅವಳ ಅಫಿಷಿಯಲ್ ಹೇರ್​ಡ್ರೆಸ್ಸರ್! ನಾನು ಅವಳ ಕೂದಲು ಕಟ್​ ಮಾಡುವಾಗ ಫುಲ್​ ಸ್ಟ್ರೆಸ್​ನಲ್ಲಿದ್ದರೆ ಅವಳು ಮಾತ್ರ ಧ್ಯಾನ ಮಾಡುವಂತೆ ಕೂರುತ್ತಾಳೆ! ಅವಳ ವಿಶ್ವಾಸ ಮೆಚ್ಚುವಂಥದ್ದು” ಎಂದು ಸುಷ್ಮಿತಾ ಸೇನ್ ಈ ಚಿತ್ರಕ್ಕೆ ಟಿಪ್ಪಣಿ ಬರೆದಿದ್ದಾರೆ. ಜೊತೆಗೆ, ತಮ್ಮ ದೊಡ್ಡ ಮಗಳು ರೀನೀ ಸೇನ್ ತೆಗೆದಿರುವ ಈ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿ, ‘ಐ ಲವ್ ಯೂ ಗಯ್ಸ್​’ ಎಂದಿದ್ದಾರೆ.(ಏಜೆನ್ಸೀಸ್)
ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್​ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ

ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!

VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
