ನವದೆಹಲಿ :ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್​ ವಿರುದ್ಧ ಸುಲಿಗೆಯ ರಾಕೆಟ್​ ನಡೆಸುತ್ತಿರುವ ಗಂಭೀರ ಆರೋಪ ಮಾಡಿದ್ದ ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್​ ಸಿಂಗ್, ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೋಮ್​ ಗಾರ್ಡ್ಸ್ ಇಲಾಖೆಗೆ ತಮ್ಮನ್ನು ವರ್ಗಾವಣೆ ಮಾಡಿರುವ ಸರ್ಕಾರಿ ಆದೇಶವನ್ನು ಪ್ರಶ್ನಿಸುವುದರೊಂದಿಗೆ ದೇಶ್​ಮುಖ್​ರ ‘ವಿವಿಧ ಭ್ರಷ್ಟಾಚಾರ’ದ ಬಗ್ಗೆ ಸಿಬಿಐ ತನಿಖೆ ಕೋರಿದ್ದಾರೆ.
ಕಳೆದ ವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಗೃಹ ಮಂತ್ರಿ ದೇಶ್​ಮುಖ್​ ಬಗ್ಗೆ ಪತ್ರ ಬರೆದಿದ್ದ ಸಿಂಗ್, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದರು. ಪತ್ರದಲ್ಲಿ, ದೇಶ್​ಮುಖ್​ ಅವರು ಹಲವು ಪೊಲೀಸ್ ಅಧಿಕಾರಿಗಳೊಂದಿಗೆ ಪಬ್​ ಮತ್ತು ರೆಸ್ಟೊರೆಂಟ್​ಗಳಿಂದ ಹಣ ಸುಲಿಗೆ ಮಾಡುವ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ:ಭಾರತೀಯರಿಗೆ ಸ್ಪೆಷಲ್​ ಆಗಿ ಬರ್ತಿದೆ ಸ್ಕೋಡಾ ‘ಕುಶಾಕ್​’; ಇದರ ಸ್ಪೆಷಾಲಿಟಿ ಏನೆಂದು ತಿಳಿದುಕೊಳ್ಳಿ
ಇದೀಗ ಸುಪ್ರೀಂ ಕೋರ್ಟ್​ನಲ್ಲಿ ತಮ್ಮನ್ನು ಮುಂಬೈ ಕಮಿಷನರ್ ಹುದ್ದೆಯಿಂದ ವರ್ಗಾಯಿಸಿ ಹೋಂ ಗಾರ್ಡ್ಸ್ ಮುಖ್ಯಸ್ಥನನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ಪರಮ್ ಬೀರ್ ಸಿಂಗ್ ಪ್ರಶ್ನಿಸಿದ್ದಾರೆ. ಜೊತೆಗೇ ದೇಶ್​​ಮುಖ್​ ಅವರ ಮೇಲಿರುವ ಭ್ರಷ್ಟಾಚಾರದ ಆರೋಪಗಳ ನಿಷ್ಕಕ್ಷಪಾತವಾದ ತನಿಖೆಗೆ ಆದೇಶಿಸಬೇಕೆಂದು ಕೋರಿದ್ದಾರೆ.(ಏಜೆನ್ಸೀಸ್)
VIDEO | ಸೀರಿಸ್ ಗೆದ್ದ ನಂತರ ಯುವಿ​ಗೆ ಸಿಕ್ಕಿತು ವಿಶೇಷ ಸ್ವಾಗತ !

ಆಟದ ನಡುವೆ ಪೆಟ್ಟಿಗೆ ಒಳಕ್ಕೆ ಜಿಗಿದ ಮುಗ್ಧ ಮಕ್ಕಳು… ಅಲ್ಲಿ ಕಾಯುತ್ತಿದ್ದ ಜವರಾಯ !

“ಬೇಕಿದ್ದರೆ ನನ್ನ ತಲೆಯ ಮೇಲೆ ಕಾಲಿಟ್ಟು ಒದೆಯಿರಿ, ಆದರೆ…”

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 17 =
Remember me
