ಬೆಹ್ರಾಂಪುರ:ಪೊಲೀಸರು ಹಾಗೂ ಸಾರ್ವಜನಿಕರ ನಡುವಿನ ಘರ್ಷಣೆಯಲ್ಲಿ ಪೊಲೀಸ್​ ಅಧಿಕಾರಿಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಛತ್ರಪುರ್ ಕ್ಷೇತ್ರದ ಮಾಜಿ​ ಶಾಸಕ ನಾರಾಯಣ ರೆಡ್ಡಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬರ್ಹಾಂಪುರ ಎಡಿಜೆ-3 ನ್ಯಾಯಾಲಯವು ನಿನ್ನೆ (ಜು.31) ತೀರ್ಪು ಪ್ರಕಟಿಸಿತು. ಪೊಲೀಸ್​ ಮೀಸಲು ನಿರೀಕ್ಷಕ ಬಿನಯ್ ಮೆಹರ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮ್ಯುನಿಸ್ಟ್ ನಾಯಕ ನಾರಾಯಣರೆಡ್ಡಿ ಸೇರಿದಂತೆ ಒಟ್ಟು 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 1998ರಲ್ಲಿ ಪೊಲೀಸರು-ಸಾರ್ವಜನಿಕರ ನಡುವಿನ ಘರ್ಷಣೆ ನಡೆಯಿತು.
ನ್ಯಾಯಾಲಯದ ತೀರ್ಪಿನ ಬಗ್ಗೆ ಮಾಜಿ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತೀರ್ಪು ಸಂಪೂರ್ಣವಾಗಿ ಪಕ್ಷಪಾತದಿಂದ ಕೂಡಿದೆ. ಇದು ಸರ್ಕಾರದ ಪ್ರಭಾವಕ್ಕೆ ಒಳಗಾದ ತೀರ್ಪು. ರೈತರಿಗೆ ಮತ್ತು ಸಾರ್ವಜನಿಕರಿಗೆ ನ್ಯಾಯ ಸಿಕ್ಕಿಲ್ಲ. ನಮಗೆ ನಿರಾಶೆಯಾಗಿದೆ. ನ್ಯಾಯ ದೊರಕಿಸಲು ಉನ್ನತ ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ನಾರಾಯಣರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಕಾಂಗ್ರೆಸ್​ ನಾಯಕರ ಸಭೆ; ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿದೆಯೇ ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ: ಡಿಸಿಎಂ
25 ವರ್ಷಗಳ ಬಳಿಕ ನ್ಯಾಯಾಲಯದಿಂದ ಅತ್ಯಂತ ದುರದೃಷ್ಟಕರ ನಿರ್ಧಾರ ಬಂದಿದೆ. ನ್ಯಾಯ ತುಂಬಾ ವಿಳಂಬವಾಯಿತು ಮತ್ತು ನ್ಯಾಯವನ್ನು ನಿರಾಕರಿಸಲಾಯಿತು. ನ್ಯಾಯಾಂಗವು ಸರ್ಕಾರದ ಪ್ರಭಾವಕ್ಕೆ ಒಳಗಾಗಿದೆ ಎಂದು ಮತ್ತೊಬ್ಬ ಆರೋಪಿ ಹೇಳಿದ್ದಾರೆ.
ವರದಿಗಳ ಪ್ರಕಾರ ಟಾಟಾ ಕಂಪನಿಯು ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಳ್ಳುವ ಕುರಿತು ಸಿಂಧಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ 1998ರಲ್ಲಿ ಉಂಟಾದ ಘರ್ಷಣೆ ಹಿಂಸಾಚಾರಕ್ಕೆ ತಿರುಗಿತು. ಘಟನೆಯಲ್ಲಿ ಪೊಲೀಸ್ ಆರ್​ಐ ಬಿನಯ್ ಮೆಹರ್ ಸಾವಿಗೀಡಾದರು. ಈ ಸಂಬಂಧ ಛತ್ರಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಒಟ್ಟು 22 ಮಂದಿ ಆರೋಪಿಗಳಾಗಿದ್ದು, ಈವರೆಗೆ 8 ಮಂದಿ ಮೃತಪಟ್ಟಿದ್ದಾರೆ.(ಏಜೆನ್ಸೀಸ್​)
ಉಡುಪಿಯ ಶರತ್ ಸಾವಿನಿಂದಲೂ ಎಚ್ಚೆತ್ತುಕೊಳ್ಳದ ಯುವಕರು​: ಯಾದಗಿರಿ ಫಾಲ್ಸ್​ನಲ್ಲಿ ಫೋಟೋಗಾಗಿ ದುಸ್ಸಾಹಸ

ಡೆಂಗ್ಯೂ ಏರಿಕೆ; ಆ್ಯಂಟಿ ಲಾರ್ವಾ ಸಿಂಪಡಿಸಲು ಡ್ರೋನ್‌ಗಳನ್ನು ಬಳಸಲು ಮುಂದಾದ ದೆಹಲಿ ಮುನ್ಸಿಪಾಲಿಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − three =
Remember me
