ತಿರುವನಂತಪುರ:ಕೇರಳದ ಮಾಜಿ ರಣಜಿ ಕ್ರಿಕೆಟಿಗ ಜಯಮೋಹನ್‌ ಥಾಂಪಿ ಅವರ ಮೃತದೇಹವು ಅವರ ಮನೆಯಲ್ಲಿಯೇ ಪತ್ತೆಯಾಗಿದೆ!
ಮಗನ ಜತೆ ಕೇರಳದ ಮನಕಾಡ್‌ನಲ್ಲಿ ವಾಸಿಸುತ್ತಿದ್ದ ಜಯಮೋಹನ್​ ಅವರ ಮೃತದೇಹವು ದೊರೆತಿದ್ದು, ಕೊಲೆ ಆರೋಪದಲ್ಲಿ ಸದ್ಯ ಮಗ ಅಶ್ವಿನ್​ನನ್ನು ಬಂಧಿಸಲಾಗಿದೆ.
ಜಯಮೋಹನ್ ಅವರು ತ್ರವನ್‌ಕೋರ್‌ನಲ್ಲಿ ಬ್ಯಾಂಕ್‌ನ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಶ್ವಿನ್, ಕೇರಳದಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಶವವಿದ್ದರೂ ಮಗ ಅದರ ಬಗ್ಗೆ ಮಾಹಿತಿ ನೀಡದ ಕಾರಣ, ಅವನ ಮೇಲೆಯೇ ಪೊಲೀಸರಿಗೆ ಸಂದೇಹ ಬಂದು ಬಂಧಿಸಿದ್ದಾರೆ.
ಇದನ್ನೂ ಓದಿ:ಬೈಕ್​ ಕದಿಯಲು ಬರುವೆ, ತಾಕತ್​ ಇದ್ರೆ ಹಿಡೀರಿ: ಪೊಲೀಸರಿಗೆ ಕಳ್ಳನ ಸವಾಲ್​!
ಬಂಧನದ ವೇಳೆ ತಾನೇ ಕೊಲೆ ಮಾಡಿರುವುದಾಗಿ ಮಗ ಒಪ್ಪಿಕೊಂಡ ಎಂದು ಹೇಳಲಾಗುತ್ತಿದ್ದು, ಕೊಲೆಗೆ ನಿಖರ ಕಾರಣ ಇದುವರೆಗೆ ತಿಳಿದುಬಂದಿಲ್ಲ.
ಜಯಮೋಹನ್​ ಥಾಪಿ ಅವರಿಗೆ 64 ವರ್ಷ ವಯಸ್ಸಾಗಿತ್ತು. ಇವರು ಇದಾಗಲೇ ಆರು ಪ್ರಥಮ ದರ್ಜೆ ಕ್ರಿಕೆಟಿನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ್ದರು. ವಿಕೆಟ್‌ ಕೀಪರ್‌ -ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದರು. ಬಲಗೈ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದ ಜಯಮೋಹನ್ ಅವರು ಕೇರಳ ತಂಡದ ಪರವಾಗಿ 1979 ಮತ್ತು 1982ರ ನಡುವೆ ಆಟವಾಡಿದ್ದರು. ಈ ಪಂದ್ಯದಲ್ಲಿ 114 ರನ್ ಗಳಿಸಿದ್ದರು. ಇದಕ್ಕೂ ಮುನ್ನ ಕೇರಳ ಅಂಡರ್-22 ತಂಡದ ಪರ ಮೂರು ವರ್ಷಗಳ ಕಾಲ ಆಡಿದ್ದರು ಎಂದು ಕ್ರಿಕೆಟ್​ ಸಂಸ್ಥೆ ಹೇಳಿದೆ.
ಜಯಮೋಹನ್ ಅವರ ಹೆಂಡತಿ ಅನಿತಾ ಎರಡು ವರ್ಷಗಳ ಹಿಂದೆ ತೀರಿಕೊಂಡಿದ್ದರು. ಅವರ ಸಾವಿನ ನಂತರ ಜಯಮೋಹನ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಇದನ್ನೂ ಓದಿ:20 ವರ್ಷದ ಪುತ್ರಿಯ ಅಮಾನುಷ ಕೊಲೆ: ಪಾಲಕರಿಂದಲೇ ಮಗಳ ಮರ್ಯಾದಾಗೇಡು ಹತ್ಯೆ?
ಸದ್ಯ ಮಗ ಅಶ್ವಿನ್​ ಸೇರಿದಂತೆ ಕೊಲೆಗೆ ಸಹಕರಿಸಿರುವ ನೆರೆಹೊರೆಯವರನ್ನೂ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಜಯಮೋಹನ್​ ಅವರ ಹಣೆಗೆ ಬಲವಾದ ಪೆಟ್ಟಾಗಿದ್ದು ರಕ್ತಸ್ರಾವವಾಗಿರುವ ಗುರುತು ಇದೆ. ಈ ಹಿನ್ನೆಲೆಯಲ್ಲಿ ಮಗ ಅವರನ್ನು ಬಲವಂತವಾಗಿ ದೂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ಗಂಟೆ ಲಿಫ್ಟ್​ನಲ್ಲಿ ಸಿಲುಕಿ ಒದ್ದಾಡಿದ ಮಕ್ಕಳು! ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
