ಜೈಪುರ:2021ರ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ತನ್ನ ಪುತ್ರಿ ಮತ್ತು ಪುತ್ರನಿಗೆ ತಂದುಕೊಟ್ಟು ಪಾಸ್ ಮಾಡಿಸಿದ ಆರೋಪದಡಿ ರಾಜಸ್ಥಾನದ ಸಾರ್ವಜನಿಕ ಸೇವಾ ಆಯೋಗದ (ಆರ್‌ಪಿಎಸ್‌ಸಿ) ಮಾಜಿ ಸದಸ್ಯ ರಾಮು ರಾಮ್ ರೈಕಾರನ್ನು ಇದೀಗ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡವು (ಎಸ್‌ಒಜಿ) ಬಂಧಿಸಿದೆ.
ಇದನ್ನೂ ಓದಿ:ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆ ಕಾರಣ! ಶಾಕಿಂಗ್ ವಿಷಯ ಬಿಚ್ಚಿಟ್ಟರು ಬ್ಯಾಚುಲರ್‌ ಬಾಯ್‌ ತಂದೆ
ಸದ್ಯ ಈ ಪ್ರಕರಣದಡಿ ರೈಕಾ ಅವರ ಪುತ್ರಿ ಶೋಭಾ ರೈಕಾ (26) ಮತ್ತು ಪುತ್ರ ದೇವೇಶ್​ರನ್ನು (27) ಬಂಧಿಸಲಾಗಿದ್ದು, ಇವರ ಜತೆ ಇತರ ಮೂವರು ಟ್ರೈನಿ ಎಸ್‌ಐಗಳಾದ ಮಂಜು ದೇವಿ (30), ಅವಿನಾಶ್ ಪಲ್ಸಾನಿಯಾ (28), ಮತ್ತು ವಿಜೇಂದ್ರ ಕುಮಾರ್​ರನ್ನು (41) ಕೂಡ ಅರೆಸ್ಟ್ ಮಾಡಲಾಗಿದೆ ಎಂದು ಎಡಿಜಿ ವಿಕೆ ಸಿಂಗ್ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳನ್ನು ಸೆ.7 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ವರದಿಗಳ ಪ್ರಕಾರ, 2021ರ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದಿರುವ ಬಂಧಿತ ಟ್ರೈನಿ ಎಸ್‌ಐಗಳಲ್ಲಿ ಅನೇಕರು ಅದೇ ಪರೀಕ್ಷೆಗೆ ಮತ್ತೆ ಹಾಜರಾಗಲು ಕೇಳಿದಾಗ ಅತ್ಯಂತ ಕಳಪೆ ಪ್ರದರ್ಶನ ತೋರಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಐದನೇ ಶ್ರೇಯಾಂಕ ಪಡೆದಿದ್ದ ಶೋಭಾ ಮತ್ತು 40ನೇ ರ್ಯಾಂಕ್ ಪಡೆದಿದ್ದ ಆಕೆಯ ಸಹೋದರ ದೇವೇಶ್ 2021ರ ಪರೀಕ್ಷೆಯಲ್ಲಿ ತಮ್ಮ ತಂದೆ ಆರ್‌ಪಿಎಸ್‌ಸಿ ಸದಸ್ಯರಾಗಿದ್ದ ಕಾರಣ ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ಪಡೆದು, ಉತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).
ಅಬ್ಬಾ! ಎಂತಹ ಜಾಗದಲ್ಲಿ ಅಡಗಿದೆ MH370 ವಿಮಾನ: ನಿಗೂಢ ನಾಪತ್ತೆ ಕೇಸ್​ ಬಗೆಹರಿದಿದೆ ಎಂದ ವಿಜ್ಞಾನಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one + fifteen =
Remember me
