ನವದೆಹಲಿ:ಭಾರತದ ಮಕ್ಕಳ ಬೆತ್ತಲೆ ಹಾಗೂ ಅಶ್ಲೀಲ ಚಿತ್ರಗಳನ್ನು ಕೇಳಿ ಪಡೆಯುತ್ತಿದ್ದ ಲಂಡನ್ ಶಿಕ್ಷಕನಿಗೆ 12 ವರ್ಷಗಳ ಜೈಲುಶಿಕ್ಷೆ ಆಗಿದೆ. ಲಂಡನ್​ನ ಸೌತ್​ವಾರ್ಕ್ ಕ್ರೌನ್​ ಕೋರ್ಟ್​ ಈತನಿಗೆ ಇಂದು ಈ ಶಿಕ್ಷೆಯನ್ನು ವಿಧಿಸಿದೆ.
ಈಸ್ಟ್ ಡಲ್ವಿಚ್​ನ ಮ್ಯಾಥ್ಯೂ ಸ್ಮಿತ್​ (35) ಶಿಕ್ಷೆಗೊಳಗಾದ ಅಪರಾಧಿ. ಲಂಡನ್​ನ ಶಾಲೆಯೊಂದರಲ್ಲಿ ಈತ ಉಪ ಮುಖ್ಯೋಪಾಧ್ಯಾಯ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು 2022ರ ನವೆಂಬರ್​ನಲ್ಲಿ ನ್ಯಾಷನಲ್ ಕ್ರೈಮ್ ಏಜೆನ್ಸಿ (ಎನ್​ಸಿಎ) ಬಂಧಿಸಿತ್ತು.
ಈತ ಭಾರತದ ಹದಿಹರೆಯದವರನ್ನು ಸಂಪರ್ಕಿಸಿ ಅವರಿಗಿಂತ ಚಿಕ್ಕ ಮಕ್ಕಳ ಬೆತ್ತಲೆ ಇಲ್ಲವೇ ಅಶ್ಲೀಲ ಫೋಟೋಗಳನ್ನು ಕಳಿಸುವಂತೆ ಹೇಳುತ್ತಿದ್ದ. ಅಲ್ಲದೆ ಅದಕ್ಕೆ ಪ್ರತಿಯಾಗಿ ಹಣ ನೀಡುವ ಆಮಿಷವೊಡ್ಡುತ್ತಿದ್ದ. ಆನ್​​ಲೈನ್​ನಲ್ಲಿ ಇಂಥ ಕೆಲಸವನ್ನು ಮಾಡುತ್ತಿದ್ದಾಗಲೇ ಈತ ಸಿಕ್ಕಿಬಿದ್ದಿದ್ದು, ಬಂಧಿಸಲ್ಪಟ್ಟಿದ್ದ.
ಇದನ್ನೂ ಓದಿ:ಇಂಟರ್​​ಪೋಲ್ ಜತೆ ಸಮನ್ವಯ ಸಾಧಿಸಿದ ಸಿಬಿಐ: ಬೆಂಗಳೂರಿಂದ ಅಮೆರಿಕಕ್ಕೆ ಪರಾರಿಯಾಗಿದ್ದ ಅಪರಾಧಿಯ ಬಂಧನ
ಮಕ್ಕಳ ಲೈಂಗಿಕ ಶೋಷಣೆಗೆಂತೆಲೇ ಈತ ಡಾರ್ಕ್​ ವೆಬ್​ ಸೈಟ್​​ಗಳನ್ನು ಹೊಂದಿದ್ದ. ಮಕ್ಕಳ ಚಿತ್ರಗಳನ್ನು ಪಡೆದುಕೊಂಡು ಅವುಗಳಿಗೆ ಅಪ್​ಲೋಡ್ ಮಾಡುತ್ತಿದ್ದ. ಮಕ್ಕಳ ಜೊತೆ ಹೇಗೆ ಲೈಂಗಿಕವಾಗಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಹದಿಹರೆಯದವರಿಗೆ ಸೂಚನೆ ನೀಡುತ್ತಿದ್ದ ಈತ ಅದಕ್ಕೆ ಪೂರಕವಾಗಿ ಕೆಲ ಫೋಟೋ/ವಿಡಿಯೋ ಕಳಿಸಿ ಅದೇ ರೀತಿ ವರ್ತಿಸಿ ಫೋಟೋ/ವಿಡಿಯೋ ಕಳಿಸುವಂತೆ ಹೇಳುತ್ತಿದ್ದುದರ ಕುರಿತು ಕೂಡ ದಾಖಲೆ ಸಿಕ್ಕಿದೆ.
ಇದನ್ನೂ ಓದಿ:ಟ್ಯೂಷನ್​ ಮುಗಿಸಿ ಮನೆಗೆ ಮರಳುತ್ತಿದ್ದ 5-8 ವರ್ಷದ ಮಕ್ಕಳಿಬ್ಬರ ಸಾವು; ಇನ್ನು ಮೂವರಿಗೆ ಗಂಭೀರ ಗಾಯ..
ಅಲ್ಲದೆ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಹೇಗೆ ಅವರ ಸ್ನೇಹ ಗಳಿಸಬೇಕು ಎನ್ನುವ ಕುರಿತು ಕೂಡ ಈತ ಮಾರ್ಗದರ್ಶನ ನೀಡುತ್ತಿದ್ದ. ಈತ ಭಾರತದ ನೇಪಾಳದಲ್ಲಿ ಬಹಳಷ್ಟು ಕಾಲ ಇರುತ್ತಿದ್ದು, ಅಲ್ಲಿದ್ದಾಗ ಇಂಥ ಅಪರಾಧ ಎಸಗಿದ್ದ. ಇದಕ್ಕೂ ಮೊದಲು ಈತ 2007-14ರ ಅವಧಿಯಲ್ಲಿ ಭಾರತದ ವಿವಿಧ ಅನಾಥಾಶ್ರಮ ಹಾಗೂ ಎನ್​ಜಿಒಗಳಲ್ಲಿ ಕೆಲಸ ಮಾಡಿದ್ದ.
ಸ್ಮಿತ್​ನ ಲ್ಯಾಪ್​ಟಾಪ್​, ಎಸ್​ಡಿ ಕಾರ್ಡ್ ಹಾಗೂ ಮೊಬೈಲ್​ಫೋನ್​ಗಳಲ್ಲಿ ಸೇವ್ ಆಗಿದ್ದ ಮಕ್ಕಳ 1.2 ಲಕ್ಷಕ್ಕೂ ಅಧಿಕ ಫೋಟೋಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. 13 ವರ್ಷ ಕೆಳಗಿನ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವಂತೆ ಪ್ರೇರೇಪಿಸಿದ್ದ ಹಲವು ಪ್ರಕರಣಗಳು ಈತನ ಮೇಲಿವೆ. –ಏಜೆನ್ಸೀಸ್
ಹೃದಯಾಘಾತಕ್ಕೆ ಮತ್ತೊಂದು ಬಲಿ: 15 ವರ್ಷದ ವಿದ್ಯಾರ್ಥಿನಿ ಕುಸಿದು ಬಿದ್ದು ಸಾವು

ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + fourteen =
Remember me
