ನವದೆಹಲಿ:ದೀರ್ಘಕಾಲದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ತೇರಿ ಸಂಸ್ಥೆಯ ಮಾಜಿ ಮುಖ್ಯಸ್ಥ ಹಾಗೂ ಪರಿಸರವಾದಿ ಆರ್​.ಕೆ.ಪಚೌರಿ(79) ಅವರು ಗುರುವಾರ ರಾತ್ರಿ ಸಾವಿಗೀಡಾಗಿದ್ದಾರೆ.
ಆರ್​.ಕೆ.ಪಚೌರಿ ಮೃತರಾಗಿರುವ ವಿಚಾರವನ್ನು ತೇರಿ ಸಂಸ್ಥೆಯ ಮಹಾನಿರ್ದೇಶಕರಾದ ಅಜಯ್ ಮಥೂರ್​ ಅವರು ಗುರುವಾರ ರಾತ್ರಿ ಖಚಿತಪಡಿಸಿದ್ದಾರೆ.
ತೇರಿ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಆರ್​.ಕೆ. ಪಚೌರಿ ಅವರನ್ನು ಕಳೆದುಕೊಂಡಿದ್ದೇವೆ ಎಂದು ಹೇಳಲು ತುಂಬಾ ದುಃಖವಾಗುತ್ತಿದೆ. ಇಂತಹ ದುಃಖದ ಸಂದರ್ಭದಲ್ಲಿ ಇಡೀ ತೇರಿ ಕುಟುಂಬ ಪಚೌರಿ ಅವರು ಕುಟುಂಬದೊಂದಿಗೆ ನಿಲ್ಲುತ್ತದೆ ಎಂದು ತೇರಿ ಸಂಸ್ಥೆ ತನ್ನ ಟ್ವಿಟರ್​ನಲ್ಲಿ ಬರೆದುಕೊಂಡಿದೆ.
ತೇರಿ ಸಂಸ್ಥೆ ಇಂದು ಏನಾಗಿದೆ ಎಂದರೆ ಅದಕ್ಕೆ ಪಚೌರಿ ಅವರ ನಿರಂತರ ಪರಿಶ್ರಮವೇ ಕಾರಣ. ಸಂಸ್ಥೆಯನ್ನು ಮುನ್ನಡೆಸಿ ಸುಸ್ಥಿರ ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಪಚೌರಿ ಅವರ ಪಾತ್ರ ಪ್ರಮುಖವಾಗಿದೆ ಎಂದು ಅಜಯ್​ ಮಥೂರ್​ ಹೇಳಿದ್ದಾರೆ. 2015ರಲ್ಲಿ ಪಚೌರಿ ಅವರಿಂದ ತೆರವಾದ ಮಹಾನಿರ್ದೇಶಕ ಸ್ಥಾನಕ್ಕೆ ಅಜಯ್​ ಮಥೂರ್​ ನೇಮಕವಾದರು.
ಜಾಗತಿಕ ಸುಸ್ಥಿರ ಬೆಳವಣಿಗೆಗೆ ಪಚೌರಿ ಅವರ ಕೊಡಗೆಗೆ ಸಾಟಿಯಿಲ್ಲ. ಹವಮಾನ ಬದಲಾವಣೆಯ ಅಂತರಸರ್ಕಾರಿ ಸಮಿತಿಯಲ್ಲಿನ ಇವರ ನಾಯಕತ್ವದಿಂದಾಗಿ ಇಂದು ಹವಾಮಾನ ಬದಲಾವಣೆ ಮೇಲಿನ ಚರ್ಚೆಗೆ ಅಡಿಗಲ್ಲು ಹಾಕಿದಂತಾಗಿದೆ ಎಂದು ತೇರಿ ಸಂಸ್ಥೆಯ ಚೇರ್ಮನ್​ ಹೇಳಿದ್ದಾರೆ.
ಪಚೌರಿ ಅವರು ನವದೆಹಲಿಯ ಎಸ್ಕಾರ್ಟ್​ ಹಾರ್ಟ್ ಸಂಸ್ಥೆಗೆ ಬಹು ದಿನಗಳ ಹಿಂದೆಯೇ ದಾಖಲಾಗಿದ್ದರು.​ ಅವರನ್ನು ಮಂಗಳವಾರ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವಿಗೀಡಾಗಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
