ನವದೆಹಲಿ:ಕಾಂಗ್ರೆಸ್​ನ ಮಾಜಿ ಕೇಂದ್ರ ಸಚಿವ ಮತ್ತು ಪ್ರಧಾನ ಕಾರ್ಯದರ್ಶಿ ಮುಕುಲ್​ ವಾಸ್ನಿಕ್​ ಅವರು ಇಳಿ ವಯಸ್ಸಿನಲ್ಲಿ ಹಸೆಮಣೆ ಏರಿದ್ದಾರೆ. 60 ವರ್ಷ ವಯಸ್ಸಿನ ಅವರು ತಮ್ಮ ಸ್ನೇಹಿತೆ ರವೀನ್​ ಖುರಾನಾ ಜತೆ ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಪಂಚತಾರಾ ಹೋಟೆಲ್​ನಲ್ಲಿ ನಡೆದ ಮದುವೆ ಸಂಭ್ರಮದಲ್ಲಿ ಹಲವು ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​, ಕಾಂಗ್ರೆಸ್​ನ ಹಿರಿಯ ಮುಖಂಡರಾದ ಅಹ್ಮದ್​ ಪಟೇಲ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ನೂತನ ಜೀವನವನ್ನು ಆರಂಭಿಸಿರುವ ಮುಕುಲ್​ ವಾಸ್ನಿಕ್​ ದಂಪತಿಗೆ ಅಶೋಕ್​ ಗೆಹ್ಲೋಟ್​, ಮಾಜಿ ಕೇಂದ್ರ ಸಚಿವ ಮನೀಶ್​ ತಿವಾರಿ ಸೇರಿದಂತೆ ಕಾಂಗ್ರೆಸ್​ನ ಅನೇಕ ನಾಯಕರು ಟ್ವಿಟ್ಟರ್​ನಲ್ಲಿ ಶುಭಹಾರೈಸಿದ್ದಾರೆ.
ದಲಿತ ರಾಜಕಾರಣಿಯಾಗಿರುವ ಮುಕುಲ್​ ವಾಸ್ನಿಕ್​ ಮಹಾರಾಷ್ಟ್ರದ ಪ್ರಸಿದ್ಧ ನಾಯಕ ಬಾಲಕೃಷ್ಣ ಅವರ ಮಗ. 2009ರಿಂದ 2012ರವರೆಗೆ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಇವರನ್ನು ಕಾಂಗ್ರೆಸ್​ನಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಲಾಗುವುದು ಎನ್ನುವ ಸುದ್ದಿಗಳು ಹರಿದಾಡಿತ್ತು.(ಏಜೆನ್ಸೀಸ್​)
Wishing Mukul Wasnik Ji and Raveena Khurana Ji heartiest congratulations on embarking on this new journey together as a couple. May the coming years prove to be the happiest time of your life. Stay blessed.pic.twitter.com/XPVMx0CjXf
— Ashok Gehlot (@ashokgehlot51)March 8, 2020

It was such a pleasure for Naaznin &I to greet the newly weds@MukulWasnikand Ravina Khurana.I met Sh. Mukul Wasnik way back in 1984 & Ravina in 1985 when all of us went for the World Festival of Youth & Students to Moscow.So happy for the two of them. May God Bless them.pic.twitter.com/sWQu95iZ3d
— Manish Tewari (@ManishTewari)March 8, 2020

ಡಿಜಿಟಲ್ ವೋಟರ್ ಕಾರ್ಡ್​ಗೆ ಚುನಾವಣಾ ಆಯೋಗ ಒಲವು

ಯೆಸ್​ ಬ್ಯಾಂಕ್​ ಸಂಸ್ಥಾಪಕನ ಬೆನ್ನತ್ತಿದ ಇ.ಡಿ., ಸಿಬಿಐ ಅಧಿಕಾರಿಗಳು; ಏರ್​ಪೋರ್ಟ್​ನಲ್ಲಿ ಸಿಕ್ಕಿಬಿದ್ದ ಪುತ್ರಿ ರೋಶಿಣಿ ಕಪೂರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
