ಅಲ್ಬೆರ್ಟಾ (ಕೆನಡಾ):ಕೆನಡಾದ ಅಲ್ಬೆರ್ಟಾದಲ್ಲಿ ಡೈನಾಸರ್​ನ ಪಳೆಯುಳಿಕೆಗಳು , ಅದು 110 ದಶಲಕ್ಷ ವರ್ಷಗಳ ಹಿಂದಿನದ್ದು ಎಂದು ಗುರುತಿಸಲಾಗಿದೆ.ಕ್ರೆಟೇಶಿಯಸ್ ಕಾಲಕ್ಕಿಂತಲೂ (ಜುರಾಸಿಕ್ ಕಾಲಕ್ಕಿಂತ ಸುಮಾರು 79 ದಶಲಕ್ಷ ವರ್ಷಗಳು) ಹಿಂದಿನದ್ದು ಇದು ಎಂದು ಸಂಶೋಧಕರು ಹೇಳಿದ್ದಾರೆ.
ಬೊರೆಫೆಲ್ಟಾ ಮಾರ್ಕ್ ಮಿಚೆಲಿ ಎಂಬ ಹೆಸರಿನ ಈ ಡೈನಾಸರ್​​ನ ದೇಹದ ಮೇಲೆ ಕೋಡು, ಕೊಂಬು ಮುಂತಾದ ಆಯುಧಗಳನ್ನು ಹೊಂದಿದ್ದ‌ವು ಎಂದು ತಿಳಿದು ಬಂದಿದೆ.
ವಿಶೇಷ ಎಂದರೆ, ಇದರ ಹೊಟ್ಟೆಯಲ್ಲಿ ಕೊನೆಯ ಬಾರಿ ತಿಂದ ಆಹಾರವಾಗಿರುವ ಸಸ್ಯದ ಎಲೆಗಳು ಸಿಕ್ಕಿದ್ದು, ಇದು ಸಸ್ಯಾಹಾರಿ ಡೈನಾಸರ್ ಎಂದು ತಿಳಿದುಬಂದಿದೆ ಎಂದಿದ್ದಾರೆ ಸಂಶೋಧಕರು‌. ಸುಮಾರು 18 ಅಡಿ ಇದ್ದ ಒಂದೂವರೆ ಟನ್ ಭಾರವಿತ್ತು.‌ ಅತಿ ದೊಡ್ಡ ಆಮೆಯಾಕಾರದಲ್ಲಿ ಅಗಲವಾದ ದೇಹಕ್ಕೆ ಚಿಕ್ಕ ತಲೆ ಇತ್ತು. ನಾಲ್ಕು ಸಣ್ಣ ಕಾಲುಗಳ ಮೂಲಕ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಎಂದೆಂದಿಗೂ ಆನಂದ್‌ ಅಭಿಮಾನಿಯಾಗಿರುವೆ ಎಂದು ಸಹ-ಪ್ರಯಾಣಿಕ ಹೇಳಿದ್ದೇಕೆ?
“ಸಸ್ಯಹಾರಿ ಡೈನೋಸರ್​ಗಳ ನೇರ ಪಳೆಯುಳಿಕೆಗಳು ಸಿಕ್ಕಿದ್ದು ಬಹಳ ಅಪರೂಪ. ಹಲ್ಲು, ದವಡೆ, ಆಗ ಇದ್ದ ಸಸ್ಯಗಳು ಅದರಲ್ಲಿ ಎಷ್ಟು ಪೋಷಕಾಂಶಗಳು ಇದ್ದವು ಎಂಬುದರ ದಾಖಲೆಗಳು ಪರೋಕ್ಷವಾಗಿ ಲಭ್ಯವಾಗಿವೆ” ಎಂದು ಅಲ್ಬೆರ್ಟಾದ ರಾಯಲ್ ಟೈರೆಲ್ ಪ್ರಾಗ್ಜೀವ ವಸ್ತು ಸಂಗ್ರಹಾಲಯದ ಸಂಶೋಧಕ ಕೇಬಲ್ ಬ್ರೌನ್ ಹೇಳಿದ್ದಾರೆ.
ಈ ಕುರಿತು ರಾಯಲ್ ಸೊಸೈಟಿ ಓಪನ್ ಸೈನ್ಸ್ ಪ್ರಕಟಿಸಿದ ಅಧ್ಯಯನ ಗ್ರಂಥದಲ್ಲಿ ಈ ವಿವರಗಳನ್ನು ನೀಡಲಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಚಿಕ್ಕಪ್ಪ ಸೇರಿ ಮೂವರಿಂದ ಅತ್ಯಾಚಾರಕ್ಕೊಳಗಾದ ಬಾಲಕಿಗೆ ಹೊಸ ಬದುಕು ಕಟ್ಟಿಕೊಳ್ಳುವಾಸೆ…
ಈಗ ಸಿಕ್ಕಿರುವ ಬೊರೆಫೆಲ್ಟಾ ಮಾರ್ಕ್ ಮಿಚೆಲಿ ನೋಡೊಸಾರ್ಸ್ ವರ್ಗಕ್ಕೆ ಸೇರಿದೆ. ಅದರ ಹೊಟ್ಟೆಯಲ್ಲಿದ್ದ ಪಳೆಯುಳಿಕೆಗಳು ನಿರ್ದಿಷ್ಟ ವರ್ಗದ ಸಸ್ಯಗಳಾಗಿವೆ. ಅಲ್ಲದೆ, ಇದ್ದಿಲಿನ ಚೂರೂ ಲಭ್ಯವಾಗಿದೆ. ಡೈನೋಸಾರ್ಗಳು, ಪ್ರವಾಹಕ್ಕೆ ಅಥವಾ ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸರ್ವನಾಶವಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × 3 =
Remember me
