ನವದೆಹಲಿ:ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆಯೊಂದು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ. ಸಾಯಲು ಈ ಕುಟುಂಬದ ಸದಸ್ಯರು ಕಂಡು ಕೊಂಡ ಮಾರ್ಗ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ.
ದಿಲ್ಲಿಯ ವಸಂತವಿಹಾರದ ಅಪಾರ್ಟ್​​ಮೆಂಟ್​​ನ ಫ್ಲ್ಯಾಟ್​ವೊಂದರಲ್ಲಿ ತಾಯಿ ಹಾಗೂ ಹೆಣ್ಣುಮಕ್ಕಳಿಬ್ಬರ ಶವ ಪತ್ತೆಯಾಗಿದೆ. ಇವರ ಸಾವಿಗೆ ಕಾರಣವನ್ನು ಹುಡುಕಿದ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಈ ಮೂವರು ಮೂರು ದಿನಗಳ ಹಿಂದೆ ಮನೆಯ ಬಾಗಿಲು, ಕಿಟಕಿಗಳನ್ನು ಹೊರಗಿನ ಸಂಪರ್ಕವೇ ಇಲ್ಲದಂತೆ ಸೀಲ್​ ಮಾಡಿದ್ದಾರೆ. ನಂತರ ಅಡುಗೆ ಮನೆಗೆ ತೆರಳಿ ಗ್ಯಾಸ್​ ಓಪನ್​ ಮಾಡಿ ಹಾಗೆ ಬಿಟ್ಟಿದ್ದಾರೆ. ಗ್ಯಾಸ್​​ ಹೊರಗೆ ಹೋಗಲು ಅವಕಾಶವಿಲ್ಲದೇ ವಿಷಾನಿಲವಾಗಿ ಈ ಮೂವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಎರಡು ದಿನಗಳಾದರೂ ಬಾಗಿಲು, ಕಿಟಕಿ ತೆರೆಯದ ಕಾರಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲನ್ನು ಒಡೆದು ಒಳಪ್ರವೇಶಿಸಿದ್ದಾರೆ. ಒಳಗೆ ಹೋಗಿದ ಕೂಡಲೇ ಅದೃಷ್ಟವಶಾತ್​ ತಕ್ಷಣವೇ ಡೆತ್​​ನೋಟ್​​ ಮೇಲೆ ಕಣ್ಣಾಯಿಸಿದ್ದಾರೆ. ಈ ಪತ್ರದಲ್ಲಿ ಈ ಮೂವರು ತಾವು ಹೇಗೆ ಸಾವನ್ನಪ್ಪಿದ್ದೀವಿ ಎಂಬುದನ್ನು ಬರೆದುಕೊಂಡಿದ್ದರು. ಇದನ್ನು ತಿಳಿದ ಪೊಲೀಸರೇ ಕೆಲಕಾಲ ಶಾಕ್​ಗೆ ಒಳಗಾಗುವಂತಿತ್ತು ಇವರ ಡೆತ್​ ನೋಟ್​​.
ಇನ್ನು ಮಂಜು ಎಂಬ ಮಹಿಳೆ ತನ್ನ ಮಕ್ಕಳಾದ ಅಶಿಂಕಾ ಮತ್ತು ಅಂಕು ಇಬ್ಬರು ಸೇರಿ ಒಟ್ಟು ಮೂವರು ಮೃತಪಟ್ಟಿದ್ದಾರೆ. ಕಳೆದ ವರ್ಷ 2021ರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದ ಮಹಿಳೆಯ ಪತಿ ಕರೊನಾ ಕಾರಣದಿಂದಾಗಿ ಸಾವನ್ನಪ್ಪಿದ್ದರು. ಅಂದಿನಿಂದ ಈ ಕುಟುಂಬ ತುಂಬಾ ಸಂಕಷ್ಟ ಎದುರಿಸಿತ್ತು.

ಇದರಿಂದಲೇ ಬೇಸತ್ತು ಸಾವನ್ನಪ್ಪಿರಬಹುದೇ ಎಂಬ ಅನುಮಾನ ಈಗ ಪೊಲೀಸರನ್ನು ಕಾಡಿದೆ. ಸಾಯುವ ಮುನ್ನ ಡೆತ್​​ನೋಟು ಬರೆದಿದ್ದ ಇವರು ಸಾವಿಗೆ ಕಾರಣ ಮಾತ್ರ ಬರೆದಿಲ್ಲ. ಬದಲಾಗಿ ಬಾಗಿಲು ತೆರೆದವರು ದಯವಿಟ್ಟು ಬೆಂಕಿಕಡ್ಡಿ ಗೀರಬೇಡಿ, ಅಪಾಯಕಾರಿ ಗ್ಯಾಸ್​​ ಇದೆ ಎಂದಷ್ಟೇ ಬರೆದಿದ್ದಾರೆ. ಇನ್ನೂ ಸೂಕ್ತ ತನಿಖೆ ಬಳಿಕವೇ ನಿಖರ ಕಾರಣ ತಿಳಿಯಬಹುದು.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 8 =
Remember me
