ಲಖನೌ/ಉಡುಪಿ:ಅಯೋಧ್ಯೆಯಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಕ್ಕೆ ಮುಹೂರ್ತ ಸನ್ನಿಹಿತವಾಗಿದೆ. ಶ್ರಾವಣ ಮಾಸದ ಪೌರ್ಣಮಿ ರಕ್ಷಾ ಬಂಧನದ ಪವಿತ್ರ ದಿನವಾದ ಆ. 3 ಅಥವಾ 5ರ ಪೈಕಿ ಒಂದು ದಿನವನ್ನು ಶಿಲಾನ್ಯಾಸಕ್ಕೆ ಅಂತಿಮಗೊಳಿಸುವಂತೆ ಕೋರಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವನೆ ಕಳುಹಿಸಿದೆ.
ಶ್ರೀರಾಮ ಮಂದಿರ ನಿರ್ಮಾಣ ಸಂಬಂಧ ಭೂಮಿಯ ಧಾರಣಾ ಸಾಮರ್ಥ್ಯ ಪರಿಶೀಲಿಸುವ ಕಾರ್ಯ ಆರಂಭಗೊಂಡಿದ್ದು, ಎಲ್ ಆಂಡ್ ಟಿ ಸಂಸ್ಥೆ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಸದಸ್ಯರಾದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ದ್ವಿತೀಯ ಸಭೆ ಅಯೋಧ್ಯೆಯ ಸರ್ಕ್ಯುಟ್ ಹೌಸ್​ನಲ್ಲಿ ಶನಿವಾರ ನಡೆಯಿತು. ಉಡುಪಿಯ ನೀಲಾವರದ ಗೋಶಾಲೆಯಲ್ಲಿ ಚಾತುರ್ವಸ್ಯ ವ್ರತನಿರತರಾಗಿರುವ ಪೇಜಾವರ ಶ್ರೀಗಳು ಅಲ್ಲಿಂದಲೇ ವಿಡಿಯೋ ಸಂವಾದದಲ್ಲಿ ಭಾಗಿಯಾಗಿದ್ದರು.
ಅಭಿವೃದ್ಧಿಗೆ ಸಾವಿರ ಕೋಟಿ:ಸಭೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶ್ರೀಗಳು, ಮಂದಿರ ಭೂಮಿಯ 200 ಅಡಿ ಆಳದಲ್ಲಿ ಕಟ್ಟಡ ನಿರ್ಮಾಣ ಪರಿವೀಕ್ಷಣೆ ಕಾರ್ಯ ಪ್ರಾರಂಭಿಸಲಾಗಿದೆ. 200 ಅಡಿ ಆಳದಲ್ಲಿ ತಾಮ್ರಪತ್ರ ಇಡುವ ಬಗ್ಗೆ ಇಂದಿನ ಸಭೆಯಲ್ಲಿ ತೀರ್ಮಾನ ಆಗಿದೆ. 300 ಕೋಟಿ ರೂ. ವೆಚ್ಚದಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಲಿದೆ. ಮೊದಲ ಹಂತದಲ್ಲಿ 70 ಎಕರೆ ಪರಿಸರದಲ್ಲಿ ಒಟ್ಟಾರೆ 1000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಟ್ರಸ್ಟ್​ನ ಅಧ್ಯಕ್ಷ ನೃತ್ಯ ಗೋಪಾಲದಾಸ ಮಹಾರಾಜ್ ಅಧ್ಯಕ್ಷತೆಯಲ್ಲಿ ಶನಿವಾರ ಅಪರಾಹ್ನ 3 ಗಂಟೆಗೆ ಸಭೆ ನಡೆಯಿತು. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿಗಳಾದ ಸುಪ್ರೀಂಕೋರ್ಟ್ ಹಿರಿಯ ವಕೀಲ ಟಿ. ಪರಾಶರನ್, ಹರಿದ್ವಾರ ಶ್ರೀ ಯುಗಪುರುಷ ಪರಮಾನಂದ ಮಹಾರಾಜ್ ಸಹಿತ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ತೀರ್ಥ ಕ್ಷೇತ್ರ ಟ್ರಸ್ಟ್​ನ ಅಧ್ಯಕ್ಷರ ಸಹಿತ ಕೆಲವು ಟ್ರಸ್ಟಿಗಳು ಅಯೋಧ್ಯೆಯಲ್ಲಿಯೇ ಖುದ್ದಾಗಿ ಸಭೆಗೆ ಹಾಜರಾಗಿದ್ದರೆ, ಅಯೋಧ್ಯೆಗೆ ಹೋಗಲು ಸಾಧ್ಯವಾಗದ ಟ್ರಸ್ಟಿಗಳು ಆನ್​ಲೈನ್ ಮೂಲಕ ಭಾಗಿಯಾದರು.
ಶತಮಾನದ ವಿವಾದ:ರಾಮ ಮಂದಿರ-ಬಾಬರಿ ಮಸೀದಿಯ ಶತಮಾನಗಳ ವಿವಾದಕ್ಕೆ ಸುಪ್ರೀಂಕೋರ್ಟ್ ಕಳೆದ ವರ್ಷ ನವೆಂಬರ್​ನಲ್ಲಿ ತೆರೆ ಎಳೆದಿತ್ತು. ಈ ಮೂಲಕ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ವಣಕ್ಕೆ ಹಾದಿ ಸುಗಮಗೊಳಿಸಿತ್ತು. ವಿವಾದಿತ ಪೂರ್ಣ ಜಾಗ ರಾಮ ಲಲ್ಲಾಗೆ (ಬಾಲ ರಾಮ) ಸೇರಿದ್ದೆಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಮಸೀದಿ ನಿರ್ವಣಕ್ಕೆ ಮುಸ್ಲಿಂರಿಗೆ ಸೂಕ್ತ ಸ್ಥಳದಲ್ಲಿ ಐದು ಎಕರೆ ಜಮೀನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಮಂದಿರ ನಿರ್ವಣಕ್ಕಾಗಿ ಒಂದು ಟ್ರಸ್ಟ್ ರಚಿಸುವಂತೆಯೂ ಸೂಚಿಸಿತ್ತು.
ದೇಣಿಗೆಗೆ ಅಪೇಕ್ಷೆ:ಒಬ್ಬ ವ್ಯಕ್ತಿಯಿಂದ 10 ರೂ. ಹಾಗೂ ಒಂದು ಮನೆಯಿಂದ 100 ರೂ, ದೇಣಿಗೆ ಸಂಗ್ರಹ ಮಾಡುವ ಬಗ್ಗೆ ಸಭೆಯಲ್ಲಿ ಅಪೇಕ್ಷೆ ವ್ಯಕ್ತವಾಗಿದೆ. ಈ ಬಗ್ಗೆ ನ.25ರಿಂದ ಡಿಸೆಂಬರ್ 25ರವರೆಗೆ ದೇಶದಲ್ಲಿ ಬೃಹತ್ ಆಂದೋಲನ ನಡೆಸುವ ಸಂಬಂಧ ರ್ಚಚಿಸಲಾಗಿದೆ. ಕೋವಿಡ್-19ನಿಂದಾಗಿ ಭೂಮಿಪೂಜೆ ವಿಳಂಬವಾಗಿದೆ. ಆದಷ್ಟು ಶೀಘ್ರದಲ್ಲಿ ದಿನ ನಿಗದಿಗೊಳಿಸಿ 15 ದಿನದ ಮುಂಚಿತವಾಗಿ ದೇಶದ ಜನತೆಗೆ ತಿಳಿಸಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
42 ತಿಂಗಳಲ್ಲಿ ಪೂರ್ಣ:ನಿರ್ವಣಕ್ಕೆ ಅಗತ್ಯವಾದ ಅಮೃತಶಿಲೆ ಮತ್ತು ಇಟ್ಟಿಗೆಗಳನ್ನು ಸಂಗ್ರಹಿಸುವ ಬಗ್ಗೆಯೂ ಸಭೆ ನಿರ್ಧರಿಸಿತು. ಮುಂದಿನ ಮೂರುವರೆ ವರ್ಷಗಳಲ್ಲಿ ಮಂದಿರ ನಿರ್ಮಾಣ ಕಾರ್ಯ ಮುಗಿಸುವ ಉದ್ದೇಶವಿದೆ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದರು.
ಆ.3 ಮತ್ತು 5ರಲ್ಲಿ ಒಂದು ದಿನವನ್ನು ಶಿಲಾನ್ಯಾಸಕ್ಕೆ ನಿಗದಿಪಡಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ. ಅವರು ತಮಗೆ ಅನುಕೂಲವೆಂದು ಆಯ್ಕೆ ಮಾಡಿದ ದಿನ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತದೆ.
| ಕಾಮೇಶ್ವರ್ ಚೌಪಾಲ್ಟ್ರಸ್ಟ್​ನ ಪದಾಧಿಕಾರಿ
https://www.vijayavani.net/oxford-university-covid-19-vaccine-trial-hopes-rise-with-strong-trial/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 5 =
Remember me
