ಅಯೋಧ್ಯೆ:ಸಾಕಷ್ಟು ಕಾಲ ಕಾನೂನು ಹೋರಾಟದ ಬಳಿಕ ಬಹುಜನರ ಅಪೇಕ್ಷೆಯ ಮೇರೆಗೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಕಾರ್ಯ ಮಂಗಳವಾರದಿಂದ ಆರಂಭವಾಗಿದೆ.
ತಾತ್ಕಾಲಿಕ ದೇಗುಲದಲ್ಲಿ ಇರುವ ರಾಮಲಲ್ಲಾ ದೇವರ ಮೂರ್ತಿಗೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಅಧ್ಯಕ್ಷ ಮಹಾಮತಾ ನೃತ್ಯ ಗೋಪಾಲ ದಾಸ್​ ಮಂಗಳವಾರ ಬೆಳಗ್ಗೆ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಅವರು ರಾಮಜನ್ಮಭೂಮಿಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯವನ್ನು ಇಂದಿನಿಂದ ಆರಂಭಿಸುತ್ತಿರುವುದಾಗಿ ಘೋಷಿಸಿದರು.
ನಿರ್ಮಾಣ ಕಾರ್ಯ ಆರಂಭವಾಗುವ ಮುನ್ನ ರಾಮ ಜನ್ಮಭೂಮಿ ನ್ಯಾಸ್​ನ ಮುಖ್ಯಸ್ಥರೂ ಆಗಿರುವ ಮಹಾಂತಾ ನೃತ್ಯ ಗೋಪಾಲ್​ ದಾಲ್​ ಭೂಮಿ ಪೂಜೆ ನೆರವೇರಿಸಿದರು.
ಇದನ್ನೂ ಓದಿ:ಭಾರತ-ಚೀನಾ ನಡುವಿನ ಈಗಿನ ಬಿಕ್ಕಟ್ಟು ಡೊಕ್ಲಾಮ್​ ಬಿಕ್ಕಟ್ಟಿಗಿಂತ ದೊಡ್ಡದು
ಅಂದಾಜು 27 ವರ್ಷಗಳ ಹೋರಾಟದ ಬಳಿಕ 2020ರ ಮಾರ್ಚ್​ 25ರಂದು ಅಯೋಧ್ಯೆಯ ತಾತ್ಕಾಲಿಕ ದೇಗುಲದಲ್ಲಿದ್ದ ರಾಮ ಲಲ್ಲಾ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಾನಸ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್​ ಉಪಸ್ಥಿತರಿದ್ದರು.
2019ರ ನವೆಂಬರ್​ 9ರಂದು ದೇಗುಲ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ತೀರ್ಪು ನೀಡುವ ಮೂಲಕ ಸುಪ್ರೀಂಕೋರ್ಟ್​ ಒಂದು ಶತಮಾನಕ್ಕೂ ಹೆಚ್ಚುಕಾಲದಿಂದ ಇದ್ದ ವಿವಾದವನ್ನು ಇತ್ಯರ್ಥ ಪಡಿಸಿತ್ತು.
5 ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್​ನ ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಸುಪ್ರೀಂಕೋರ್ಟ್​ನ ಆಗಿನ ನ್ಯಾಯಮೂರ್ತಿ ರಂಜನ್​ ಗೊಗೊಯ್​, ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ರಾಮ ಜನಿಸಿದ್ದ ಎಂಬ ಹಿಂದು ಧರ್ಮೀಯರ ನಂಬಿಕೆ ವಿವಾದಾತೀತ ಎಂದು ತೀರ್ಪು ನೀಡಿದ್ದರು.
ಒಳ್ಳೆಯ ಮಾತಿನಲ್ಲಿ ಭಾರತ ನಮ್ಮ ಪ್ರದೇಶಗಳನ್ನು ನಮಗೆ ಒಪ್ಪಿಸಬೇಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
