ಪ್ರಯಾಗ್​ರಾಜ್/ಲಖನೌ:ಕುಖ್ಯಾತ ಗ್ಯಾಂಗ್​ಸ್ಟರ್ ಅತೀಕ್ ಅಹ್ಮದ್ ಹಾಗೂ ಆತನ ಸೋದರ ಅಶ್ರಫ್ ಶನಿವಾರ ರಾತ್ರಿ ಪ್ರಯಾಗ್​ರಾಜ್​ನಲ್ಲಿ ದುಷ್ಕರ್ವಿುಗಳ ಗುಂಡಿಗೆ ಬಲಿಯಾಗುವುದರೊಂದಿಗೆ ಸುಮಾರು ನಾಲ್ಕು ದಶಕ ಕಾಲ ಉತ್ತರ ಪ್ರದೇಶವನ್ನು ನಡುಗಿಸಿದ್ದ ಮಾಫಿಯಾ ಸಾಮ್ರಾಜ್ಯ ನಾಲ್ಕೇ ನಿಮಿಷದಲ್ಲಿ ಮಣ್ಣುಮುಕ್ಕಿದೆ. 18ರ ಹರೆಯದಲ್ಲಿ ಮೊದಲ ಕೊಲೆ ಮಾಡಿ ಪಾತಕ ಜಗತ್ತಿಗೆ ಕಾಲಿಟ್ಟ ಅತೀಕ್, ಸುಮಾರು 42 ವರ್ಷ ಕಾಲ ಲೆಕ್ಕವಿಲ್ಲದಷ್ಟು ಕೊಲೆ ಸುಲಿಗೆ ಮಾಡಿ ಸಾಮಾಜಿಕ ಹಾಗೂ ರಾಜಕೀಯ ವಲಯಗಳಲ್ಲಿ ಆತಂಕ ಮೂಡಿಸಿದ್ದ.
ಆತನ ಆಟಾಟೋಪ 60ನೇ ವಯಸ್ಸಿನಲ್ಲಿ ಅಂತ್ಯಗೊಂಡು ಗತ ಇತಿಹಾಸವಾಗಿದೆ. ಶಾಸಕ, ಸಂಸತ್ ಸದಸ್ಯನಾಗಿದ್ದ ಅತೀಕ್ ರಸ್ತೆಯಲ್ಲಿ ಹೆಣವಾಗಿ ಉರುಳಿದ್ದು ಪರಿಸ್ಥಿತಿಯ ಕುಹಕವಾಗಿದೆ. ಉತ್ತರ ಪ್ರದೇಶದ ಫೋಲ್​ಪುರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸಂಸದನಾಗಿದ್ದ ಅತೀಕ್ ವಿರುದ್ಧ ಕೊಲೆ ಸುಲಿಗೆ ಅಪಹರಣ, ಲೂಟಿ ಸಂಬಂಧ ಸುಮಾರು 100 ಕ್ರಿಮಿನಲ್ ಕೇಸ್​ಗಳಿದ್ದವು. 2018ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್ ಮೇಲೆ ಹಲ್ಲೆ ನಡೆಸಿದ ಆರೋಪವೂ ಇತ್ತು. ರಾಷ್ಟ್ರೀಯ ಭದ್ರತಾ ಕಾನೂನಿನಡಿ (ಎನ್​ಎಸ್​ಎ) ಆತನನ್ನು 2019ರಲ್ಲಿ ಗುಜರಾತ್​ನ ಜೈಲಿನಲ್ಲಿ ಬಂಧಿಸಿಡಲಾಗಿತ್ತು. 1990ರ ದಶಕ ಹಾಗೂ 2000ದ ದಶಕದ ಆರಂಭದಲ್ಲಿ ಉತ್ತರ ಪ್ರದೇಶದಲ್ಲಿ ರಾಜಕೀಯ ಅಸ್ಥಿರತೆ ಕಾಡಿದ್ದಾಗ ಅತೀಕ್​ನ ಕುಖ್ಯಾತಿ ಹೆಚ್ಚಿತ್ತು. ಅತೀಕ್​ಗೆ ಪಾಕಿಸ್ತಾನದ ಐಎಸ್​ಐ ಮತ್ತು ಉಗ್ರ ಸಂಘಟನೆ ಎಲ್​ಇಟಿ ನಂಟು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಖ್ಯಾತಿಗಾಗಿ ಗ್ಯಾಂಗ್​ಸ್ಟರ್ ಹತ್ಯೆ:ಗ್ಯಾಂಗಸ್ಟರ್ ಅತೀಕ್ ಅಹ್ಮದ್​ನನ್ನು ಹತ್ಯೆಗೈದರೆ ಜನಪ್ರಿಯರಾಗಬಹುದೆಂದು ಈ ಕೃತ್ಯ ನಡೆಸಿದ್ದಾಗಿ ಬಂಧಿತರಾದ ಲವಲೇಶ್ ತಿವಾರಿ (22), ಮೋಹಿತ್ ಅಲಿಯಾಸ್ ಸನ್ನಿ (23) ಮತ್ತು ಅರುಣ್ ಮೌರ್ಯ (18) ಪೊಲೀಸರ ಮುಂದೆ ತಪ್ಪೊಪ್ಪಿಗೆ ನೀಡಿದ್ದಾರೆ. ಈ ಮೂವರನ್ನು ಕೋರ್ಟ್ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮೂರೂ ಹಂತಕರು ಹಲವು ಕೊಲೆ ಮತ್ತು ಇತರ ಕ್ರಿಮಿನಲ್ ಕೃತ್ಯಗಳಲ್ಲಿ ಭಾಗವಹಿಸಿದ್ದು ಶಿಕ್ಷೆ ಅನುಭವಿಸಿದವರಾಗಿದ್ದಾರೆ. ಈ ಮೂರೂ ಜನರು ಕೊಲೆ ಮಾಡುವ ಯೋಜನೆ ರೂಪಿಸಿಕೊಂಡು ಪ್ರಯಾಗ್​ರಾಜ್​ನ ವಸತಿಗೃಹದಲ್ಲಿ ಉಳಿದುಕೊಂಡಿದ್ದರೆನ್ನುವುದು ತನಿಖೆಯಿಂದ ತಿಳಿದು ಬಂದಿದೆ. ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಕುಟುಂಬದವರು, ಕ್ರಿಮಿನಲ್ ಇತಿಹಾಸವಿರುವ ಇವರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಅತೀಕ್ ಅಹ್ಮದ್ ಮತ್ತು ಅಶ್ರಫ್ ಅಂತ್ಯಕ್ರಿಯೆ ಪ್ರಯಾಗ್​ರಾಜ್​ನಲ್ಲಿ ಭಾನುವಾರ ಸಂಜೆ ಕಸಾರಿ ಮಸಾರಿ ಖಬರಿಸ್ತಾನದಲ್ಲಿ ನಡೆದಿದೆ. ಅತೀಕ್ ದೇಹದಲ್ಲಿ 8, ಅಶ್ರಫ್ ಶವದಲ್ಲಿ 6 ಗುಂಡುಗಳು ಪತ್ತೆಯಾಗಿವೆ. ಅತಿಕ್​ನ ಮಗ ಅಸಾದ್​ನ ಅಂತ್ಯ್ರು ಶನಿವಾರ ನಡೆದಿತ್ತು. ಆತ ಗುರುವಾರ ಝಾನ್ಸಿಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಹತನಾದ. ಮಗನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅತೀಕ್ ಬಯಸಿದ್ದ. ಆದರೆ, ಶುಕ್ರವಾರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕೋರ್ಟ್​ಗೆ ರಜೆ ಇದ್ದ ಕಾರಣ ಆತನ ಅರ್ಜಿ ಶನಿವಾರ ವಿಚಾರಣೆಗೆ ಬಂತು. ಅಷ್ಟರಲ್ಲಿ ಅಸಾದ್ ಅಂತ್ಯ್ರು ಪ್ರಕ್ರಿಯೆ ಆರಂಭವಾಗಿತ್ತು. ಅತೀಕ್ ಸೋದರರ ಹತ್ಯೆಯಿಂದ ಪ್ರಯಾಗ್​ರಾಜ್​ನಲ್ಲಿ ಉದ್ವಿಗ್ನಸ್ಥಿತಿ ಇದ್ದ ಕಾರಣ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇಂಟರ್​ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
2005ರಲ್ಲಿ ಬಿಎಸ್​ಪಿ ಶಾಸಕರಾಗಿದ್ದ ರಾಜುಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ವಕೀಲ ಉಮೇಶ್ ಪಾಲ್ ಅಪಹರಣ ಮತ್ತು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾದ ಅತೀಕ್ ಮತ್ತು ಅಶ್ರಫ್​ಗೆ ಅಪಹರಣ ಪ್ರಕರಣದ ಸಂಬಂಧ ಶಿಕ್ಷೆ ಆಗಿತ್ತು. ಅವರನ್ನು ಇನ್ನೊಂದು ಪ್ರಕರಣದ ಸಂಬಂಧ ಉತ್ತರ ಪ್ರದೇಶದ ಪೊಲೀಸರು ವಶಕ್ಕೆ ಪಡೆದಿದ್ದರು. ವೈದ್ಯಕೀಯ ತಪಾಸಣೆಗಾಗಿ ಪ್ರಯಾಗ್​ರಾಜ್​ನ ಎಂಎಲ್​ಎನ್ ವೈದ್ಯಕೀಯ ಕಾಲೇಜಿಗೆ ಕರೆತರá-ತ್ತಿದ್ದಾಗ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಗುಂಡಿನ ದಾಳಿ ನಡೆಯಿತು. ಅತೀಕ್ ಮತ್ತು ಅಶ್ರಫ್​ರನ್ನು ಪೊಲೀಸ್ ವಶಕ್ಕೆ ಪಡೆಯಲಾಗುತ್ತದೆ ಎಂಬ ಮಾಹಿತಿ ದೊರೆತ ತಕ್ಷಣವೇ ಇಬ್ಬರನ್ನೂ ಮುಗಿಸಲು ಹಂತಕರು ಸಂಚು ರೂಪಿಸಿದ್ದರು. ಸ್ಥಳೀಯ ಪತ್ರಕರ್ತರಂತೆ ಸೋಗು ಹಾಕಿ ಮಾಧ್ಯಮದವರು ಇದ್ದ ಗುಂಪಿನಲ್ಲಿ ಸೇರಿಕೊಂಡು ತಮ್ಮ ಕೃತ್ಯವನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ್ದರು. ಅವರು ಪತ್ರಕರ್ತರ ನಕಲಿ ಐಡಿ, ಕ್ಯಾಮರಾ ಮತ್ತು ಮೈಕ್ ಹೊಂದಿದ್ದ ಈ ಮೂವರು ಸಮೀಪದಿಂದಲೇ ಟರ್ಕಿ ನಿರ್ವಿುತ ಗನ್​ನಿಂದ ಗುಂಡು ಹಾರಿಸಿದರು. ಮಾಧ್ಯಮದವರ ಮುಂದೆಯೇ ನಡೆದ ಕೊಲೆಯ ದೃಶ್ಯಗಳು ಕ್ಯಾಮರಾಗಳಲ್ಲಿ ಸೆರೆಯಾಗಿವೆ.
ಅತೀಕ್-ಅಶ್ರಫ್ ಕೊಲೆ ಹಿನ್ನೆಲೆಯಲ್ಲಿ ಪ್ರಯಾಗ್​ರಾಜ್, ಅಯೋಧ್ಯೆ, ವಾರಾಣಸಿ, ಮಥುರಾ ಸಹಿತ ಹಲವು ನಗರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ ಅವರ ಮನೆ ಬಳಿ ಭದ್ರತೆ ಯನ್ನು ಬಿಗಿಗೊಳಿಸಲಾಗಿದೆ. ಶನಿವಾರದ ಘಟನಾವಳಿ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.
ಭಿನ್ನ ವರದಿ:ಕರ್ತವ್ಯಲೋಪ ಆರೋಪದ ಮೇಲೆ 17 ಪೊಲೀಸರನ್ನು ಆಮಾನತು ಮಾಡಲಾಗಿದೆ ಎಂದು ಹೇಳಲಾಗಿದೆಯಾದರೂ ಇನ್ನೂ ಕೆಲವು ವರದಿಗಳ ಪ್ರಕಾರ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿದು ಬಂದಿದೆ.
ಮೂವರು ದುಷ್ಕರ್ವಿುಗಳು ಪತ್ರಕರ್ತರ ಸೋಗಿನಲ್ಲಿ ಅತೀಕ್ ಮತ್ತು ಅಶ್ರಫ್​ರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಸುರಕ್ಷತೆ ಮತ್ತು ಭದ್ರತೆಗಾಗಿ ಮಾರ್ಗಸೂಚಿ (ಎಸ್​ಒಪಿ) ರೂಪಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದಾಗ ಗುಂಡಿನ ದಾಳಿ ನಡೆದಿರುವುದು ಚಿಂತೆಗೆ ಕಾರಣವಾಗಿದೆ. ಹೀಗಾಗಿ, ಮಾಧ್ಯಮದವರ ಸುರಕ್ಷತೆ ದೃಷ್ಟಿಯಲ್ಲಿ ಎಸ್​ಒಪಿ ರೂಪಿಸಲು ಸರ್ಕಾರ ಮುಂದಾಗಿದೆ. ಜತೆಗೆ ಈ ರೀತಿಯ ನಕಲಿ ಪತ್ರಕರ್ತರನ್ನು ತಡೆಯಬೇಕಿದೆ ಎಂದು ಸರ್ಕಾರ ಹೇಳಿದೆ.
ತ್ರಿಸದಸ್ಯ ನ್ಯಾಯಾಂಗ ಆಯೋಗ ರಚನೆ:ಅತೀಕ್, ಅಶ್ರಫ್ ಕೊಲೆ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ 3 ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರವಿಂದ್ ಕುಮಾರ್ ತ್ರಿಪಾಠಿ ನೇತೃತ್ವದ ಆಯೋಗದಲ್ಲಿ ನಿವೃತ್ತ ಜಡ್ಜ್ ಬೃಜೇಶ್ ಕುಮಾರ್ ಸೋನಿ, ಮಾಜಿ ಡಿಜಿಪಿ ಸುಭೇಶ್ ಕುಮಾರ್ ಸಿಂಗ್ ಇದ್ದಾರೆ.
ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!

ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − four =
Remember me
