ಬಿಹಾರ:ಅಂಗಡಿ ಮುಂದೆ ತಮ್ಮ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದವರನ್ನು ಪ್ರಶ್ನಿಸಿದ ಮಾಲೀಕ, ವಾಹನವನ್ನು ಬೇರೆಡೆ ಪಾರ್ಕಿಂಗ್ ಮಾಡಲು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಮೂವರು ಹಾಗೂ ಮಳಿಗೆ ಮಾಲೀಕನ ನಡುವೆ ಜಗಳದಲ್ಲಿ ನಾಲ್ವರು ಹತ್ಯೆಯಾದ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಭೀಕರ ಘಟನೆ ಬಿಹಾರ ಔರಂಗಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಜರ್ಮನಿಯ ಫ್ರಾಂಕ್ಫರ್ಟ್​ನಲ್ಲಿ ನಾವಿಕೋತ್ಸವ-2024 ವಿಶ್ವ ಕನ್ನಡ ಸಮ್ಮೇಳನ
ಘಟನೆಯ ವಿವರ: ಪಾರ್ಕಿಂಗ್ ವಿಚಾರವಾಗಿ ಕಾರಿನಲ್ಲಿದ್ದ ಮೂವರು ಹಾಗೂ ಮಳಿಗೆ ಮಾಲೀಕನ ವಿರುದ್ಧ ತೀವ್ರ ಮಾತಿನ ಜಟಾಪಟಿ ಭುಗಿಲೆದ್ದಿದೆ. ಮಾತಿನ ತೀವ್ರತೆ ಹಿಂಸಾರಕ್ಕೆ ತಿರುಗಿದ್ದೇ ತಡ, ಕಾರಿನಲ್ಲಿ ಕುಳಿತ್ತಿದ್ದ ವ್ಯಕ್ತಿ ಏಕಾಏಕಿ ಗನ್ ತೆಗೆದು ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿದ್ದಾರೆ. ಆದ್ರೆ, ಗುರಿ ಓನರ್​ಗೆ ತಪ್ಪಿದ್ದು, ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ತಗುಲಿ ಆತ ಸಾವನ್ನಪ್ಪಿದ್ದಾನೆ. ಈ ಘಟನೆಯನ್ನು ಗಮನಿಸುತ್ತಿದ್ದ ಸ್ಥಳೀಯರು ಕುಪಿತಗೊಂಡು ಕಾರಿನಲ್ಲಿದ್ದ ಮೂವರನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದಿದ್ದಾರೆ.
ಬಿಹಾರ ಜಿಲ್ಲೆಯ ಟೆಟಾರಿಯಾ ಮೋರ್‌ನಲ್ಲಿ ಸ್ಥಳೀಯ ಗ್ರಾಮಸ್ಥನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಿ ಕಾರಿನಲ್ಲಿದ್ದ ಮೂವರನ್ನು ಗುಂಪೊಂದು ಹತ್ಯೆ ಮಾಡಿದೆ. ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).
ತಾಯಿ-ಮಕ್ಕಳು ಸಂಬಂಧಿಸಿದಂತೆ ಅಸಭ್ಯ ವಿಡಿಯೋ! ತೆಗೆದುಹಾಕಲು ಸಮಯ ಕೋರಿದ ಯೂಟ್ಯೂಬ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 17 =
Remember me
