ತಿರುಪತಿ:ಆಂಧ್ರಪ್ರದೇಶದ ತಿರುಪತಿಯ ಈ ಸುಂದರಿಗೆ ಮದುವೆಯೇ ಬಂಡವಾಳ. ಮದುವೆಯಾಗುವುದು, ಅವರು ಸರಿಯಿಲ್ಲ ಎಂದು ವಿಚ್ಛೇದನ ಪಡೆಯುವುದು ಇಲ್ಲವೇ ಅವರನ್ನು ದೂರ ಮಾಡುವುದು… ಈ ಮೂಲಕ ಲಕ್ಷ ಲಕ್ಷ ರೂಪಾಯಿ ಹಣ ಕೀಳುವುದೇ ಈಕೆಯ ಕಾಯಕ.
ಈಗಾಗಲೇ ನಾಲ್ಕು ಮದುವೆಯಾಗಿ ನಾಲ್ವರಿಗೂ ನಾಮ ಹಾಕಿರುವ ಈ ತಿರುಪತಿ ಸುಂದರಿಯ ಹೆಸರು ಸ್ವಪ್ನಾ. ಇದೀಗ ಐದನೆಯವನಿಗೆ ಗಾಳ ಹಾಕುತ್ತಿದ್ದಾಗ ಆಂಧ್ರ ಪ್ರದೇಶದ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಮೊದಲು ಈಕೆ ಬಲೆ ಬೀಸಿದ್ದು ತನ್ನ ಸ್ವಂತ ಶ್ರೀಮಂತ ಚಿಕ್ಕಪ್ಪನನ್ನೇ. ಆತನನ್ನು ಮದುವೆಯಾಗಿದ್ದ ಸ್ವಪ್ನಾ ಅವನಿಂದ ಸಾಕಷ್ಟು ಹಣ ಕಿತ್ತುಕೊಂಡ ಮೇಲೆ ತನಗೆ ಆತ ಯಾವುದೇ ಸುಖ ಕೊಡುತ್ತಿಲ್ಲ, ದೈಹಿಕವಾಗಿ ಆತ ಸರಿಯಾಗಿಲ್ಲ ಎಂದು ದೂರಿ ಆತನಿಂದ ವಿಚ್ಛೇದನ ಪಡೆದುಕೊಂಡಳು.
ನಂತರ ಸ್ವಪ್ನಾ ಪೃಥ್ವಿರಾಜ್‌ ಎಂಬುವವನಿಗೆ ಗಾಳ ಹಾಕಿದಳು. ಒಂದಷ್ಟು ದಿನ ಅವನ ಜತೆ ಸಂಸಾರ ಮಾಡಿ ನಂತರ ಆತ ಸರಿಯಿಲ್ಲ, ಅವನ ಕ್ಯಾರೆಕ್ಟರ್‌ ಸರಿಯಿಲ್ಲ ಎಂದು ದೂರಿ ಕೋರ್ಟ್ ಮೊರೆ ಹೋಗಿದ್ದಾಳೆ. ಅವನಿಂದ 25 ಲಕ್ಷ ರೂಪಾಯಿ ಪರಿಹಾರ ಪಡೆದು ಮೂರನೆಯ ಗಂಡನಿಗಾಗಿ ಬಲೆ ಬೀಸಿದ್ದಾಳೆ.
ಇದನ್ನೂ ಓದಿ:ಸಂಜಯ್‌ ದತ್‌ ವಿರುದ್ಧ ಹೈಕೋರ್ಟ್‌ಗೆ ಹೋದ ರಾಜೀವ್‌ಗಾಂಧಿ ಹಂತಕ!
ಮ್ಯಾಟ್ರಿಮೋನಿ ಸೈಟ್ ಮೂಲಕ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ಎಂಬುವವರ ಪರಿಚಯ ಮಾಡಿಕೊಂಡ ಈಕೆ ಮದುವೆಯಾಗಿದ್ದಾಳೆ. ಈಕೆಗೆ ಹಿನ್ನೆಲೆ ಮುನ್ನಲೆ ಏನೂ ಕೇಳದ ಅತ ಸೌಂದರ್ಯ ನೋಡಿ ಮರಳಾಗಿದ್ದಾನೆ. ನಂತರ ಈತ ಕಿರುಕುಳ ನೀಡುತ್ತಿದ್ದಾನೆ, ದೌರ್ಜನ್ಯ ನೀಡುತ್ತಿದ್ದಾನೆ ಎಂದು ದೂರಿ ಆತನಿಂದ ಐದು ಲಕ್ಷ ರೂಪಾಯಿ ಪರಿಹಾರ ಪಡೆದುಕೊಂಡಿದ್ದಾಳೆ.
ಆಗ ಈ ಪತಿಯ ವಿರುದ್ಧ ಸ್ವಪ್ನಾ ಪೊಲೀಸರಿಗೆ ದೂರು ಕೊಡುತ್ತಾಳೆ. ಆಕೆಯ ಹಿಸ್ಟರಿ ತೆಗೆದಾಗ ಪೊಲೀಸರಿಗೆ ಅವಳ ನಿಜ ಸ್ವರೂಪ ಗೊತ್ತಾಗುತ್ತದೆ. ತನಿಖೆ ನಡೆಸಿದಾಗ ಸ್ವಪ್ನಾ ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಪ್ರೊಫೈಲ್‌ಗಳನ್ನು ಮಾಡಿಕೊಂಡು ಮದುವೆಯ ಗಾಳ ಬೀಸುತ್ತಿರುವುದು ತಿಳಿದುಬಂದು ಆಕೆಯನ್ನು ಈಗ ಅರೆಸ್ಟ್‌ ಮಾಡಲಾಗಿದೆ. ಐದನೆಯ ಗಂಡನಿಗಾಗಿ ಹುಡುಕಾಟ ನಡೆಸುತ್ತಿದ್ದ ಸ್ವಪ್ನಾ ಸದ್ಯ ಜೈಲಿನಲ್ಲಿ ಇದ್ದಾಳೆ.
ಬಿಡುಗಡೆಯಾದ ನಂತರ ಮತ್ತೆ ಗಾಳ ಬೀಸಿಯಾಳು, ಹುಷಾರ್‌!
ಬೆಕ್ಕಿನ ಮೇಲೆ ವಾರಗಟ್ಟಲೆ ಗ್ಯಾಂಗ್‌ ರೇಪ್‌: ಒದ್ದಾಡಿ ಪ್ರಾಣಬಿಟ್ಟ ಜೀವ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen − 11 =
Remember me
