ಮಾಸ್ಕೊ:ಭಾರತದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳು ರಷ್ಯಾದ ಸೇಂಟ್​ ಪೀಟರ್ಸ್​ಬರ್ಗ್​ ಸಮೀಪದ ನದಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ. ಸೈಂಟ್‌ ಪೀಟರ್ಸ್‌ಬರ್ಗ್‌ ಬಳಿ ನದಿಯಲ್ಲಿ ಈ ಅವಘಡ ಸಂಭವಿಸಿದೆ ಎಂದು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಶುಕ್ರವಾರ ದೃಢಪಡಿಸಿದೆ.
ಇದನ್ನೂ ಓದಿ:ಕಂಗನಾಗೆ ಕಪಾಳಮೋಕ್ಷ ಮಾಡಿದ್ದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್‌ ಕೌರ್‌ ಅಮಾನತು, ಬಳಿಕ ಅರೆಸ್ಟ್‌!
ಶವಗಳನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ರಷ್ಯಾದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿದೆ. ಮೃತಪಟ್ಟವರು 18-20 ವಯೋಮಾನದವರಾಗಿದ್ದು ಇಬ್ಬರು ಯುವಕರು ಮತ್ತು ಇನ್ನಿಬ್ಬರು ಯುವತಿಯರು. ಇವೆರೆಲ್ಲ ವಿಲಿಕಿ ನವ್​ಗೊರೊಡ್​​ನಲ್ಲಿರುವ ನವ್​ಗೊರೊಡ್​ ಸ್ಟೇಟ್​ ಯೂನಿವರ್ಸಿಟಿಯಲ್ಲಿ ಓದುತ್ತಿದ್ದರು.
ವೋಲ್ಖೋವ್ ನದಿಗೆ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸಲು ಆಕೆಯ ನಾಲ್ವರು ಸ್ನೇಹಿತರು ಯತ್ನಿಸಿದ ವೇಳೆ ಈ ದುರಂತ ನಡೆದಿದೆ. ಈ ಪೈಕಿ ಓರ್ವನನ್ನು ಸ್ಥಳೀಯರು ರಕ್ಷಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಮಾಧ್ಯಮಗಳು ಹೇಳಿವೆ.
ಸಾಧ್ಯವಾದಷ್ಟು ಬೇಗ ಶವಗಳನ್ನು ಸಂಬಂಧಿಕರಿಗೆ ಕಳುಹಿಸಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ಅಪಾಯದಿಂದ ಪಾರಾದ ವಿದ್ಯಾರ್ಥಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಸ್ಕೋದಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ನಾಲ್ವರು ವಿದ್ಯಾರ್ಥಿಗಳನ್ನು ಮಹಾರಾಷ್ಟ್ರದ ಹರ್ಷಲ್ ಅನಂತರಾವ್ ದೇಸಾಲೆ, ಜಿಶಾನ್ ಅಶ್ಪಕ್ ಪಿಂಜಾರಿ, ಜಿಯಾ ಫಿರೋಜ್ ಪಿಂಜಾರಿ ಮತ್ತು ಮಲಿಕ್ ಗುಲಾಮಗೌಸ್ ಮೊಹಮ್ಮದ್ ಯಾಕೂಬ್ ಎಂದು ಗುರುತಿಸಲಾಗಿದೆ. ರಕ್ಷಿಸಲ್ಪಟ್ಟ ವಿದ್ಯಾರ್ಥಿನಿಯ ಹೆಸರು ನಿಶಾ ಭೂಪೇಶ್ ಸೋನಾವಾನೆ ಎಂದು ತಿಳಿದು ಬಂದಿದೆ.
ರಕ್ಷಿಸಲ್ಪಟ್ಟ ವಿದ್ಯಾರ್ಥಿನಿಯರಿಗೆ ಮಾನಸಿಕ ಚಿಕಿತ್ಸೆ ಸೇರಿದಂತೆ ಸೂಕ್ತ ವೈದ್ಯಕೀಯ ಸೇವೆಯನ್ನು ಒದಗಿಸಲಾಗುತ್ತಿದೆ ನೀಡಲಾಗುತ್ತಿದೆ. ಮೃತ ವಿದ್ಯಾರ್ಥಿಗಳ ಕುಟುಂಬದವರಿಗೆ ಸಂತಾಪ ಸೂಚಿಸಿದ್ದು, ವಿದ್ಯಾರ್ಥಿಗಳು ನವ್​ಗೊರೊಡ್​ ಸ್ಟೇಟ್​ ಯೂನಿವರ್ಸಿಟಿಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. ಮೃತರ ಕುಟುಂಬದವರನ್ನು ಸಂಪರ್ಕಿಸಲಾಗಿದೆ. ಸಾಧ್ಯವಿರುವ ನೆರುವು ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ಹೇಳಿದೆ.
ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಭೇಟಿಯಾದ ಪ್ರಧಾನಿ ಮೋದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + twenty =
Remember me
