2019ರಲ್ಲಿ ಎರಡನೇ ಬಾರಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ರಾಜ್ಯದಿಂದ 25 ಬಿಜೆಪಿ ಸಂಸದರು ಆಯ್ಕೆಯಾಗಿದ್ದರು. ಆದರೆ ಸಂಪುಟಕ್ಕೆ ಹುಬ್ಬಳ್ಳಿ&ಧಾರವಾಡ ಸಂಸದ ಪ್ರಲ್ಹಾದ ಜೋಶಿ, ಬೆಳಗಾವಿ ಸಂಸದರಾಗಿದ್ದ ಸುರೇಶ ಅಂಗಡಿ ಮತ್ತು ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದ ಗೌಡ ಮೂವರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗಿತ್ತು. ಈಗ 2 ವರ್ಷದ ಬಳಿಕ ಸಂಪುಟ ಪುನಾರಚನೆಯಲ್ಲಿ ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೂ ಪ್ರಾಶಸ ನೀಡುವ ಮೂಲಕ ಸಮಗ್ರ ಕರ್ನಾಟಕಕ್ಕೆ ಕೇಂದ್ರ ಕ್ಯಾಬಿನೆಟ್​ನಲ್ಲಿ ಮನ್ನಣೆ ಸಿಕ್ಕಂತಾಗಿದೆ.
ರಾವ ಶರ್ಮ ನಿಡ್ಲೆ ನವದೆಹಲಿರಾಜ್ಯಸಭೆ ಸಂಸದ ರಾಜೀವ ಚಂದ್ರಶೇಖರ್​, ಉಡುಪಿ& ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ಮತ್ತು ಬೀದರ್​ ಸಂಸದ ಭಗವಂತ ಖೂಬಾ ಮೊದಲ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಆ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಮಗ್ರ ಕರ್ನಾಟಕಕ್ಕೆ ಪ್ರಾಧಾನ್ಯತೆ ಸಿಕ್ಕಂತಾಗಿರುವುದು ಗಮನಾರ್ಹ ಬೆಳವಣಿಗೆ. ಪ್ರಲ್ಹಾದ ಜೋಶಿ ಮುಂಬೈ ಕರ್ನಾಟಕ, ನಾರಾಯಣ ಸ್ವಾಮಿ ಮಧ್ಯ ಕರ್ನಾಟಕ, ಶೋಭಾ ಕರಂದ್ಲಾಜೆ ಕರಾವಳಿ ಕರ್ನಾಟಕ, ಭಗವಂತ ಖೂಬಾ ಕಲ್ಯಾಣ ಕರ್ನಾಟಕ, ರಾಜೀವ್​ ಚಂದ್ರಶೇಖರ್​ ಬೆಂಗಳೂರನ್ನು ಪ್ರತಿನಿಧಿಸುವ ಮೂಲಕ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ಈ ಸಚಿವರು (ಇಚ್ಛಾಶಕ್ತಿ ಪ್ರದರ್ಶಿಸಿದರೆ) ಕೊಡುಗೆ ನೀಡುವ ಅವಕಾಶ ಸೃಷ್ಟಿಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆ ಆಗಿರುವುದರಿಂದ ಅವರನ್ನೂ ಕರ್ನಾಟಕ ಕೋಟಾದಲ್ಲಿ ಸೇರಿಸಿಕೊಳ್ಳುವುದಾದರೆ, ರಾಜ್ಯದ ಒಟ್ಟು 6 ಮಂದಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಂತಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ದೊಡ್ಡಮಟ್ಟಿಗೆ ಪ್ರಾತಿನಿಧ್ಯತೆ ಸಿಕ್ಕಿದೆ. ಉದ್ಯಮಿ ರಾಜೀವ್​ ಚಂದ್ರಶೇಖರ್​ ಬೆಂಗಳೂರು ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿರುವುದರಿಂದ ಅವರನ್ನು ಕನ್ನಡಿಗರು ಎಂದೇ ಪರಿಗಣಿಸಲಾಗಿದೆ. ಈ ನಾಲ್ಕೂ ಆಯ್ಕೆಗಳ ಹಿಂದೆ ಬಿಜೆಪಿ ಸಂಟನಾ ಕಾರ್ಯದರ್ಶಿ ಬಿ.ಎಲ್​.ಸಂತೋಷ್​ ಪ್ರಭಾವ ಕೆಲಸ ಮಾಡಿರುವುದು ಸುಸ್ಪಷ್ಟ. ರಾಜೀವ್​ ಚಂದ್ರಶೇಖರ್​ ಬಿಜೆಪಿ ರಾಷ್ಟ್ರೀಯ ವಕ್ತಾರ ಹಾಗೂ ಈಗ ಮಂತ್ರಿ ಆಗುತ್ತಿರುವುದು ಸಂತೋಷ್​ ಕೃಪೆಯಿಂದಲೇ ಎಂದು ಹೇಳಲಾಗುತ್ತಿದೆ. ನಾರಾಯಣಸ್ವಾಮಿ, ಭಗವಂತ ಖೂಬಾ ಮತ್ತು ಶೋಭಾ ಕರಂದ್ಲಾಜೆಗೂ ಈ ಮಾತು ಅನ್ವಯ.
ಶೋಭಾ ಆಯ್ಕೆ ಏಕೆ?ಶೋಭಾ ಕರಂದ್ಲಾಜೆ ಆಕ್ರಮಣಕಾರಿ ಮನೋಭಾವ ಹೊಂದಿದ ಬಿಜೆಪಿಯ ಮುಂಚೂಣಿ ನಾಯಕಿ. ಪಕ್ಷ ಸಿದ್ಧಾಂತ ಹಾಗೂ ಹಿಂದುತ್ವದ ಬಲವಾದ ಪ್ರತಿಪಾದಕಿಯಾಗಿ, ಜತೆಗೆ ಸಂದ ಹಿನ್ನೆಲೆಯೂ ಇದೆ. ಹಿಂದೆ ಯಡಿಯೂರಪ್ಪ ಕೆಜೆಪಿ ಸ್ಥಾಪನೆ ಮಾಡಿದ್ದಾಗ ಬಿಜೆಪಿ ತೊರೆದು ನಂತರ ಯಡಿಯೂರಪ್ಪ ಅವರೊಂದಿಗೆ ಪಕ್ಷಕ್ಕೆ ವಾಪಸಾಗಿದ್ದರು. 2014ರಲ್ಲಿ ಸಂಸದರಾಗಿದ್ದಾಗಲೇ ಶೋಭಾರಿಗೆ ಮಂತ್ರಿಯಾಗುವ ಅರ್ಹತೆ ಇತ್ತು. ಆದರೆ, ಮಂತ್ರಿ ಸ್ಥಾನದಿಂದ ದೂರವಿಡಲು ವರಿಷ್ಠರಿಗೆ ಅವರದ್ದೇ ಆದ ಕಾರಣಗಳಿದ್ದವು. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಿಂದ ದೂರವಿದ್ದು, ಕ್ಷೇತ್ರದ ಚಟುವಟಿಕೆಯಲ್ಲೇ ಹೆಚ್ಚು ಸಕ್ರಿಯರಾಗಿರುವ ಶೋಭಾರನ್ನು ಗಮನಿಸಿರುವ ಬಿಜೆಪಿ ಹೈಕಮಾಂಡ್​, ಮಂತ್ರಿ ಸ್ಥಾನದ ಗೌರವ ನೀಡಿದೆ. ಮೇಲಾಗಿ, ಮಹಿಳಾ ನಾಯಕಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡುವುದು ಸಂಟನಾತ್ಮಕವಾಗಿ ಪಕ್ಷಕ್ಕೆ ನೆರವಾಗಲಿದೆ ಮತ್ತು ಮಹಿಳೆಯರಿಗೂ ಇದು ಒಳ್ಳೆಯ ಸಂದೇಶ ರವಾನೆ ಮಾಡಲಿದೆ ಎಂದೇ ಬಿಜೆಪಿ ಸಂಟನಾ ಕಾರ್ಯದರ್ಶಿ, ಶೋಭಾ ಹೆಸರನ್ನು ವರಿಷ್ಠರಿಗೆ ಶಿಫಾರಸು ಮಾಡಿದ್ದರು ಎಂದು ಹೇಳಲಾಗಿದೆ.
ರಾಜೀವ್​ಗೆ ರಾಜಾತಿಥ್ಯಪುದುಚೇರಿ ಚುನಾವಣಾ ಉಸ್ತುವಾರಿಯಾಗಿದ್ದ ರಾಜೀವ್​ ಚಂದ್ರಶೇಖರ್​, 2018ರಿಂದ ಬಿಜೆಪಿ ಪ್ರಾಥಮಿಕ ಸದಸ್ಯರಾಗಿದ್ದಾರೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗುವ ಮುನ್ನ ಕಾಂಗ್ರೆಸ್​&ಜೆಡಿಎಸ್​ ನೆರವಿನಿಂದ ಅವರು ರಾಜ್ಯಸಭೆ ಪ್ರವೇಶಿಸಿದ್ದರು. ಚಿಂತನಶೀಲ ಹಾಗೂ ಬಿಜೆಪಿಯನ್ನು ಸಮರ್ಥಿಸುವಲ್ಲಿ ಮುಂಚೂಣಿಯಲ್ಲಿರುವ ರಾಜೀವ್​, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದರು. ಕೇರಳ ಎನ್​ಡಿಎ ಮೈತ್ರಿಕೂಟದ ಉಪಾಧ್ಯಕ್ಷರಾಗಿದ್ದ ಅವರು, ಪುದುಚೇರಿಯಲ್ಲಿ ಎನ್​ಡಿಎ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಅನುಭವಿ ಉದ್ಯಮಿ, ಬುದ್ಧಿವಂತ ಹಾಗೂ ಚಲನಶೀಲ ವ್ಯಕ್ತಿತ್ವದ ರಾಜೀವ್​ ಪಕ್ಷಕ್ಕೂ ಹಲವು ರೀತಿಯಲ್ಲಿ ನೆರವಾಗಿರುವುದರಿಂದ ಸಹಜವಾಗಿಯೇ ಅವರಿಗೆ ಮಂತ್ರಿಸ್ಥಾನ ಒಲಿದುಬಂದಿದೆ. ದಕ್ಷಿಣ ಭಾರತದವರಾಗಿದ್ದರೂ, ಹಿಂದಿ, ಇಂಗ್ಲಿಷ್​ ಭಾಷೆಯನ್ನು ಅರಳು ಹುರಿದಂತೆ ಮಾತನಾಡುವುದು ಅವರ ಪ್ಲಸ್​ ಪಾಯಿಂಟ್​.
ಬೀದರ್​ಗೆ ಲಕ್​2014ರಲ್ಲಿ ಬೀದರ್​ನಿಂದ ಬಿಜೆಪಿ ಟಿಕೆಟ್​ ನೀಡಿ ಎಂದು ಭಗವಂತ ಖೂಬಾ ದೆಹಲಿಯ ಸೌತ್​ ಅವೆನ್ಯೂನಲ್ಲಿದ್ದ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಮನೆಯಲ್ಲಿ ಅರ್ಧ ಗಂಟೆ ಕಾದು ಮನವಿ ಕೊಟ್ಟು ಹೋಗಿದ್ದರು. ಜೋಶಿ ಮನೆಯಲ್ಲಿದ್ದ ಅನೇಕರಿಗೆ ಖೂಬಾ ಅಂದರೆ ಯಾರೆಂದೇ ಗೊತ್ತಿರಲಿಲ್ಲ. ಬಿಜೆಪಿ ನಾಯಕರು ಕೂಡ ಅವರಿಗೆ ಟಿಕೆಟ್​ ನೀಡುವ ಬಗ್ಗೆ ಮನಸ್ಸು ಮಾಡಿರಲಿಲ್ಲ. ಆದರೆ ಯೋಗಗುರು ಬಾಬಾ ರಾಮ್​ದೇವ್​ ಆಶೀರ್ವಾದ ಮತ್ತು ಪ್ರಭಾವದ ಹಿನ್ನೆಲೆಯಲ್ಲಿ ವರಿಷ್ಠರು ಖೂಬಾಗೆ ಬೀದರ್​ ಟಿಕೆಟ್​ ನೀಡಲು ನಿರ್ಧರಿಸಿದ್ದರು ಮತ್ತು ಚುನಾವಣೆಯಲ್ಲಿ ಗೆದ್ದರು ಕೂಡ. ಎರಡನೇ ಬಾರಿ ಸಂಸದರಾಗಿ ಆಯ್ಕೆಯಾದ ಖೂಬಾಗೆ 7 ವರ್ಷದ ಬಳಿಕ ಮಂತ್ರಿ ಸ್ಥಾನದ ಅದೃಷ್ಟ ಖುಲಾಯಿಸಿದೆ. ರ್ನಿಲಕ್ಷಿತ ಹೈದರವಾದ್​ ಕರ್ನಾಟಕದಲ್ಲಿ ಪಕ್ಷ ಸಂಟನೆ ದೃಷ್ಟಿಯಿಂದಲೂ ಇದು ಅನುಕೂಲ ಎಂದು ಭಾವಿಸಲಾಗಿದೆ. ಸಚಿವ ಸ್ಥಾನಕ್ಕಾಗಿಯೂ ಲಾಬಿ ಮಾಡಿದ್ದ ಖೂಬಾ, 2 ವಾರಗಳ ಕಾಲ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು ಎಂದೂ ಬಿಜೆಪಿ ಮೂಲಗಳು ತಿಳಿಸಿವೆ. ಕೊನೆಗೂ, ಅವರ ಆಶಯ ಈಡೇರಿದೆ. ಲಿಂಗಾಯತ ಕೋಟಾದಲ್ಲಿ ಖೂಬಾ ಮಂತ್ರಿಯಾಗಿರುವುದರಿಂದ ಹಾವೇರಿ ಸಂಸದ ಶಿವಕುಮಾರ್​ ಉದಾಸಿ, ಶಿವಮೊಗ್ಗ ಸಂಸದ ಬಿ.ವೈ.ರಾವೇಂದ್ರ ಮತ್ತು ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್​ ಮಂತ್ರಿ ಸ್ಥಾನದ ನಿರೀಕ್ಷೆಗಳು ಹುಸಿಯಾಗಿವೆ.
ಕರಾವಳಿಗೆ ಪ್ರಥಮ, ರಾಜ್ಯಕ್ಕೆ 6ನೇ ಮಹಿಳೆಮೋದಿ ಸರ್ಕಾರದಲ್ಲಿ ಸಚಿವೆ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸ್ಥಾನಕ್ಕೇರಿದ ಕರಾವಳಿಯ ಪ್ರಥಮ ಸಂಸದೆ. ಅವಿಭಜಿತ ದಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದರ ಪೈಕಿ ಶೋಭಾ ಮೂರನೆಯವರು. ಈ ಹಿಂದೆ ವಿ.ಧನಂಜಯಕುಮಾರ್​ ಮತ್ತು ಸದಾನಂದ ಗೌಡ ಕೇಂದ್ರ ಸಚಿವರಾಗಿದ್ದರು. ರಾಜ್ಯದ 6ನೇ ಸಂಸದೆ ಶೋಭಾ. ಹಿಂದೆ ಸರೋಜಿನಿ ಮಹಿಷಿ (ಧಾರವಾಡ ಉತ್ತರ), ಬಸವರಾಜೇಶ್ವರಿ (ಬಳ್ಳಾರಿ), ರತ್ನಮಾಲಾ ಸವಣೂರು (ಚಿಕ್ಕೋಡಿ) ಡಿ.ಕೆ.ತಾರಾದೇವಿ (ಚಿಕ್ಕಮಗಳೂರು), ಮಾರ್ಗರೆಟ್​ ಆಳ್ವ (ಕೆನರಾ) ಕೇಂದ್ರ ಸಚಿವರಾಗಿದ್ದರು.
ತಳಸಮುದಾಯಕ್ಕೆ ಮನ್ನಣೆದಲಿತ ಎಡಗೈ ಸಮುದಾಯಕ್ಕೆ ಸೇರಿರುವ ನಾರಾಯಣಸ್ವಾಮಿ ಆರ್​ಎಸ್​ಎಸ್​ ಹಿನ್ನೆಲೆಯ ಮುಖಂಡರು. ಸಂಟನೆ ಹಾಗೂ ನಿರಂತರ ಪ್ರವಾಸ ಮಾಡಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರ ಆಯ್ಕೆ, 2023ರ ವಿಧಾನಸಭಾ ಚುನಾವಣೆ ಕಾರಣಕ್ಕೂ ಮಹತ್ವ ಪಡೆದುಕೊಂಡಿದೆ. ಮೊದಲ ಬಾರಿಗೆ ಸಂಸದರಾಗಿರುವ ನಾರಾಯಣಸ್ವಾಮಿ, ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡದ ಇವರಿಗೆ, ಹೊಸ ಜವಾಬ್ದಾರಿ ಅನಿರೀಕ್ಷಿತವೂ ಹೌದು. ಎನ್​ಡಿಎಯ ಮೊದಲ ಅವಧಿಯಲ್ಲಿ ವಿಜಯಪುರ ಸಂಸದ ರಮೇಶ್​ ಜಿಗಜಿಣಗಿಗೆ ಮಂತ್ರಿ ಸ್ಥಾನ ನೀಡಿದ್ದರಿಂದ ದಲಿತ ಎಡಗೈ ಸಮುದಾಯಕ್ಕೆ ಪ್ರಾತಿನಿಧ್ಯತೆ ನೀಡಲಾಗಿತ್ತು. ಈಗ ಆ ಸ್ಥಾನ ನಾರಾಯಣಸ್ವಾಮಿಗೆ ಒಲಿದಿದೆ.
ಗೌಡರದ್ದೇ ಕುತೂಹಲ…ಕೇಂದ್ರ ಅಂಕಿ&ಅಂಶ ಮತ್ತು ರಾಸಾಯನಿಕ ರಸಗೊಬ್ಬರ ಸಚಿವ ಸದಾನಂದ ಗೌಡರಿಂದ ರಾಜೀನಾಮೆ ಪಡೆದುಕೊಂಡಿರುವುದು ಬಿಜೆಪಿ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ನೀಡುವ ಉದ್ದೇಶದಿಂದಲೇ ರಾಜೀನಾಮೆ ಪಡೆದುಕೊಂಡರೇ ಅಥವಾ ಅವರು ಈಚಿಗೆ ಸಿಡಿ ವಿಷಯದಲ್ಲಿ ನ್ಯಾಯಾಲಯದಿಂದ ತಡೆ ತಂದಿದ್ದ ಕಾರಣಕ್ಕಾಗಿ ಹೀಗೆ ಮಾಡಿದರೋ ಎಂಬುದು ಸ್ಪಷ್ಟವಾಗುತ್ತಿಲ್ಲ. ಹಿಂದೆ ರೈಲ್ವೆ ಸಚಿವರಾಗಿದ್ದಾಗ ನಿರೀಕ್ಷಿತ ಮಟ್ಟದಲ್ಲಿ ನಿರ್ವಹಣೆ ತೋರಲಿಲ್ಲ ಎಂಬ ಕಾರಣಕ್ಕಾಗಿ ಅವರನ್ನು ಕಾನೂನು ಇಲಾಖೆಗೆ ವರ್ಗಾವಣೆ ಮಾಡಲಾಗಿತ್ತು. 2019ರಲ್ಲಿ ಐದನೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಅವರು, ಮೋದಿ ಕ್ಯಾಬಿನೆಟ್​ನಲ್ಲಿದ್ದ ಹಿರಿಯ ಮಂತ್ರಿಗಳಲ್ಲೊಬ್ಬರು ಎಂಬ ಖ್ಯಾತಿಗೆ ಪಾತ್ರವಾಗಿದ್ದರು. ಆದರೆ ಎರಡೇ ವರ್ಷದಲ್ಲಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿರುವುದು ವಿಪರ್ಯಾಸ ಎಂದು ಅವರ ಆಪ್ತರು ಬೇಸರ ವ್ಯಕ್ತಪಡಿಸುತ್ತಾರೆ. ಕರೊನಾ ಎರಡನೇ ಅಲೆ ಸಂದರ್ಭದಲ್ಲೂ ಅವರು ಮನೆಯಲ್ಲಿ ಕೂರದೆ ನಿತ್ಯವೂ ಕಚೇರಿಗೆ ತೆರಳಿ ಕೆಲಸ ಮಾಡುತ್ತಿದ್ದರು. ಹೀಗಿದ್ದರೂ, ಡಿವಿಎಸ್​ರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿದ್ದೇಕೆ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ. ಅದೇನೆ ಇರಲಿ, ಒಬ್ಬರ ನಷ್ಟ ಮತ್ತೊಬ್ಬರಿಗೆ ಲಾಭ ಎಂಬಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದಕ್ಷಿಣ ಕನ್ನಡದ ವ್ಯಕ್ತಿಯ ಸ್ಥಾನವನ್ನು ಅದೇ ಜಿಲ್ಲೆ (ಊರು) ಮತ್ತು ಸಮುದಾಯದ (ಒಕ್ಕಲಿಗ ಗೌಡ) ಮಹಿಳಾ ನಾಯಕಿ ತುಂಬಿದ್ದಾರೆ.
ಅಭಿವೃದ್ಧಿಗೆ ಇನ್ನಷ್ಟು ಶಕ್ತಿಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ರಾಜ್ಯದ ಸಂಸದರಾದ ಶೋಭಾ ಕರಂದ್ಲಾಜೆ, ನಾರಾಯಣ ಸ್ವಾಮಿ, ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯ ರಾಜೀವ್​ ಚಂದ್ರಶೇಖರ್​ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಅಭಿನಂದಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶ ಇಂದು ಸರ್ವಾಂಗೀಣ ಅಭಿವೃದ್ದಿಯತ್ತ ಸಾಗುತ್ತಿದೆ. ಹಿರಿಯ ನಾಯಕ ಪ್ರಲ್ಹಾದ ಜೋಷಿ, ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ನಿರ್ಮಲಾ ಸೀತಾರಾಮನ್​ ಜತೆ ಈಗ ರಾಜ್ಯದ 4 ಮಂದಿಗೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ನೀಡಿರುವುದು ಬಿಜೆಪಿ ಕಾರ್ಯಕರ್ತರಿಗೆ ಸಂತಸ ತಂದಿದೆ. ನೂತನ ಸಚಿವರಿಂದ ರಾಜ್ಯದ ಅಭಿವೃದ್ಧಿಗೆ ಇನ್ನಷ್ಟು ಶಕ್ತಿ ದೊರೆಯಲಿದೆ ಎಂದು ಕೋರಿದ್ದಾರೆ.
3 ಬಾರಿ ಸಂಸದ ರಾಜೀವ್​ ಚಂದ್ರಶೇಖರ್​
ಕೇಂದ್ರದ ನೂತನ ಸಚಿವರಾಗಿರುವ ರಾಜೀವ್​ ಚಂದ್ರಶೇಖರ್​ ಮೂರನೇ ಬಾರಿಗೆ ರಾಜ್ಯಸಭಾ ಸದಸ್ಯರಾಗಿದ್ದಾರೆ. ಮೂಲತ@ ಕೇರಳದ ರಾಜೀವ್​, 1964ರ ಮೇ 31ರಂದು ಹುಟ್ಟಿದ್ದು ಗುಜರಾತ್​ನ ಅಹಮದಬಾದ್​ನಲ್ಲಿ. ಮಣಿಪಾಲದ ಎಂಐಟಿಯಲ್ಲಿ ಬಿಇ ವ್ಯಾಸಂಗ. ಆನಂತರ ಚಿಕಾಗೋದಲ್ಲಿ ಕಂಪ್ಯೂಟರ್​ ಸೈನ್ಸ್​ನಲ್ಲಿ ಎಂಎಸ್​ ಗಳಿಸಿದರು. ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿಯೂ ಉನ್ನತ ವಿದ್ಯಾಭ್ಯಾಸ ನಡೆಸಿದರು. ಕ್ಯಾಲಿಪೋರ್ನಿಯಾದಲ್ಲಿ ಇಂಟೆಲ್​ನಲ್ಲಿ ಕೆಲ ಸಮಯ ಹಿರಿಯ ಡಿಸೈನ್​ ಇಂಜಿನಿಯರ್​ ಆಗಿ ಸೇವೆ ಸಲ್ಲಿಸಿ, 1991ರಲ್ಲಿ ಭಾರತಕ್ಕೆ ಮರಳಿ ಬಿಪಿಎಲ್​ ಮೊಬೈಲ್​ ಸಂಸ್ಥೆ ಆರಂಭಿಸಿದರು. ಅನೇಕ ವರ್ಷಗಳ ಕಾಲ ಟೆಲಿಕಾಂ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು. ಜ್ಯುಪಿಟರ್​ ಕ್ಯಾಪಿಟಲ್​ ಸಂಸ್ಥೆ ಸ್ಥಾಪಿಸಿ ಮಾಧ್ಯಮ, ತಂತ್ರಜ್ಞಾನ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದಾರೆ. 2006ರಲ್ಲಿ ಮೊದಲ ಬಾರಿಗೆ ಬಿಜೆಪಿ ಹಾಗೂ ಜೆಡಿಎಸ್​ ಬೆಂಬಲದೊಂದಿಗೆ ಪಕ್ಷೇತರರಾಗಿ ಸಾಹಿತಿ ಯು.ಆರ್​.ಅನಂತಮೂರ್ತಿ ವಿರುದ್ಧ ಜಯಗಳಿಸುವ ಮೂಲಕ ರಾಜ್ಯಸಭೆ ಪ್ರವೇಶಿಸಿದರು. ಆನಂತರ ಬಿಜೆಪಿಯೊಂದಿಗೆ ಗುರುತಿಸಿಕೊಂಡರು. ಬಿಜೆಪಿ ರಾಷ್ಟ್ರೀಯ ವಕ್ತಾರರಾಗಿಯೂ ನೇಮಕವಾಗಿದ್ದರು. ಸಂಸತ್ತಿನಲ್ಲಿ ಅತ್ಯಂತ ಸಕ್ರಿಯರಾಗಿದ್ದ ರಾಜೀವ್​ ಚಂದ್ರಶೇಖರ್​ ಸಂಸತ್ತಿನ ಅನೇಕ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ ದಣ ಭಾರತದ ಸದಸ್ಯ ಎಂಬ ಹೆಗ್ಗಳಿಕೆಯೂ ಅವರ ಪಾಲಿಗಿದೆ. ಅವರ ಕ್ರಿಯಾಶೀಲತೆಯೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ ಮುಖಂಡರ ಗಮನ ಸೆಳೆದಿದೆ. ರಾಜೀವ್​ ಚಂದ್ರಶೇಖರ್​ ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನ ಉಪಾಧ್ಯಕ್ಷರಾಗಿಯೂ ಕೆಲಸ ಮಾಡುತ್ತಿದ್ದಾರೆ.
ಅವಧಿಪೂರ್ವ ಕಾರ್ಯತಂತ್ರ ಕರ್ನಾಟಕಕ್ಕೆ ಅನಿರೀತ ಕೊಡುಗೆ ನೀಡಿದ ಮೋದಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರುಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅನಿರೀತ ಕೊಡುಗೆ ನೀಡಿ, ತರಹೇವಾರಿ ರಾಜಕೀಯ ಲೆಕ್ಕಾಚಾರಗಳಿಗೆ ವೇದಿಕೆ ಕಲ್ಪಿಸಿದ್ದಾರೆ. ಇದೇ ಮೊದಲ ಬಾರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಾಶಸ ಲಭಿಸಿದೆ. ಜತೆಗೆ ಪಕ್ಷದ ವರ್ಚಸ್ಸು ವೃದ್ಧಿ, ರಾಷ್ಟ್ರಮಟ್ಟದಲ್ಲಿ ಎರಡನೇ ಹಂತದ ನಾಯಕತ್ವಕ್ಕೆ ಪ್ರೋತ್ಸಾಹ ಹಾಗೂ ಪ್ರದೇಶ ಮತ್ತು ಜಾತಿವಾರು ಪ್ರಾತಿನಿಧ್ಯದ ನಡುವೆ “ಸಮತೋಲನ’ ಕಾಯ್ದುಕೊಳ್ಳುವ ಕಸರತ್ತು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೋದಿ ಟೀಮ್​ನಲ್ಲಿ ಉತ್ತರ ಪ್ರದೇಶ ಹಾಗೂ ಗುಜರಾತ್​ ಬಳಿಕ ಕರ್ನಾಟಕಕ್ಕೆ ಹೆಚ್ಚಿನ ಪಾಲು ಸಿಕ್ಕಿರುವುದೂ ಗಮನಾರ್ಹ. ಉತ್ತರ ಪ್ರದೇಶ ಮತ್ತು ಗುಜರಾತ್​ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ಹತ್ತಿರದಲ್ಲಿದ್ದರೆ, ಕರ್ನಾಟಕದ ವಿಧಾನಸಭೆ ಅವಧಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷಗಳಿವೆ. ಮುಂಬರುವ ಚುನಾವಣೆಗಳಿಗೆ “ಅವಧಿಪೂರ್ವ’ ಕಾರ್ಯತಂತ್ರದ ಭಾಗವಾಗಿ ರಾಜ್ಯ ಬಯಸಿದ್ದಕ್ಕಿಂತ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹೊಸ ಹುರುಪು ತುಂಬಿ 2023ರ ವಿಧಾನಸಭೆ ಚುನಾವಣಾ ಸಮರಕ್ಕೆ ಈಗಿನಿಂದಲೇ ತಯಾರಿ ನಡೆಸಿದಂತಿದೆ ಎನ್ನುವುದು ರಾಜಕೀಯ ರಂಗದ ಪಡಸಾಲೆಯ ವಿಶ್ಲೇಷಣೆಯಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯದ ಅರ್ಧ ಡಜನ್​ ಪ್ರತಿನಿಧಿಗಳಿದ್ದಾರೆ ಎಂದು ಬಿಂಬಿಸಲಿರುವ ಕಾರಣ ಪಕ್ಷಕ್ಕೆ ರಾಜ್ಯದಲ್ಲಿ ದೊಡ್ಡ ಬಲ ಸಿಗಲಿದೆ. ಬೇರುಮಟ್ಟದಲ್ಲಿ ಪಕ್ಷದ ಸಂಟನೆಗೆ ವರದಾನ, ಶ್ರಮಿಸುತ್ತಿರುವ ಕಾರ್ಯಕರ್ತರ ಉತ್ಸಾಹ ಹೆಚ್ಚಿಸುವುದಕ್ಕೆ ನೆರವಾಗಲಿದೆ.ತಂತ್ರಕ್ಕೆ ಪ್ರತಿತಂತ್ರ:ಕಾಂಗ್ರೆಸ್​ ಒಕ್ಕಲಿಗ ಸಮುದಾಯದ ಪ್ರಬಲ ನಾಯಕ ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟಿದ್ದರೆ, ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯ ಅವರನ್ನೂ ಮುಂದೆ ಮಾಡಿದೆ. ಅಲ್ಲದೆ, ಶೋಷಿತ ಸಮುದಾಯಗಳ ವಿಶ್ವಾಸ ಗಳಿಸಿಕೊಳ್ಳುವ ತಂತ್ರ ಹೂಡಿದೆ. ದಣ ಕರ್ನಾಟಕದ ಒಕ್ಕಲಿಗ ಸಮುದಾಯದ ಮೇಲೆ ಜೆಡಿಎಸ್​ ಹೊಂದಿರುವ ಹಿಡಿತ ಸಡಿಲವಾಗಿಲ್ಲ, ಕಾಲ ಕಾಲಕ್ಕೆ ನವೀಕರಣ ಮಾಡುವುದನ್ನು ಮರೆತಿಲ್ಲ. ಪ್ರತಿಪಕ್ಷಗಳ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ ಹೂಡಿದ್ದು, ಕೇಂದ್ರ ಸಚಿವ ಸಂಪುಟ ಪುನರ್​ ರಚನೆ ದಾಳವಾಗಿ ಬಳಸಿಕೊಂಡಿದೆ. ಪ್ರಬಲ ಹಾಗೂ ನಿರ್ಣಾಯಕ ಸಮುದಾಯಗಳನ್ನು ಸೆಳೆಯುವ ಜತೆಗೆ ವಿಭಾಗವಾರು ಆದ್ಯತೆ ಕಲ್ಪಿಸುವ ಮೂಲಕ ಕರ್ನಾಟಕದ ಎಲ್ಲ ಪ್ರದೇಶಗಳ ಜನ&ಮನ ಸೆಳೆಯುವ ಕಾರ್ಯತಂತ್ರ ರೂಪಿಸಿದೆ.
ಖೂಬಾ ಈಗ ಸೆಂಟ್ರಲ್​ ಮಿನಿಸ್ಟರ್​ಬೀದರ್​: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಕೇಂದ್ರ ಸಂಪುಟದಲ್ಲಿ ಬೀದರ್​ ಲೋಕಸಭಾ ೇತ್ರದ ಸಂಸದರಿಗೆ ಅವಕಾಶ ಸಿಕ್ಕಿರುವುದು ಇದೇ ಮೊದಲು. ಹೀಗಾಗಿ ಜಿಲ್ಲೆಯ ಮೊದಲ ಸೆಂಟ್ರಲ್​ ಮಿನಿಸ್ಟರ್​ ಎಂಬ ಖ್ಯಾತಿಗೆ ಮಲ್ಲಿಕಾರ್ಜುನ ಖೂಬಾ ಭಾಜನರಾಗಿದ್ದಾರೆ. ಭಗವಂತ ಖೂಬಾ ಎರಡನೇ ಬಾರಿ (2014, 2019) ಸಂಸದರಾಗಿದ್ದಾರೆ. ಮೊದಲ ಚುನಾವಣೆಯಲ್ಲಿ ಮಾಜಿ ಸಿಎಂ ದಿ.ಧರ್ಮಸಿಂಗ್​ ಹಾಗೂ ಎರಡನೇ ಬಾರಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಇವರು ಪ್ರಬಲ ಲಿಂಗಾಯತ ಸಮುದಾಯದವರು. 1968ರ ಜೂನ್​ 1ರಂದು ಔರಾದ್​ನಲ್ಲಿ ಜನನ. ದಿ.ಗುರುಬಸಪ್ಪ&ದಿ.ಮಹಾದೇವಿ ತಂದೆ&ತಾಯಿ. ಔರಾದ್​ನಲ್ಲಿ ಪ್ರಾಥಮಿಕ ಶಿಕ್ಷಣ. ಬೀದರ್​ ಕರ್ನಾಟಕ ಕಾಲೇಜಿನಲ್ಲಿ ಪಿಯು ಮುಗಿಸಿ, ತುಮಕೂರಿನ ಸಿದ್ದಗಂಗಾ ಮಠದಲ್ಲಿ ಬಿಇ (ಇಂಡಸ್ಟ್ರೀಯಲ್​ ಪ್ರೊಡಕ್ಶನ್​) ಪೂರೈಸಿದರು. 25 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದಾರೆ.
ಮೋದಿಯೇ ಆದರ್ಶ1 ಸಚಿವ ಸ್ಥಾನದ ನಿರೀೆಯಲ್ಲಿದ್ದಿರಾ?ಮೋದಿ ನೇತೃತ್ವದಲ್ಲಿ 7 ವರ್ಷ ಕೆಲಸ ಮಾಡಿದ್ದು, ಯಾವುದೇ ನಿರೀೆ ಹೊಂದಿದ್ದರೆ ಜವಾಬ್ದಾರಿ ಸಿಗುವುದಿಲ್ಲ. ಸಂಸದನಾಗಿ ಒಳ್ಳೆಯ ಕಾರ್ಯ ಮಾಡಿದ್ದನ್ನು ಮನಗಂಡು ಹೊಸ ಜವಾಬ್ದಾರಿ ಕೊಟ್ಟಿದ್ದಾರೆ. ಜನ ಸೇವೆ ಮಾಡುತ್ತೇನೆ.2 ಪ ಸಂಟನೆ ಮತ್ತು ನೀವು ಪ್ರತಿನಿಧಿಸುವ ಭಾಗದ ಪರಿಣಾಮ ಕಾರಿ ಬದಲಾವಣೆಗೆ ಸಚಿವ ಸ್ಥಾನ ಕೊಟ್ಟಿರಬಹುದು ಅನಿಸುತ್ತದೆಯೇ?ಯಾವ ಮಾನದಂಡದಲ್ಲಿ ಸಚಿವ ಸ್ಥಾನ ಕೊಟ್ಟಿದ್ದಾರೆಂದು ಹೇಳಲು ಇಷ್ಟ ಪಡಲ್ಲ. ನನ್ನ ೇತ್ರದಲ್ಲಿ ಕೇಂದ್ರದ ಯೋಜನೆ ಅನುಷ್ಠಾನ ಮಾಡಿದ್ದು ಜನರಿಗೂ ತೃಪ್ತಿತಂದಿದ್ದು, ನನಗೂ ಸಮಾಧಾನ ತಂದಿದೆ. ಇದು ಮೋದಿ ಅವರಿಗೆ ತಿಳಿದಿದೆ.3 ಸಚಿವ ಸ್ಥಾನಕ್ಕಾಗಿ ದೆಹಲಿಗೆ ಬಂದು ಲಾಬಿ ಮಾಡಿದ್ದಿರಿ ಎಂಬ ಸುದ್ದಿ ಹರಿದಾಡಿತ್ತು, ನಿಜವೇ?(ನಗು…) ಮೋದಿ ಅವರ ಸರ್ಕಾರದಲ್ಲಿ ಲಾಬಿ ಮಾಡಿದ ಉದಾಹರಣೆ ಇದ್ದರೆ ತೋರಿಸಿ. ಲಾಬಿ ಮಾಡಲು ನಾನು ಹೆದರುವುದಿರಲಿ, ಪ್ರತಿ ಬಿಜೆಪಿ ಸಂಸದ ಹೆದರುತ್ತಾನೆ. ಇಲ್ಲಿ ಲಾಬಿ ಪ್ರಶ್ನೆಯೇ ಇಲ್ಲ.4 ಏನಿದೆ ವಿಜನ್​? ಐಡಿಯಾ ಆ್​ ಇಂಡಿಯಾ ಏನಿದೆ?ನನ್ನ ತಲೆಯಲ್ಲಿ ಈ ಬಗ್ಗೆ ವಿಚಾರ ಮಾಡಿಲ್ಲ. ಎಲ್ಲ ಆದರ್ಶ ಮೋದಿ. ಅವರು ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುವೆ.
ಮೊದಲ ವಲಸೆಯಲ್ಲಿ ಅದೃಷ್ಟಚಿತ್ರದುರ್ಗ: ಬೆಂಗಳೂರಿನ ಆನೇಕಲ್​ನಿಂದ ಚಿತ್ರದುರ್ಗಕ್ಕೆ ರಾಜಕೀಯ ವಲಸೆ ಬಂದು ಮೊದಲ ಯತ್ನದಲ್ಲೇ ಸಂಸತ್​ ಪ್ರವೇಶಿಸಿದ್ದ ಎ.ನಾರಾಯಣಸ್ವಾಮಿ, ಇದೀಗ ಮೋದಿ ಸಂಪುಟದ ಸದಸ್ಯರು. ಆ ಮೂಲಕ ಚಿತ್ರದುರ್ಗ ಲೋಕಸಭೆ ಕ್ಷೇತ್ರಕ್ಕೆ 49 ವರ್ಷಗಳ ಬಳಿಕ ಕೇಂದ್ರದಲ್ಲಿ ಸಚಿವಗಿರಿ ಸಿಕ್ಕಂತಾಗಿದೆ. ಈ ಹಿಂದೆ ಚಿತ್ರದುರ್ಗ&ದಾವಣಗೆರೆ ಅವಿಭಜಿತ ಜಿಲ್ಲೆ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ದಾವಣಗೆರೆ ಮೂಲದ ಕೊಂಡಜ್ಜಿ ಬಸಪ್ಪನವರು 1972& 1974ರವರೆಗೆ ಆರೋಗ್ಯ ಸಚಿವರಾಗಿದ್ದರು. ಆಬಳಿಕ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಕಳೆದ ಅವಧಿಯ ಮೋದಿ ಸಂಪುಟದಲ್ಲಿ ವಿಮಾನಯಾನ ಸಚಿವರಾಗಿದ್ದರು. ಈಗ ಚಿತ್ರದುರ್ಗಕ್ಕೆ ಅವಕಾಶ ಸಿಕ್ಕಿದೆ. ವಿದ್ಯಾರ್ಥಿ ದೆಸೆಯಿಂದಲೇ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ನಾರಾಯಣಸ್ವಾಮಿ 1996ರಲ್ಲಿ ಆನೇಕಲ್​ ಪುರಸಭೆ ಸದಸ್ಯರಾಗುವ ಮೂಲಕ ಸಕ್ರಿಯ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂದ ನಿಕಟ ಸಂಪರ್ಕದಲ್ಲಿರುವ ಪಕ್ಷನಿಷ್ಠ ನಾರಾಯಣಸ್ವಾಮಿ 1997ರಿಂದ 2008ರವರೆಗೆ ನಾಲ್ಕು ಬಾರಿ ನಿರಂತರವಾಗಿ ವಿಧಾನಸಭೆಗೆ ಆಯ್ಕೆಯಾದರು. ಅಬ್ಬಯ್ಯ ಹಾಗೂ ತಿಮ್ಮಕ್ಕ ದಂಪತಿ ಪುತ್ರ ನಾರಾಯಣ ಸ್ವಾಮಿ ಆನೇಕಲ್​ನಲ್ಲಿ 1957ರ ಮೇ 16ರಂದು ಜನಿಸಿದ್ದರು. ಬಿಎ ಪದವಿ ಪಡೆದಿರುವ ಇವರು ರಾಜಕೀಯದ ಜತೆಗೆ ಕೃಷಿ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನಸು ಕೂಡ ಕಂಡಿರಲಿಲ್ಲ1 ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ?ನಾನು ಬಿಜೆಪಿಗೆ ಸೇರ್ಪಡೆಯಾದಾಗ ಚುನಾಯಿತ ಸದಸ್ಯನಾಗುವ ನಿರೀೆ ಇರಲಿಲ್ಲ. ಇಡೀ ದೇಶ ಕಂಡ ಸಂತ ಪ್ರಧಾನಿ ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿರುವುದು ಕನಸೇ ಎನಿಸುತ್ತಿದೆ.2 ಎಂದಾದರೂ ಕನಸು ಕಂಡಿದ್ದಿರಾ?ಸಂಸದ ಆಗುತ್ತೇನೆಂದು ಕೊಂಡಿರಲಿಲ್ಲ. ಈಗಲೂ ಕನಸು ಅನಿಸುತ್ತಿದೆ. ಅವಕಾಶ ಸಿಕ್ಕಿದೆ, ಸಮಾಜ ಸೇವಕನಾಗಿ ಸಮಾಜದ ಬಗ್ಗೆ ಕೆಲಸ ಮಾಡಬೇಕು. ಯಾವುದೇ ಜವಾಬ್ದಾರಿ ಪರಿವರ್ತನೆಗೆ ಸೂಕ್ತ ಅವಕಾಶ ಆಗುತ್ತದೆ ಎಂದು ಭಾವಿಸಿದ್ದೇನೆ.3 ರಾಜ್ಯಪಾಲರ ನೇಮಕ, ಸಚಿವ ಸ್ಥಾನಕ್ಕೆ ತಳಸಮುದಾಯದವರನ್ನೇ ಹೆಚ್ಚು ಆಯ್ಕೆ ಮಾಡಿದ್ದು ತಂತ್ರಗಾರಿಕೆಯೇ?ಹಿಂದೆ ಬಿಜೆಪಿ ಬ್ರಾಹ್ಮಣರ ಪ, ಮೇಲ್ವರ್ಗದವರ ಪ, ಬನಿಯಾಗಳ ಪ ಎನ್ನುತ್ತಿದ್ದರು. ಹಿಂದುಳಿದ ಸಮಾಜಕ್ಕೆ ಸೇರಿದ ವ್ಯಕ್ತಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ್ದು ದೇಶದ ಇತಿಹಾಸದಲ್ಲೇ ಮೊದಲು. ಹಿಂದುಳಿದ ಮತ್ತು ಪರಿಶಿಷ್ಟರಿಗೆ ಹೆಚ್ಚು ಅವಕಾಶ ಮಾಡಿಕೊಡುವ ಮೂಲಕ ಅವರ ಏಳ್ಗೆಯ ಉದ್ದೇಶವನ್ನು ದೇಶಕ್ಕೆ ಸಾರಲಾಗಿದೆ. ಬೇರೆ ರಾಜಕೀಯ ಪಗಳಿಗೆ ಇದು ಮಾರ್ಗದರ್ಶನ, ದಿಕ್ಸೂಚಿಯೂ ಹೌದು.4 ನೀವು ಸಚಿವರಾಗುವ ತೀರ್ಮಾನದ ಹಿಂದೆ ಬಿ.ಎಲ್​.ಸಂತೋಷ್​ ಪಾತ್ರ…?ಹೌದು. ಸಂತೋಷ್​ಜೀ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪದ ಪ್ರಮುಖ ಜವಾಬ್ದಾರಿ ಹೊಂದಿ ಸಂಟನೆಯ ನಾಡಿ ಮಿಡಿತ ಗೊತ್ತಿದೆ. ಯಾರಿಗೆ ಅವಕಾಶ ಮಾಡಿಕೊಡಬೇಕೆಂದು ಗೊತ್ತಿದೆ.5. ನಿಮ್ಮ ಮುಂದಿನ ಸವಾಲು ಏನಿದೆ?ಜನ ಸೇವೆಗೆ ಪೂರ್ಣ ಸಮಯ ಮುಡಿಪು. ಭದ್ರಾ ಯೋಜನೆ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರದಲ್ಲಿ ಅನುಮತಿ ಪಡೆಯಬೇಕು, ದಲಿತ ಸಮಾಜ ನನ್ನ ಹಿಂದೆ ಇದೆ. ಎಡಗೈ ಸಮಾಜ ನನ್ನ ಮೇಲೆ ನಂಬಿಕೆ ಇಟ್ಟಿದೆ. ಎಲ್ಲ ರಾಜ್ಯಗಳ ಸಮಸ್ಯೆಗಳಿಗೆ ಕಿವಿ ಕೊಡುವುದು ನನ್ನ ಜವಾಬ್ದಾರಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − one =
Remember me
