ಪಲಕ್ಕಾಡ್​:ನಾಲ್ಕು ಕಾಲುಳ್ಳ ಕೋಳಿ ಮರಿ ಇದೀಗ ಕೇರಳದ ಪಲಕ್ಕಾಡ್​ನಲ್ಲಿ ಎಲ್ಲರ ಗಮನ ಸೆಳೆದಿದೆ. ವಿಶೇಷ ಕೋಳಿ ಮರಿಯು ವದವನ್ನೂರ್​ ನಿವಾಸಿ ಫಾರೂಕ್​ ಎಂಬುವರ ಮನೆಯಲ್ಲಿ ಬೆಳೆಯುತ್ತಿದೆ.
ಕೋಳಿ ಮರಿ ನಾಲ್ಕು ಕಾಲು ಹೊಂದಿದ್ದರು ಸಹ ನಡೆಯುವುದು ಮಾತ್ರ ಎರಡು ಕಾಲಿನಲ್ಲಿ. ನಾಲ್ಕು ಕಾಲಿನ ಮರಿಯು ಡಿಸೆಂಬರ್ 31ರಂದು 8 ಸಾಮಾನ್ಯ ಮರಿಗಳೊಂದಿಗೆ ಮೊಟ್ಟೆಯೊಡೆಯಿತು. ಹೊಸ ವರ್ಷದ ಹೊಸ್ತಿಲಲ್ಲಿ ಜನಿಸಿರುವ ನಾಲ್ಕು ಕಾಲಿನ ಕೋಳಿ ಮರಿಯನ್ನು ಫಾರೂಕ್​ ದಂಪತಿ ಹೊಸ ವರ್ಷ ಉಡುಗೊರೆ ಅಂದುಕೊಂಡಿದ್ದಾರೆ.
ಇದನ್ನೂ ಓದಿ:ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!
ಫಾರೂಕ್​ ಅವರು ಐದು ವರ್ಷ ಸೌದಿ ಅರೇಬಿಯಾದ ರಿಯಾದ್​ನಲ್ಲಿ ಮೆಕಾನಿಕ್​ ಆಗಿ ಕೆಲಸ ಮಾಡಿದ್ದರು. ಇದೀಗ ಪಲಕ್ಕಾಡ್​ನಲ್ಲಿ ಆಟೋ ಡ್ರೈವರ್​ ಆಗಿದ್ದಾರೆ. ಅಲ್ಲದೆ, ಕೋಳಿ ಉದ್ಯಮವನ್ನು ನಡೆಸುತ್ತಿದ್ದಾರೆ. ಸದ್ಯ ಫಾರೂಕ್​ ಅವರು ಫಾರಂನಲ್ಲಿ 90 ಕೋಳಿಗಳಿವೆ.
ಫಾರೂಕ್​ ಅವರ ಮಕ್ಕಳಾದ ಫರ್ನಿಥಾ, ಫಾತಿಮಾ ಮತ್ತು ಫಹಾದ್​ ಕೋಳಿ ಮರಿಯ ಪಾಲನೆ, ಪೋಷಣೆ ಮಾಡುತ್ತಾರೆ. ಮರಿ ಬೆಳೆದು ದೊಡ್ಡದಾದ ಮೇಲೆ ಸಾಯಿಸುವುದಿಲ್ಲ ಮತ್ತು ಯಾರಿಗೂ ಮಾರಾಟವನ್ನು ಮಾಡುವುದಿಲ್ಲ ಎನ್ನುತ್ತಾರೆ ಫಾರೂಕ್​.(ಏಜೆನ್ಸೀಸ್​)
ಇದನ್ನೂ ಓದಿರಿ:ಗಾಂಜಾ ವ್ಯಸನಿಯ ಪ್ರೀತಿಯ ಬಲೆಯಲ್ಲಿ ಬಿದ್ದವಳ ದುರಂತ ಅಂತ್ಯ: ತಾಯಿ ಬೆನ್ನಲ್ಲೆ ಯುವತಿಯೂ ಆತ್ಮಹತ್ಯೆ
ಓಟಿಟಿ ಮೇಲೆ ದರ್ಶನ್ ಗರಂ:​ ಅಂಬಾನಿ ವಿರುದ್ಧ ಗಂಭೀರ ಆರೋಪ ಮಾಡಿದ ದಚ್ಚು!

VIDEO: ಬಾಲಾಕೋಟ್​ ಏರ್​ಸ್ಟ್ರೈಕ್​ ಸಾಕ್ಷಿ ಕೇಳಿದವರಿಗೆ ಪಾಕ್​ ನೀಡಿದೆ ಸ್ಫೋಟಕ ಮಾಹಿತಿ- ನೀವೂ ಕೇಳಿ…

ಕಗ್ಗತ್ತಲಿನಲ್ಲಿ ಪಾಕಿಸ್ತಾನ: ಜನಜೀವನ ಹರೋಹರ- ಅಧಿಕಾರಿಗಳ ಹೆಣಗಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
